Friday, September 20, 2024
ಮೂಡಬಿದಿರೆ

ಎಕ್ಸಲೆಂಟ್ ಮೂಡುಬಿದಿರೆ ಆವರಣದಲ್ಲಿ ನೂತನ ಭೋಜನ ಶಾಲೆ ನಿರ್ಮಾಣ- ಕಹಳೆ ನ್ಯೂಸ್

ಮೂಡುಬಿದಿರೆ: ಜೈನ ಕಾಶಿ ಈಗ ಶಿಕ್ಷಣ ಕಾಶಿಯಾಗಿ ಗುರುತಿಸಿಕೊಳ್ಳುವಲ್ಲಿ ಮೂಡುಬಿದಿರೆ ಪರಿಸರದಲ್ಲಿ ಎಕ್ಸಲೆಂಟ್ ವಿದ್ಯಾಸಂಸ್ಥೆ ಮಹತ್ತರ ಕೊಡುಗೆಯನ್ನು ಸಲ್ಲಿಸುತ್ತಿದೆ. ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸುವ ವಿದ್ಯಾರ್ಥಿಗಳ ಮತ್ತು ಪೋಷಕರ ಅಗತ್ಯತೆ ಮತ್ತು ಅನುಕೂಲತೆಗಳಿಗೆ ಸ್ಪಂದಿಸುತ್ತ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಸಂಸ್ಥೆಯ ಆವರಣದಲ್ಲಿ ಇದೀಗ ಸುಸಜ್ಜಿತವಾದ ನೂತನ ಭೋಜನ ಶಾಲೆ ನಿರ್ಮಾಣಗೊಂಡು ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್ ಮತ್ತು ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್‍ರವರ ಬಹುದಿನದ ಕನಸು ಸಾಕಾರಗೊಂಡಿದೆ. ಇತ್ತೀಚೆಗಷ್ಟೇ ಮೂಡುಬಿದಿರೆ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ತೋರಣ ಪೂಜೆ, ವಾಸ್ತು ಪೂಜೆಗಳನ್ನೊಳಗೊಂಡಂತೆ ಧಾರ್ಮಿಕ ವಿಧಿ ವಿಧಾನಗಳು ಸಂಪನ್ನಗೊಂಡು ಲೋಕಾರ್ಪಣೆಗೆ ಸಿದ್ದಗೊಂಡಿದೆ. ಸ್ವಾಮೀಜಿಗಳು ಜೈನ ದಂಪತಿಗಳನ್ನು ಆಶೀರ್ವದಿಸಿ ಸಂಸ್ಥೆಯ ಸರ್ವಾಂಗೀಣ ಅಭಿವೃದ್ಧಿಗೆ ಶುಭ ಕೋರಿದರು.

ಜಾಹೀರಾತು

ಜಾಹೀರಾತು
ಜಾಹೀರಾತು

ಜಾಹೀರಾತು