ದೇವಾಲಯ ಧ್ವಂಸದ ನೀಚ ಕೃತ್ಯ | ” ಹಿಂದುತ್ವದ ಆಧಾರದಲ್ಲಿ ಅಧಿಕಾರಕ್ಕೆ ಬಂದ ನಿಮ್ಮ ಆಳ್ವಿಕೆಯಲ್ಲೂ ಇಂತಹ ಹಿಂದು ವಿರೋಧಿ ನೀಚ ಕೃತ್ಯ ನಡೆಯುತ್ತದೆ ಎಂದಾದರೆ ಹಿಂದು ಸಮಾಜ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ ” – ಬಿಜೆಪಿ ಸರಕಾರದ ವಿರುದ್ಧ ಹಿಂ.ಜಾ.ವೇ. ಮುಖಂಡ ರಾಧಾಕೃಷ್ಣ ಅಡ್ಯಂತ್ತಾಯ ಆಕ್ರೋಶ – ಕಹಳೆ ನ್ಯೂಸ್
ಮೈಸೂರಿನ ನಂಜನಗೂಡಿನಲ್ಲಿ ದೇವಾಲಯವನ್ನು ಧ್ವಂಸಗೊಳಿಸಿದ್ದನ್ನು ಅತ್ಯಂತ ಕಟುವಾಗಿ ಖಂಡಿಸುತ್ತೇನೆ.
ಒಬ್ಬನೇ ದೇವರನ್ನು ನೂರಾರು ರೂಪನಾಮಗಳಲ್ಲಿ ಆರಾಧಿಸುವ ಹಿಂದುಗಳ ಅತ್ಯಂತ ಪವಿತ್ರ ಶ್ರದ್ಧಾಕೇಂದ್ರ ದೇವಾಲಯಗಳು. ಹಿಂದು ಧರ್ಮ, ಸಂಸ್ಕೃತಿ, ಕಲೆ, ಸಾಹಿತ್ಯ, ಸಂಸ್ಕಾರ, ಸಂಘಟನೆಗಳ ಶಕ್ತಿಕೇಂದ್ರಗಳು ಹಿಂದು ದೇವಸ್ಥಾನಗಳು. ಕೋಟ್ಯಂತರ ಹಿಂದುಗಳ ಆಧ್ಯಾತ್ಮ ಮಂದಿರ, ಜ್ಞಾನದೇಗುಲ, ಭಕ್ತಿಯ ಕೇಂದ್ರ, ನೆಮ್ಮದಿಯ ತಾಣವದು.
ಎರಡು ಕಾಲು ಸಾವಿರ ವರ್ಷಗಳ ಕಾಲ ವಿದೇಶಿ ಆಕ್ರಮಣಕಾರಿಗಳ ವಿರುದ್ಧ ಹೋರಾಡಿ, ಹಿಂದು ಸಮಾಜವನ್ನು – ರಾಷ್ಟ್ರವನ್ನು ರಕ್ಷಿಸಲು ಸಾಧ್ಯವಾದುದು ಇದೇ ದೇವಾಲಯಗಳ ಸಾನಿಧ್ಯದಿಂದ.
ಹಿಂದು ಸಮಾಜದ- ಭಾರತದ ಉಳಿವಿಗೆ ಕಾರಣವಾದ ದೇವಮಂದಿರಗಳನ್ನು ಧ್ವಂಸ ಮಾಡುವುದು ಅಕ್ಷಮ್ಯ ಅಪರಾಧ. ಇಂತಹ ನೀಚಕೃತ್ಯ ನಂಜನಗೂಡಿನಲ್ಲಿ ನಡೆದಿದೆ.
ಈ ಹೇಯ ಕೃತ್ಯ ನಡೆಸಿದ ದೇವವಿರೋಧಿ ಮಾನಸಿಕತೆಯ ದುಷ್ಟ ಅಧಿಕಾರಿಗಳನ್ನು ವಜಾಗೊಳಿಸಿ, ದೇವಸ್ಥಾನದ ಪುನರ್ನಿರ್ಮಾಣ ಮಾಡಿ, ಮಾಡಿದ ಪಾಪಕ್ಕೆ ಕರ್ನಾಟಕ ಸರಕಾರ ಪ್ರಾಯಶ್ಚಿತ ಕೈಗೊಳ್ಳಲಿ. ಇಲ್ಲವಾದಲ್ಲಿ ಹಿಂದು ಸಮಾಜದ ಶಾಪಕ್ಕೆ, ಆಕ್ರೋಶಕ್ಕೆ ನೀವು ಧೂಳಿಪಟವಾಗುತ್ತೀರಿ.
ದೇವಸ್ಥಾನ ಧ್ವಂಸ ಮಾಡಲು ಕಾರಣರಾದವರೆಲ್ಲರಿಗೂ ಅದರ ಪಾಪ ತಟ್ಟುತ್ತೆ. ಸುಮ್ಮನೆ ‘ಕೋರ್ಟ್ ಆದೇಶ’ ಎಂದು ಹೇಳುತ್ತಾ ಜನಗಳಿಗೆ ಮಂಕುಬೂದಿ ಎರಚಬೇಡಿ.
ಸ್ವಾತಂತ್ರ್ಯ ಪೂರ್ವದಲ್ಲಿ ಆಕ್ರಮಕರಿಂದ ಮೂವತ್ತು ಸಾವಿರ ದೇವ ಮಂದಿರಗಳು ಧ್ವಂಸವಾಗಿದೆ. ಲಕ್ಷಾಂತರ ರಾಷ್ಟ್ರಭಕ್ತರ ಹೋರಾಟ-ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಸ್ವತಂತ್ರ ಭಾರತದಲ್ಲೂ ಡೋಂಗಿ ಸೆಕ್ಯುಲರ್ ಆಡಳಿತದಡಿಯಲ್ಲಿ, ಮತಾಂಧರಿಂದ ನೂರಾರು ದೇಗುಲಗಳು ಧ್ವಂಸಗೊಂಡಿವೆ.
ಹಿಂದುತ್ವದ ಆಧಾರದಲ್ಲಿ ಅಧಿಕಾರಕ್ಕೆ ಬಂದ ನಿಮ್ಮ ಆಳ್ವಿಕೆಯಲ್ಲೂ ಇಂತಹ ಹಿಂದು ವಿರೋಧಿ ನೀಚ ಕೃತ್ಯ ನಡೆಯುತ್ತದೆ ಎಂದಾದರೆ ಹಿಂದು ಸಮಾಜ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ.
ನೀವು ಘೋರಿ ಮಹಮ್ಮದ್, ಘಜನಿ ಮಹಮ್ಮದ್, ಅಲ್ಲಾವುದ್ದೀನ್ ಖಿಲ್ಜಿ, ಭಕ್ತಿಯಾರ್ ಖಿಲ್ಜಿ, ಬಾಬರ್, ಔರಂಗಜೇಬ್, ಮಹಮ್ಮದ್ ಬಿನ್ ತುಘಲಕ್, ಟಿಪ್ಪುಗಳಾದರೆ, ಹಿಂದು ಸಮಾಜ ಪೃಥ್ವಿರಾಜ ಚೌಹಾಣ್, ತೇಗಬಹದ್ದೂರ್, ಗುರು ಗೋವಿಂದ ಸಿಂಹ, ರಾಣಾ ಪ್ರತಾಪ್, ಶಿವಾಜಿ, ಸಾವರ್ಕರ್, ಆಜಾದ್, ಲಕ್ಷ್ಮೀಬಾಯಿ, ದುರ್ಗಾವತಿ, ಕರ್ಣಾವತಿಯರಾಗಲು, ಸಿದ್ಧ ಎಂಬ ಎಚ್ಚರಿಕೆಯನ್ನು ನೀಡಬಯಸುತ್ತೇವೆ.
ನಿಮ್ಮನ್ನು ಚುನಾವಣೆಯಲ್ಲಿ ಗೆಲ್ಲಿಸಿ ಕಳುಹಿಸಿದ್ದು ಡೋಂಗಿ ಸೆಕ್ಯುಲರ್ ವಾದಿಗಳಂತೆ ಹಿಂದು ಸಮಾಜಕ್ಕೆ ದ್ರೋಹವೆಸಗಲು ಅಲ್ಲ. ಹಿಂದು ಧರ್ಮ ಸಂಸ್ಕೃತಿ, ಮೌಲ್ಯ, ಪರಂಪರೆ, ಮಾತೆಯರ, ಗೋಮಾತೆಯ ರಕ್ಷಣೆಗಾಗಿ; ಅಧಿಕಾರದಲ್ಲಿ ಕುಳಿತು ಮಜಾ ಉಡಾಯಿಸಲಿಕ್ಕಲ್ಲ ಎಂಬುದನ್ನು ನೆನಪು ಮಾಡುತ್ತಿದ್ದೇವೆ ಎಂದು ಹಿಂದು ಜಾಗರಣ ವೇದಿಕೆ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.