Recent Posts

Friday, November 22, 2024
ವಾಣಿಜ್ಯ

ಪ್ರಗತಿ ಸ್ಟಡಿ ಸೆಂಟರಿನ 2018-19 ಶೈಕ್ಷಣಿಕ ವರುಷದ ತರಗತಿಗಳು ಮೇ 18ರಂದು ಆರಂಭ – ಕಹಳೆ ನ್ಯೂಸ್

ಪುತ್ತೂರಿನ ಹೃದಯ ಭಾಗದ ಧರ್ಮಸ್ಥಳ ಬಿಲ್ಡಿಂಗ್‍ನಲ್ಲಿ ಕಳೆದ 10 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಪ್ರಗತಿ ಎಜ್ಯುಕೇಶನಲ್ ಫೌಂಡೇಶನ್ (ರಿ)ಪುತ್ತೂರು ಇದರ ಅಧೀನಕ್ಕೆ ಒಳಪಟ್ಟಿರುವ ಪ್ರಗತಿ ಸ್ಟಡಿ ಸೆಂಟರಿನ 11ನೇ ವರುಷದ ಟ್ಯುಟೋರಿಯಲ್ ಬ್ಯಾಚ್ ಮೇ 18 ಗುರುವಾರದಂದು ಪ್ರಾರಂಭಗೊಳ್ಳಲಿದೆ.

ತನ್ನ ವಿವಿಧ ಮಾದರಿಯ ವೈಶಿಷ್ಟ್ಯಗಳ ಛಾಪನ್ನು ಮೂಡಿಸಿದ ಪ್ರಗತಿ ಸ್ಟಡಿ ಸೆಂಟರ್‍ನ ಅತ್ಯದ್ಭುತ ಫಲಿತಾಂಶವು ವಿವಿಧ ರಾಜ್ಯ, ಜಿಲ್ಲೆಗಳಿಂದ ಸೋತು ಬಂದ ವಿದ್ಯಾರ್ಥಿಗಳಿಗೆ ಆಶಾಕಿರಣ ಎಂಬಂತೆ ಭರವಸೆಯನ್ನು ತುಂಬುತ್ತಾ ವ್ಯಾಸಂಗಕ್ಕೆ ಅನುವು ಮಾಡಿಕೊಟ್ಟು, ಪ್ರತಿಭೆ ಮತ್ತು ಸಾಮಾಥ್ರ್ಯಗಳನ್ನು ಅರಿತು, ವಿದ್ಯಾರ್ಥಿಗಳನ್ನು ಮುನ್ನಡೆಸುತ್ತಿದೆ. 6,7,8 ಮತ್ತು 9ನೇ ತರಗತಿಯಲ್ಲಿ ಮೊಟಕುಗೊಳಿಸಿದ/ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ನೇರವಾಗಿ 10ನೇ ತರಗತಿಗೆ ದಾಖಲಾತಿ ಪಡೆಯಬಹುದಾಗಿದೆ. 10ನೇ ತರಗತಿಯಲ್ಲಿ ಉತ್ತೀರ್ಣಗೊಂಡ ಹಾಗೂ ಪ್ರಥಮ ಪಿ.ಯು.ಸಿಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ನೇರವಾಗಿ ದ್ವಿತೀಯ ಪಿ.ಯು.ಸಿ ವಿಜ್ಞಾನ, ವಾಣಿಜ್ಯ, ಮತ್ತು ಕಲಾ ವಿಭಾಗದಲ್ಲಿ ದಾಖಲಾತಿ ಪಡೆಯಲು ಅರ್ಹರಾಗಿರುತ್ತಾರೆ. ದಾಖಲಾತಿಗಾಗಿ ವಿದ್ಯಾರ್ಥಿಗಳು ಈ ಕೂಡಲೇ ಸಂಸ್ಥೆಯನ್ನು ನೇರವಾಗಿ ಸಂಪರ್ಕಿಸಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು