Sunday, November 24, 2024
ಬೆಳ್ತಂಗಡಿ

ಲಸಿಕಾ ಮೆಗಾ ಮೇಳ: ಬೆಳ್ತಂಗಡಿ ತಾಲೂಕಿನಲ್ಲೇ ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರ ಮೊದಲ ಸ್ಥಾನ – ಕಹಳೆ ನ್ಯೂಸ್

ಬೆಳ್ತಂಗಡಿ: ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬದ ಪ್ರಯುಕ್ತ ರಾಜ್ಯದಲ್ಲಿ ಬೃಹತ್ ಲಸಿಕಾ ಅಭಿಯಾನವನ್ನ ನಡೆಸಲಾಗಿತ್ತು. ಈ ಹಿನ್ನಲೆಯಲ್ಲಿ ಬೆಳ್ತಂಗಡಿ ತಾಲ್ಲೂಕಿನಲ್ಲಿ ಲಸಿಕಾ ಮೇಗಾಮೇಳದಲ್ಲಿ ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರ ಮೊದಲ ಸ್ಥಾನ ಪಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಅಧೀನದಲ್ಲಿ ನಡೆದ ಲಸಿಕಾ ಮೆಗಾಮೇಳದಲ್ಲಿ ತುರ್ಕಲಿಕೆ ಹಿರಿಯ ಪ್ರಾಥಮಿಕ ಶಾಲೆ ಕಲ್ಲೇರಿಯಲ್ಲಿ 362 ಡೋಸ್, ಅಂಡೆತಡ್ಕ ಶಾಲೆ, ಇಳಂತಿಳದಲ್ಲಿ 333 ಡೋಸ್, ಬಂದಾರುಪಂಚಾಯತ್ ಸಭಾಭವನದಲ್ಲಿ 213 ಡೋಸ್, ತಣ್ಣಿರುಪಂತ ಹಿರಿಯ ಪ್ರಾಥಮಿಕ ಶಾಲೆ, ಅಳಕೆಯಲ್ಲಿ 500 ಡೋಸ್, ಮಚ್ಚಿನ ಸಭಾಭವನದಲ್ಲಿ 326 ಡೋಸ್, ಬಾರ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 249 ಡೋಸ್, ತೆಕ್ಕಾರು ಕುಟ್ಟಿಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 293 ಡೋಸ್, ಕುಪ್ಪೆಟ್ಟಿ ಶಾಲೆಯಲ್ಲಿ 403 ಡೋಸ್, ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 346 ಡೋಸ್, ಬಾರ್ಯಾ ಸಕ್ರಿಕಟ್ಟೆ ದೊಡ್ಡಕಲ್ಲು ಶಾಲೆಯಲ್ಲಿ 168 ಡೋಸ್‍ಗಳು ಸೇರಿದಂತೆ ಒಟ್ಟು 3193ಡೋಸ್ ಲಸಿಕಾ ಮೆಗಾಮೇಳದಲ್ಲಿ ವಿತರಿಸಲಾಗಿದ್ದು, ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ತಂಗಡಿ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡಯುವಲ್ಲಿ ಯಶಸ್ವಿಯಾಗಿದೆ. ಲಸಿಕಾ ಮೆಗಾಮೇಳ ಕಾರ್ಯಕ್ರಮದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ| ಕಲಾಮಧು, ಡಾ| ಡಯಾನ ಸವಿತಾ, ಆರೋಗ್ಯ ಸಂರಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿವರ್ಗ ಕೋರೋನಾ ವಾರಿಯರ್ಸ್‍ಗಳು ಉಪಸ್ಥಿತರಿದ್ದರು.