Recent Posts

Monday, January 20, 2025
ಪುತ್ತೂರು

ಪರೀಕ್ಷೆಯಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳಿಗೆ ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ಸನ್ಮಾನ-ಕಹಳೆ ನ್ಯೂಸ್

ಪುತ್ತೂರು: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಆಯೋಜಿಸುವ ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 852 ನೇ ರ‍್ಯಾಂಕ್ ಗಳಿಸಿದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರೀತಂ ಜಿ ಮತ್ತು ಸಿಎ ಫೌಂಡೇಶನ್ ಪರೀಕ್ಷೆಯನ್ನು ತೇರ್ಗಡೆಯಾಗುವುದರ ಮೂಲಕ ವಿಶೇಷ ಸಾಧನೆಗೈದ ಶಿಲ್ಪ ಎಂ.ಕೆ ಅವರನ್ನು ಸಂಸ್ಥೆಯ ವತಿಯಿಂದ ಶಾಲು ಹೊದಿಸಿ, ಪುಸ್ತಕ ಮತ್ತು ಸ್ಮರಣಿಕೆ ನೀಡಿ ಸನ್ಮಾನಿಸಿಲಾಯಿತು.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆರ್ಯಾಪು ಗ್ರಾಮದ ರಾಮ ನಾಯ್ಕ ಮತ್ತು ಗೀತಾ ದಂಪತಿಗಳ ಪುತ್ರನಾದ ಪ್ರೀತಂ ಜಿ ಮತ್ತು ನೆಹರೂನಗರದ ಎಂ. ಕೃಷ್ಣ ಜೋಯಿಸ ಮತ್ತು ರಾಜೇಶ್ವರಿ ಕೆ. ಎಂ ದಂಪತಿಗಳ ಪುತ್ರಿಯಾದ ಶಿಲ್ಪ ಎಂ.ಕೆ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳಾಗಿದ್ದಾರೆ. ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ಪಿ.ಕೆ ಪರಮೇಶ್ವರ ಶರ್ಮಾ, ಭೀಮ ಭಾರದ್ವಾಜ್, ವಿಶ್ವನಾಥ್, ಶ್ರೀಧರ ಶೆಟ್ಟಿಗಾರ್ , ಕವಿತಾ, ಹರ್ಷಿತಾ, ಯಶವಂತಿ, ಮಾಧವಿ ಪಟೇಲ್, ನಳಿನಕುಮಾರಿ, ಶರ್ಮಿಳಾ, ಶ್ರುತಿ, ಅರುಣಾ, ದಿವ್ಯ, ಉಷಾ, ಗಾಯತ್ರಿ, ವಿದ್ಯಾರ್ಥಿಗಳ ಹೆತ್ತವರು ಮತ್ತಿತರರು ಉಪಸ್ಥಿತರಿದ್ದರು.