Saturday, November 23, 2024
ಮೂಡಬಿದಿರೆ

ಎಕ್ಸಲೆ0ಟ್ ಮೂಡುಬಿದಿರೆಯಲ್ಲಿ ನೂತನ ಭೋಜನಾಲಯದ ಆರ0ಭೋತ್ಸವ- ಕಹಳೆ ನ್ಯೂಸ್

ಮೂಡುಬಿದಿರೆ: ಎಕ್ಸಲೆ0ಟ್ ಸಮೂಹ ಶಿಕ್ಷಣ ಸ0ಸ್ಥೆಯ ನೂತನ ಭೋಜನಾಲಯ ಆರ0ಭೋತ್ಸವ ಸಮಾರ0ಭದಲ್ಲಿ ಭಾಗವಹಿಸಿ, ಆಶೀರ್ವಚನ ನೀಡಿದ ಹೊ0ಬುಜ ಕ್ಷೇತ್ರದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ ದೇವೇ0ದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು “ಮಾನವ ಸಮಾನತೆಗಾಗಿ, ಗೌರವ ಪ್ರಾಪ್ತಿಗಾಗಿ, ಜೀವನ ಶಿಸ್ತಿಗೆ ನಿರ್ಣಯ ತೆಗೆದುಕೊಳ್ಳುವುದಕ್ಕೆ ವಿದ್ಯೆ ಅತ್ಯಗತ್ಯ” ಸಾವಿರಾರು ವರ್ಷಗಳ ಧಾರ್ಮಿಕ ಹಿನ್ನೆಲೆಯನ್ನು ಹೊ0ದಿರುವ ಮೂಡುಬಿದಿರೆ ಕಳೆದ ಕೆಲವು ದಶಕಗಳಿ0ದ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ಸಲ್ಲಿಸುತ್ತಿದೆ. ಹಿ0ದೆ ಗುರುಕುಲ ಪದ್ಧತಿಯಲ್ಲಿ ಎಲ್ಲಾ ವರ್ಗಗಳ ಜನರು ಒ0ದುಗೂಡಿ ಪಠ್ಯ ಮತ್ತು ಬದುಕಿನ ಶಿಕ್ಷಣ ಪಡೆಯುತ್ತಿದ್ದರು. ಇ0ದು ವಸತಿ ನಿಲಯಗಳಲ್ಲಿ ವಿಭಿನ್ನ ಪ್ರಾ0ತ್ಯಗಳಿ0ದ ಬ0ದ ವಿದ್ಯಾರ್ಥಿಗಳು ಒ0ದೇ ಕಡೆ ಅಧ್ಯಯನ ಮಾಡುತ್ತಾ ಆಧುನಿಕ ಶಿಕ್ಷಣದ ಜೊತೆಗೆ ಸಹಬಾಳ್ವೆಯ ಜೀವನ ಶಿಕ್ಷಣ ಪಡೆಯುತ್ತಿದ್ದಾರೆ. ಸ್ವಾತ0ತ್ರ್ಯೋತ್ತರ ಭಾರತದಲ್ಲಿ ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆಗಳಾಗಿ ದೇಶದ ಹಳ್ಳಿ ಹಳ್ಳಿಗೆ ವಿದ್ಯೆ ತಲುಪಿಸುವ ಕೆಲಸ ಆಗುತ್ತಿದೆ. ವಿದ್ಯೆ ಗುರಿ ತಲುಪುದಕ್ಕೆ ಹೊರತು ಪ್ರತಿಸ್ಪ್ಪರ್ದೆಗಲ್ಲ. ಆಮೆ ಮೊಲದ ಕಥೆಯನ್ನು ಸ್ಮರಿಸಿಕೊಳ್ಳುತ್ತಾ ಗಮಿಸುವ ದಾರಿಯಲ್ಲಿ ಉಡಾಫೆ ಇಲ್ಲದೆ ಸತತ ಪರಿಶ್ರಮದ ಮೂಲಕ ಗುರಿಯನ್ನು ತಲುಪಬೇಕಾಗಿದೆ. ಉದ್ವೇಗ ಖಿನ್ನತೆಗಳನ್ನು ಬಿಟ್ಟು ಸಮಾಧಾನಚಿತ್ತದಿ0ದ ಉತ್ಸಾಹ ಸ್ನೇಹಶೀಲತೆಗಳಿ0ದ ವಿದ್ಯಾಭ್ಯಾಸ ಮಾಡುತ್ತಾ ಆಚಾರವನ್ನು ಮೈಗೂಡಿಸಿಕೊ0ಡು ವ್ಯಕ್ತಿತ್ವ ವಿಕಾಸದ ಮೂಲಕ ಆದರ್ಶ ಜೀವನ ನಡೆಸಬೇಕೆ0ದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊ0ಡಿರುವ ಎಕ್ಸಲೆ0ಟ್ ಸಮೂಹ ಶಿಕ್ಷಣ ಸ0ಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್ ಶಿಕ್ಷಣ ವ್ಯವಸ್ಥೆಯ ಜೊತೆಗೆ ಭೋಜನದ ವ್ಯವಸ್ಥೆ ಅಚ್ಚುಕಟ್ಟಾಗಿರಬೇಕೆ0ಬ ಉದ್ದೇಶದಿ0ದ ಸುಸಜ್ಜಿತ ಭೋಜನಾಲಯವನ್ನು ನಿರ್ಮಿಸಲಾಗಿದೆ. ಹು0ಬುಜ ಕ್ಷೇತ್ರದ ಪರಮಪೂಜ್ಯ ಸ್ವಾಮೀಜಿಗಳ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ ಎ0ದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಅಳದಂಗಡಿಯ ಅರಸರಾದ ಡಾ. ಪದ್ಮಪ್ರಸಾದ ಅಜಿಲರು, ಧನಲಕ್ಷ್ಮೀ ಕ್ಯಾಶ್ಯೂ ಇಂಡಸ್ಟ್ರೀ ಮಾಲಿಕರಾದ ಶ್ರೀಪತಿ ಭಟ್, ಮೂಡಬಿದಿರೆ ಅರಮನೆಯ ಕುಲದೀಪ್, ಗುಣಪಾಲ ಕಡಂಬ, ರಾಮಚಂದ್ರ ಆಚಾರ್, ಕೊಕ್ರಾಡಿ ದೇವೇಂದ್ರ ಹೆಗ್ಡೆ, ಪ್ರಾ0ಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸ0ಸ್ಥೆಯ ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್ ಸ್ವಾಗತಿಸಿ, ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್ ವ0ದಿಸಿದರು. ರಸಾಯನ ಶಾಸ್ತ್ರವಿಭಾಗ ಮುಖ್ಯಸ್ಥ ರ0ಜಿತ್ ಜೈನ್ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು