Saturday, November 23, 2024
ಪುತ್ತೂರು

ವಿವೇಕಾನಂದ ಪದವಿ ಕಾಲೇಜಿನ ನೇಚರ್ ಕ್ಲಬ್, ಸಸ್ಯಶಾಸ್ತ್ರ ವಿಭಾಗ, ಪ್ರಾಣಿಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ ಘಟಕದ ಸಂಯುಕ್ತ ಆಶ್ರಯದಲ್ಲಿ‘Explore to Experience’ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು : ವಿವೇಕಾನಂದ ಪದವಿ ಕಾಲೇಜಿನ ನೇಚರ್ ಕ್ಲಬ್, ಸಸ್ಯಶಾಸ್ತ್ರ ವಿಭಾಗ, ಪ್ರಾಣಿಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ ಘಟಕದ ಸಂಯುಕ್ತ ಆಶ್ರಯದಲ್ಲಿ ಗೂಗಲ್ ಮೀಟ್ ವೇದಿಕೆಯಲ್ಲಿ ನಡೆದ ‘Explore to Experience’ ಎಂಬ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮಾತನಾಡಿದ, ಕೆನಡಾದ ಎಎಂಸಿ ಇನ್ಸೂರೆನ್ಸ್ ಕಂಪನಿಯ ಅಕೌಂಟಿಂಗ್ ಸಹಾಯಕಿ ಸ್ವಾತಿ ಕಿಳಿಂಗಾರು ಪ್ರಕೃತಿಯಲ್ಲಿ ಸಮಯ ಕಳೆಯುವುದರಿಂದ ಮನಸ್ಥಿತಿಯು ಉತ್ತಮಗೊಳ್ಳುತ್ತದೆ ಮತ್ತು ಮಾನಸಿಕ ಆರೋಗ್ಯವು ಸುಧಾರಿಸುತ್ತದೆ. ಗುಣಮಟ್ಟದ ಸಮಯವನ್ನು ಚಾರಣದಲ್ಲಿ ಕಳೆಯುವುದರಿಂದ ಒತ್ತಡ ಕಡಿಮೆಯಾಗಿ ಮನಸ್ಸು ಶಾಂತವಾಗುತ್ತದೆ ಮತ್ತು ಖಿನ್ನತೆಯನ್ನು ದೂರವಿಡುತ್ತದೆ. ಇಂದ್ರಿಯಗಳು ಪ್ರಚೋದಿಸಲ್ಪಟ್ಟು ಸಂವೇದನಾ ಶೀಲತೆ ಹೆಚ್ಚಾಗುತ್ತದೆ. ಹಾಗೆಯೇ ಓದುವುದರಿಂದ ಬದುಕಿನ ಬಗೆಗಿರುವ ನಮ್ಮ ದೃಷ್ಟಿಕೋನವೇ ಬದಲಾಗುತ್ತದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಡುವಿಲ್ಲದ ದೈನಂದಿನ ಜೀವನದಿಂದ ಚಿಕ್ಕ ವಿರಾಮ ಅಗತ್ಯವೆನಿಸಿದಾಗ ಪ್ರಕೃತಿಯನ್ನು ಆಸ್ವಾದಿಸುವುದಕ್ಕಿಂತ ಮಿಗಿಲಾದುದು ಬೇರೊಂದಿಲ್ಲ ಎಂದು ಪ್ರಕೃತಿಯೊಂದಿಗೆ ತಾವು ಕಳೆದ ಕ್ಷಣಗಳನ್ನು ವಿದ್ಯಾರ್ಥಿಗಳೊಂದಿಗೆ ಅವರು ಹಂಚಿಕೊಂಡರು. ಜೊತೆಗೆ ಆಸಕ್ತ ವಿದ್ಯಾರ್ಥಿಗಳಿಗಾಗಿ ಓದಲೇ ಬೇಕಾದ ಪುಸ್ತಕಗಳ ಕುರಿತಾಗಿ ಒಂದಷ್ಟು ಮಾಹಿತಿ ನೀಡಿದರು. ನೇಚರ್ ಕ್ಲಬ್‍ನ ಸಂಚಾಲಕಿ ಡಾ. ಸ್ಮಿತಾ.ಪಿ. ಈ. ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ದ್ವಿತೀಯ ಬಿಝಡ್.ಸಿ ವಿದ್ಯಾರ್ಥಿಗಳಾದ ಶೈನಿ.ಕೆ.ಆರ್ ಸ್ವಾಗತಿಸಿ, ಪ್ರೀತಮ್ ವಂದಿಸಿದರು. ಸಿಂಚನ.ಪಿ.ಭಟ್ ನಿರೂಪಿಸಿದರು. ಗೂಗಲ್ ಮೀಟ್ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು ಹಾಗೂ ಸುಮಾರು 60ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.