Recent Posts

Wednesday, November 20, 2024
ಪುತ್ತೂರು

ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಸ್ನೇಹಸಮ್ಮಿಲನ ಕಾರ್ಯಕ್ರಮ- ಕಹಳೆ ನ್ಯೂಸ್

ಪುತ್ತೂರು: ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ವಸತಿಯುತ ಮತ್ತು ದೈನಂದಿನ ಪ್ರವೇಶದ ಪದವಿ ಪೂರ್ವ ವಿದ್ಯಾಲಯಗಳ ಹಿರಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಇಂದಿನ ಸಮಾಜದಲ್ಲಿ ಯುವಜನತೆ ಹಾದಿ ತಪ್ಪುತ್ತಿರುವುದನ್ನು ಕಾಣುತ್ತಿದ್ದೇವೆ. ಭವಿಷ್ಯದ ಭಾರತದ ರತ್ನಗಳಾಗಬೇಕಾದ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ವಿದ್ಯಾರ್ಥಿ ಜೀವನ ಅನ್ನುವುದು ಶಿಸ್ತುಬದ್ಧವಾಗಿ ಮತ್ತು ಸರಿಯಾದ ಗುರಿಯೊಂದಿಗೆ ಸಾಗಿದಾಗ ಮಾತ್ರ ಅಂದುಕೊಂಡದ್ದನ್ನು ಸಾಧಿಸುವುದಕ್ಕೆ ಸಾಧ್ಯ. ಇದನ್ನು ಅರಿತುಕೊಂಡು ವಿದ್ಯಾರ್ಥಿ ಸಮುದಾಯ ಮುಂದುವರಿಯಬೇಕಿದೆ. ಪ್ರತಿಯೊಬ್ಬರೂ ಜೀವನದಲ್ಲಿ ಯಶಸ್ಸು ಗಳಿಸುವಂತಾಗಬೇಕು. ಅಂತಹ ಯಶಸ್ಸನ್ನು ನಮ್ಮದಾಗಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಇರಬೇಕು. ಶಿಕ್ಷಕರ ಹಾಗೂ ಹಿರಿಯರ ಮಾರ್ಗದರ್ಶನದೊಂದಿಗೆ ವಿದ್ಯಾರ್ಥಿಗಳು ಸತತ ಶ್ರಮದೊಂದಿಗೆ ಮುಂದುವರೆದಾಗ ಸಾಧನೆ ಸಾಕಾರಗೊಳ್ಳುತ್ತದೆ. ಎಲ್ಲಾ ರೀತಿಯ ಸಾಧನೆಗಳೊಂದಿಗೆ ದೇಶ ಕಟ್ಟುವಂತಹ ನಾಗರಿಕರಾಗಿ ರೂಪುಗೊಳ್ಳಬೇಕಾದ ಅನಿವಾರ್ಯತೆಯೂ ನಮ್ಮ ಮುಂದಿದೆ ಎಂದು ತಿಳಿಸಿದರು.

ಹಿರಿಯ ವಿದ್ಯಾರ್ಥಿನಿ ರಂಜಿತಾ ಎಚ್ ಶೆಟ್ಟಿ ಮಾತನಾಡಿ ತಮ್ಮ ಮಕ್ಕಳ ಬಗೆಗೆ ಹೆತ್ತವರಿಗೆ ಅಪಾರ ಕನಸುಗಳಿರುತ್ತವೆ. ವಿದ್ಯಾರ್ಥಿಗಳಿಗೆ ಅವರ ಹೆತ್ತವರೇ ನಿಜವಾದ ಹಿತೈಷಿಗಳು. ಆದ್ದರಿಂದ ಹೆತ್ತವರ ನಿರ್ಧಾರವನ್ನು ಗೌರವಿಸುತ್ತಾ ಮುಂದುವರೆಯುವುದು ಅತ್ಯಂತ ಸೂಕ್ತವಾದದ್ದು. ನಮ್ಮೆಲ್ಲಾ ಸಾಧನೆಗಳಿಗೆ ಹೆಮ್ಮೆ ಪಡುವ ನಮ್ಮ ಹೆತ್ತವರನ್ನು ಸಂತೋಷದಿಂದ ಇರುವಂತೆ ನೋಡಿಕೊಳ್ಳಬೇಕಾದ್ದು ನಮ್ಮ ಜವಾಬ್ದಾರಿ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಉಪನ್ಯಾಸಕರಾದ ಆದಿತ್ಯ ಹೆಬ್ಬಾರ್, ವಿದ್ಯಾಸರಸ್ವತಿ ಉಪಸ್ಥಿತರಿದ್ದರು. ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಎಂ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಶಂಕರನಾರಾಯಣ ಭಟ್ ವಂದಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು