Tuesday, January 21, 2025
ಬಂಟ್ವಾಳ

ವಿಶ್ವಕರ್ಮ ಸಂಘ ರಿ, ಮುಡಿಪು ಹಾಗೂ ಸಿಂಧೂರ ಮಹಿಳಾ ಮಂಡಳಿಯ ವತಿಯಿಂದ ನೆರವೇರಿದ ವಿಶ್ವಕರ್ಮ ಪೂಜೆ – ಕಹಳೆ ನ್ಯೂಸ್

ಮುಡಿಪು : ವಿಶ್ವಕರ್ಮ ಸಂಘ (ರಿ,) ಮುಡಿಪು ಹಾಗೂ ಸಿಂಧೂರ ಮಹಿಳಾ ಮಂಡಳಿಯ ವತಿಯಿಂದ “ಸಂಘದ ಸಭಾಭವನ”ದಲ್ಲಿ ವಿಶ್ವಕರ್ಮ ಪೂಜೆ ಹಾಗೂ ಯಜ್ಞ ಮಹೋತ್ಸವವು “ಸರಕಾರದ ನಿಯಮಾವಳಿಯಂತೆ ಸರಳ ರೀತಿಯಲ್ಲಿ” ಜರಗಿತು.


ಸಂಘದ ಹಿರಿಯ ಸದಸ್ಯರಾದ ಕೆ. ಸದಾಶಿವ ಆಚಾರ್ಯ ಮುಡಿಪು ದಂಪತಿಗಳ ನೇತೃತ್ವದಲ್ಲಿ ಬ್ರ| ಶ್ರೀ| ವೈ. ವಿ. ವಿಶ್ವಜ್ಞ ಮೂರ್ತಿ ಮಂಗಳೂರು. ಹಾಗೂ ಮುಡಿಪು ಕೆ.ವಸಂತ ಪುರೋಹಿತ್ ರವರ ಆಚಾರ್ಯತ್ವದಲ್ಲಿ ಜರಗಿದ ವಿಶ್ವಕರ್ಮ ಪೂಜೆ ಹಾಗೂ ಯಜ್ಞಾ ಮಹೋತ್ಸವದ ಬಳಿಕ ಪ್ರಸಾದ ವಿತರಣೆಯೊಂದಿಗೆ ಅನ್ನಸಂತರ್ಪಣೆ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು


ಕೋವಿಡ್ 19 ರ ಭೀತಿಯ ಮುನ್ನೆಚ್ಚರಿಕೆಯಿಂದ ಸಭಾ ಕಾರ್ಯಕ್ರಮ ಅಥವಾ ಯಾವುದೇ ವೈವಿದ್ಯಮಯ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳದೆ ಜರಗಿದ ಈ ಕಾರ್ಯಕ್ರಮದಲ್ಲಿ… ಸಂಘದ ಅಧ್ಯಕ್ಷರಾದ ಇರಾ.ಯೋಗೀಶ್ ಆಚಾರ್ಯ ಮುಡಿಪು, ಪ್ರಧಾನ ಕಾರ್ಯದರ್ಶಿ ನವೀನ್ ಆಚಾರ್ಯ ಮುಡಿಪು, ಹಾಗೂ ಪದಾಧಿಕಾರಿಗಳು ಸಂಘದ ಮತ್ತು ಸಿಂಧೂರ ಮಹಿಳಾ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು