Recent Posts

Sunday, January 19, 2025
ಸುಬ್ರಹ್ಮಣ್ಯ

ಪಂಜದಲ್ಲಿ ಕೊರೊನ ನಿಯಂತ್ರಣ ಜನಜಾಗೃತಿ ಅಭಿಯಾನ – ಕಹಳೆ ನ್ಯೂಸ್

ಪಂಜ: ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು, ಗ್ರಾಮ ಪಂಚಾಯತ್ ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರ ಪಂಜ ಯುವಜನ ಒಕ್ಕೂಟ ಸುಳ್ಯ ತಾಲೂಕು, ಪಂಚ ಶ್ರೀ ಪಂಜ ಸ್ಪೋಟ್ರ್ಸ್ ಕ್ಲಬ್ (ರಿ), ಇದರ ಜಂಟಿ ಆಶ್ರಯದಲ್ಲಿ ಕೋವಿಡ್-19 ಜನಜಾಗೃತಿ ಕಾರ್ಯಕ್ರಮ ನಡೆಯಿತು.

ಕೋವಿಡ್-19 ಲಸಿಕೆ ತೆಗೆದುಕೊಳ್ಳುವ ವಿಧಾನ ಹಾಗೂ ಲಸಿಕಾ ಉಪಯೋಗ ಇದೆಲ್ಲದರ ಬಗ್ಗೆ ವಿವರವಾಗಿ ಶುಶ್ರೂಷಕಿ ಶ್ರೀಮತಿ ವಿಜಯಲಕ್ಷ್ಮಿ ತಿಳಿಸಿಕೊಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅದ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪೂರ್ಣಿಮಾ ದೇರಾಜೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಪಂಜ ಗ್ರಾಮ ಪಂಚಾಯತ್ ಕಾರ್ಯದರ್ಶಿ ಪದ್ಮಯ್ಯ, ಶುಶ್ರೂಷಕಿ ಶ್ರೀಮತಿ ವಿಜಯಲಕ್ಷ್ಮಿ, ನೆಹರು ಯುವ ಕೇಂದ್ರ ಮಂಗಳೂರು ನ ನಿರ್ದೇಶಕರಾದ ಕುಮಾರಿ ಪ್ರತಿಭಾ ಕಾಯರ, ಯುವಜನ ಸಂಯಕ್ತ ಮಂಡಳಿ(ರಿ.) ಸುಳ್ಯ ಇದರ ನಿರ್ದೇಶಕರಾದ ಪವನ್ ಕುಮಾರ್ ಪಲ್ಲತಡ್ಕ, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಕ್ಲಬ್ ನ ಸದಸ್ಯರಾಗಿರುವ ಚಂದ್ರಶೇಖರ ದೇರಾಜೆ ಹಾಗೂ ನಾರಾಯಣ ಕೃಷ್ಣನಗರ , ಅರ್.ಐ.ಎಮ್.ಎಲ್ ಶಂಕರ್, ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು, ಡಾ!! ಮಂಜುನಾಥ್, ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾದಿಕಾರಿಗಳು, ಪಂಚಶ್ರೀ ಪಂಜ ಇದರ ಎಲ್ಲಾ ಸದಸ್ಯರು ಕ್ಲಬ್ ನ ಸಮವಸ್ತ್ರ ದರಿಸಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಸಭಾ ನಿರೂಪಣೆಯನ್ನು ಕ್ಲಬ್ ನ ಕಾರ್ಯದರ್ಶಿ ಶ್ರೀ ದಾಮೋದರ ನೇರಳ ನಿರ್ವಹಿಸಿ, ಧನ್ಯವಾದ ಸಮರ್ಪಣೆಯನ್ನು ದುರ್ಗಾಕುಮಾರ್ ಅಂಬೆಕಲ್ ನಿರ್ವಹಿಸಿದರು ಸುಮಾರು ನೂರಕ್ಕೂ ಅಧಿಕ ಕೋವಿಡ್ ಲಸಿಕೆ ಪಲಾನುಭವಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು