Wednesday, January 22, 2025
ಸುದ್ದಿ

ಸುಳ್ಳು ದಾಖಲೆ ಸೃಷ್ಟಿಸಿ ಗೋಸಾಗಾಟ, ಕೇಸ್ ದಾಖಲಿಸಲು ಪೊಲೀಸರು ಹಿಂದೇಟು… ಖಡಕ್ ವಾರ್ನಿಂಗ್ ನೀಡಿದ ಭಜರಂಗದಳ !- ಕಹಳೆ ನ್ಯೂಸ್

ಮುಡಿಪು: ಮುಡಿಪು ಗ್ರಾಮದ ಮರೀಕಳದಲ್ಲಿ ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದ ಪಿಕ್‍ಅಪ್‍ನ್ನು ಬಜರಂಗದಳದ ಕಾರ್ಯಕರ್ತರ ಮಾಹಿತಿ ಮೇರೆಗೆ ಕೋಣಾಜೆಯ ಪೊಲೀಸರು ತಡೆದಿದ್ದಾರೆ. ಈ ಸಂದರ್ಭದಲ್ಲಿ ಎರಡು ಗೋವುಗಳನ್ನು ರಕ್ಷಿಸಿದ್ದು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಈ ಕುರಿತಾಗಿ ಪೊಲೀಸರು ಪ್ರಕರಣ ದಾಖಲಿಸಲು ಹಿಂದೇಟು ಹಾಕುತ್ತಿರುವುದಕ್ಕೆ ಬಜರಂಗದಳ ಆಕ್ರೋಶ ವ್ಯಕ್ತಪಡಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಮರೀಕಳದಲ್ಲಿ ಕಾನೂನು ಬಾಹಿರವಾಗಿ ದನಗಳನ್ನು ವಧೆಗೋಸ್ಕರ KA 18 8539 ಪಿಕ್‍ಅಪ್ ವಾಹನದಲ್ಲಿ ನಿರಂತರವಾಗಿ ಸಾಗಿಸಲಾಗುತ್ತಿತ್ತು. ಈ ಪಿಕ್‍ಅಪ್‍ನ್ನು ಪೊಲೀಸರು ಇಂದು ಬೆಳಗ್ಗೆ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದರೂ, ಕೇಸ್ ದಾಖಲಿಸಲಿಲ್ಲ. ಈ ಕುರಿತಾಗಿ ಆಕ್ರೋಶಗೊಂಡಿರುವ ಬಜರಂಗದಳದ ಕಾರ್ಯಕರ್ತರು ತಕ್ಷಣ ನೂತನ ಕರ್ನಾಟಕ ಜಾನುವಾರು ಹತ್ಯೆ ನಿಷೇಧ ಹಾಗು ಸಂರಕ್ಷಣಾ ಕಾಯಿದೆ 2020ರ ಪ್ರಕಾರ ಕೇಸು ದಾಖಲಿಸಿ, ವಾಹನ ಮುಟ್ಟುಗೋಲು ಹಾಕಲು ಆಗ್ರಹಿಸಿದ್ದಾರೆ. ಜೊತೆಗೆ ಒಂದು ವೇಳೆ ಕೇಸು ದಾಖಲಿಸದೆ ವಾಹನವನ್ನು, ಆರೋಪಿಗಳನ್ನು ಬಿಟ್ಟದ್ದೇ ಆದರೆ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಗೋರಕ್ಷಕ ಪ್ರಮುಖ್ ಪವಿತ್ರ್ ಕೆರೆಬೈಲ್ ಎಚ್ಚರಿಕೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು