Recent Posts

Sunday, January 19, 2025
ಸುಬ್ರಹ್ಮಣ್ಯ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯ, ಐಕ್ಯೂಎಸಿ ಹಾಗೂ ಹಿಂದಿ ವಿಭಾಗದ ವತಿಯಿಂದ ‘ಹಿಂದಿ ದಿವಸ’ ಆಚರಣೆ – ಕಹಳೆ ನ್ಯೂಸ್

ಸುಬ್ರಹ್ಮಣ್ಯ :ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯ, ಐಕ್ಯೂಎಸಿ ಹಾಗೂ ಹಿಂದಿ ವಿಭಾಗದ ವತಿಯಿಂದ ‘ಹಿಂದಿ ದಿವಸ’ವನ್ನು ಆಚರಿಸಲಾಯಿತು. ನೆಲ್ಯಾಡಿ ಬೆಥನಿ ಪ್ರಥಮ ದರ್ಜೆ ಕಾಲೇಜಿನ ಹಿಂದಿ ಉಪನ್ಯಾಸಕಿ ಶ್ರೀಮತಿ ಪೂರ್ಣಿಮಾ ಬಿ. ಶೆಣೈ ಯವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಗೋವಿಂದ ಎನ್.ಎಸ್. ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಐಕ್ಯೂಎಸಿ ಸಂಯೋಜಕರು ಡಾ. ಪ್ರಸಾದ ಎನ್. ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಹಿಂದಿ ವಿಭಾಗದ ವಿದ್ಯಾರ್ಥಿಗಳಿಗೆ ‘ಸ್ವಾಭಿಮಾನ ಭಾರತ್’ ಎಂಬ ವಿಷಯದ ಕುರಿತು ಬರೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಸುಶ್ಮಿತಾ ಕೆ. ದ್ವಿತೀಯ ಬಿಕಾಂ, ಪುನೀತಾ ಕೆ .ದ್ವಿತೀಯ ಬಿಕಾಂ, ಧನ್ಯ ಪ್ರಥಮ ಬಿಕಾಂ, ಇವರುಗಳಿಗೆ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನವನ್ನು ನೀಡಲಾಯಿತು. ಮಹಾವಿದ್ಯಾಲಯದ ಹಿಂದಿ ಉಪನ್ಯಾಸಕರು ಹಾಗೂ ಕಾರ್ಯಕ್ರಮದ ಸಂಯೋಜಕರಾದ ಶ್ರೀ ಕೃಷ್ಣ ಡಿ ಲಮಾಣಿ ರವರು ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರವನ್ನು ನಿರೂಪಿಸಿದರು. ಹಾಗೂ ಮಹಾವಿದ್ಯಾಲಯದ ವಿದ್ಯಾರ್ಥಿಯಾದ ಸನತ್ ಎಲ್ಲರನ್ನೂ ವಂದಿಸಿದರು.