ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಶಿಲ್ಪ ಎಂ.ಕೆ ಸಿಎ ಫೌಂಡೇಶನ್ ಪರೀಕ್ಷೆಯನ್ನು ತೇರ್ಗಡೆಯಾಗುವುದರ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ನೆಹರೂ ನಗರದ ಎಂ. ಕೃಷ್ಣ ಜೋಯಿಸ ಮತ್ತು ರಾಜೇಶ್ವರಿ ಕೆ.ಎಂ ದಂಪತಿಗಳ ಪುತ್ರಿಯಾದ ಶಿಲ್ಪ ಎಂ.ಕೆ ಮುಂದಿನ ಹಂತದ ಸಿಎ ಇಂಟರ್‍ಮಿಡಿಯೆಟ್ ಪರೀಕ್ಷೆಯನ್ನು ಬರೆಯಲು ಅರ್ಹತೆ ಗಳಿಸಿದ್ದಾರೆ. ವಿದ್ಯಾರ್ಥಿನಿ ಶಿಲ್ಪ ಎಂ.ಕೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ದೊರೆತ ವಿಶೇಷ ತರಬೇತಿಯೇ ನನ್ನ ಯಶಸ್ಸಿಗೆ ಕಾರಣ. ಉಪನ್ಯಾಸಕರ ಪಠ್ಯಕ್ರಮ, ಸಲಹೆ ಸೂಚನೆಗಳು ನನ್ನಲ್ಲಿ ಆತ್ಮವಿಶ್ವಾಸವನ್ನು ಮೂಡಿಸಲು ಸಹಕಾರಿಯಾಗಿವೆ. ಉತ್ತಮ ಶಿಕ್ಷಣವನ್ನು ನೀಡಿದ ವಿದ್ಯಾಸಂಸ್ಥೆ, ಗುರುಹಿರಿಯರು ಮತ್ತು ಪ್ರೋತ್ಸಾಹಿಸಿದ ತಂದೆತಾಯಿಯವರಿಗೆ ಕೃತಜ್ಞನಾಗಿದ್ದೇನೆ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಸಿಎ ಆಕಾಂಕ್ಷಿಗಳಿಗೆ ವಿಶೇಷ ತರಬೇತಿ ವ್ಯವಸ್ಥೆಯನ್ನು ಕಾಲೇಜಿನ ವತಿಯಿಂದ ಕಲ್ಪಿಸಿಕೊಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ವಾಣಿಜ್ಯ ವಿಷಯದ ಜತೆಗೆ ಸಿಎ ಪರೀಕ್ಷೆಗೆ ಬೇಕಾದ ಸಕಲ ತರಬೇತಿ ಕಾರ್ಯವನ್ನೂ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆಸಿಕೊಂಡು ಬರಲಾಗುತ್ತಿದೆ.
You Might Also Like
ಎಸ್.ಜಿ.ಎಫ್.ಐ ರಾಷ್ಟ್ರಮಟ್ಟದ ಚೆಸ್ ಪಂದ್ಯಾಟ -ಕಹಳೆ ನ್ಯೂಸ್
ವಿವೇಕಾನಂದ ಪದವಿಪೂರ್ವ ಕಾಲೇಜಿನ ಧನುಷ್ ರಾಮ್ ಗೆ ಕಂಚಿನ ಪದಕ ಕೊಲ್ಕತ್ತಾದಲ್ಲಿ ನಡೆದ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ದ 68ನೇ ರಾಷ್ಟ್ರ ಮಟ್ಟದ ಚೆಸ್...
ಸಂತ ಫಿಲೋಮಿನಾ ಕಾಲೇಜಿನ ದ್ವಿತೀಯ ಬಿ ಬಿ ಎ ವಿದ್ಯಾರ್ಥಿನಿ ಸ್ವಾತಿ ಡಿ ಗೌಡ ಕಂಪನಿ ಸೆಕ್ರೆಟರಿ ಪರೀಕ್ಷೆಯಲ್ಲಿ ತೇರ್ಗಡೆ-ಕಹಲೆ ನ್ಯೂಸ್
ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ದ್ವಿತೀಯ ಬಿ ಬಿ ಎ ವಿದ್ಯಾರ್ಥಿನಿ ಸ್ವಾತಿ ಡಿ ಗೌಡ ಕಂಪನಿ ಸೆಕ್ರೆಟರಿ ಯ ಪ್ರವೇಶ ಪರೀಕ್ಷೆ ಸಿ ಯಸ್ ಈ...
ಫಿಲೋಮಿನಾ ಪ.ಪೂ ಕಾಲೇಜಿಗೆ ‘ಪ್ರಗತಿ ವೈಭವ 2024’ ತಾಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿ-ಕಹಳೆ ನ್ಯೂಸ್
ಪುತ್ತೂರು: ಪ್ರಗತಿ ಸ್ಟಡಿ ಸೆಂಟರ್ ಪುತ್ತೂರು ಇದರ ಸಾರಥ್ಯದಲ್ಲಿ ನ17 ರಂದು ನಡೆದ 'ಪ್ರಗತಿ ವೈಭವ - 2024' ತಾಲೂಕು ಮಟ್ಟದ ಪದವಿ ಪೂರ್ವ ವಿಭಾಗದ ಸಾಂಸ್ಕೃತಿಕ...
ದೇವರ ದಾಸನಿಗೆ ಲೋಕದ ದಾಸ್ಯದಿಂದ ಮುಕ್ತಿ: ಲಕ್ಷಿ್ಮೀಶ ತೋಳ್ಪಾಡಿ-ಕಹಳೆ ನ್ಯೂಸ್
ಪುತ್ತೂರು: ಪ್ರತಿಯೊಬ್ಬರಲ್ಲೂ ಆಂತರಿಕ ಅವ್ಯಕ್ತವಾಗಿದೆ, ಅದು ವ್ಯಕ್ತವಾಗಲು ಹಂಬಲಿಸಿದಾಗ, ಲೌಕಿಕ ಜೀವನಕ್ಕಿಂತ ದೊಡ್ಡದು ಯಾವುದಿಲ್ಲ ಎಂದು ಭಾವಿಸಿ ಶಕ್ತಿಯನ್ನು ಮುರಿಯುತ್ತೇವೆ. ಹಾಗಾಗಿ ಒಳಗಿರುವ ಅಂತರ್ಶಕ್ತಿ ಮುಸುಕುತ್ತಿದೆ....