Recent Posts

Monday, January 20, 2025
ಪುತ್ತೂರು

ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ‘ಇಂಜಿನಿಯರ್ಸ್ ಡೇ’ ಆಚರಣೆ – ಕಹಳೆ ನ್ಯೂಸ್

ಪುತ್ತೂರು: ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಬುಧವಾರ ನಡೆದ ‘ಇಂಜಿನಿಯರ್ಸ್ ಡೇ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಪ್ರಸನ್ನ ಭಟ್ ಇಂಜಿನಿಯರಿಂಗ್ ಅಂದರೆ ವಿಜ್ಞಾನ ಮತ್ತು ಸಾಮಾನ್ಯ ಜ್ಞಾನಗಳ ಸಮ್ಮಿಲನ. ನಮ್ಮ ಪೂರ್ವಜರು, ಋಷಿಮುನಿಗಳು ನಮಗೆ ನೀಡಿರುವಂತಹ ವೇದ, ಉಪನಿಷದ್‍ಗಳು ಹಲವಾರು ವೈಜ್ಞಾನಿಕ ಆವಿಷ್ಕಾರದ ಮೂಲಗಳಾಗಿವೆ. ನಮ್ಮ ನಿತ್ಯ ಜೀವನದಲ್ಲಿ ಬಳಸುವ ಎಲ್ಲಾ ವಸ್ತುಗಳ ಹಿಂದೆ ಇಂಜಿನಿಯರ್‍ಗಳ ಕೊಡುಗೆ ಇದೆ. ಶಿಸ್ತುಬದ್ಧ ಜೀವನ ಕ್ರಮ, ಕಾರ್ಯಕೌಶಲ್ಯ, ಸಮಯ ಪ್ರಜ್ಞೆ, ದೇಶಭಕ್ತಿ ಹಾಗೂ ದೂರದೃಷ್ಟಿತ್ವಗಳನ್ನೊಳಗೊಂಡ ಸರ್ ಎಂ.ವಿಶ್ವೇಶ್ವರಯ್ಯನವರಂತಹ ಇಂಜಿನಿಯರ್‍ಗಳು ನಮಗೆ ಬೇಕಾಗಿದ್ದಾರೆ. ದಿನದಿಂದ ದಿನಕ್ಕೆ ಇಂಜಿನಿಯರಿಂಗ್ ಕ್ಷೇತ್ರವು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಾ ಹೊಸ ಹೊಸ ಅಧ್ಯಯನ ಶಾಖೆಗಳು ಶೈಕ್ಷಣಿಕ ಕ್ಷೇತ್ರಕ್ಕೆ ಅಡಿಯಿರಿಸುತ್ತಿವೆ. ಅವುಗಳ ಆಧಾರದಲ್ಲಿ ನವೀಕರಿಸಬಹುದಾದ ಇಂಧನಗಳ ಸಂಶೋಧನೆ, ಕೃತಕ ಬುದ್ಧಿಮತ್ತೆ, ಯಾಂತ್ರಿಕ ಮಾನವನ ಬಳಕೆಯೇ ಮೊದಲಾದ ವಿಚಾರಗಳು ನಡೆದು ರಾಷ್ಟ್ರೀಯ ಅಭಿವೃದ್ಧಿಗೆ ಸಹಕಾರಿಯೆನಿಸಲಿವೆ. ಕೇವಲ ಇಂಜಿನಿಯರಿಂಗ್ ಅಲ್ಲದೆ ವೈದ್ಯಕೀಯ ಕ್ಷೇತ್ರದಲ್ಲೂ ಇಂಜಿನಿಯರ್‍ಗಳ ಕೊಡುಗೆ ಮುಂದಿನ ದಿನಗಳಲ್ಲಿ ಹೆಚ್ಚಾಗಲಿವೆ ಎಂದು ಅಭಿಪ್ರಾಯಪಟ್ಟರು.


ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟೋಜ ಮಾತನಾಡಿ, ನಮ್ಮ ಸ್ವ ಹಿತಾಸಕ್ತಿಗಳನ್ನು ಬದಿಗೊತ್ತಿ ಬಲಿಷ್ಟ ರಾಷ್ಟ್ರ ನಿರ್ಮಾಣದೆಡೆಗೆ ಯೋಚಿಸಬೇಕಾಗಿದೆ. ಶತ್ರು ರಾಷ್ಟ್ರಗಳನ್ನು ನಮ್ಮ ಕೌಶಲ್ಯದಿಂದ ಸೆದೆಬಡಿಯುವಂತಹ ಕ್ರಿಯಾಶೀಲತೆಯ ಅಗತ್ಯವಿದೆ. ಇಂಜಿನಿಯರಿಂಗ್ ಅನ್ನುವುದು ಕೇವಲ ಪದವಿಯಾಗಿ ಉಳಿದುಕೊಳ್ಳದೆ ಉತ್ತಮ ಸಮಾಜ ನಿರ್ಮಾಣಕ್ಕೆ ಅದರಿಂದ ಅಹಕಾರ ದೊರಕುವಂತಾಗಬೇಕು. ಆಗ ಮಾತ್ರ ವಿದ್ಯಾರ್ಥಿಗಳು ಪಡೆದುಕೊಳ್ಳುವ ಇಂಜಿನಿಯರಿಂಗ್ ಪದವಿಗೆ ಮೌಲ್ಯ ದೊರಕುವುದಕ್ಕೆ ಸಾಧ್ಯ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಸುರೇಶ್ ಶೆಟ್ಟಿ, ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಶಂಕರನಾರಾಯಣ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅನೀಶ್ ಪ್ರಾರ್ಥಿಸಿ, ಆರ್.ಸಿ.ವಿನೀತ್ ಬಾವಿಮನೆ ಸ್ವಾಗತಿಸಿದರು. ವಿದ್ಯಾರ್ಥಿ ಅನೀಶ್ ರಾಮ್ ಅತಿಥಿಗಳನ್ನು ಪರಿಚಯಿಸಿದರೆ ವಿದ್ಯಾರ್ಥಿ ಅನುಷ್ ಎ.ಎಲ್ ವಂದಿಸಿದರು. ವಿದ್ಯಾರ್ಥಿ ಕೌಶೀಕ್ ರಾವ್ ಕಾರ್ಯಕ್ರಮ ನಿರ್ವಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು