Monday, January 20, 2025
ಬೆಳ್ತಂಗಡಿ

ಬೆಳ್ತಂಗಡಿಯಲ್ಲಿ ಯುವ ವಕೀಲರಾದ ಸುರೇಶ್ ವಿ ಯವರ ನೂತನ ಕಛೇರಿ ಶುಭಾರಂಭ- ಕಹಳೆ ನ್ಯೂಸ್

ಬೆಳ್ತಂಗಡಿ : ವಿಘ್ನೇಶ್ ಸಿಟಿ ಕಾಂಪ್ಲೆಕ್ಸ್ ನ 2 ನೇ ಮಹಡಿಯಲ್ಲಿ ಯುವ ವಕೀಲರಾದ ಸುರೇಶ್ ವಿ ಯವರ ನೂತನ ಕಛೇರಿಯು ಇಂದು ಶುಭಾರಂಭಗೊಂಡಿದ್ದು, ಪುತ್ತೂರು ವಿವೇಕಾನಂದ ಕಾನೂನು ಕಾಲೇಜಿನ ವಕೀಲರು ಹಾಗೂ ಉಪನ್ಯಾಸರಾದ ಎಸ್ ಸುಧೀರ್ ತೋಳ್ಪಾಡಿ ಮತ್ತು ಬೆಳ್ತಂಗಡಿ ನೋಟರಿ ವಕೀಲರಾದ ಕೆ.ಭಾಸ್ಕರ ಹೊಳ್ಳ ದೀಪ ಪ್ರಜ್ವಲಿಸಿ ಕಛೇರಿಯನ್ನು ಉದ್ಘಾಟಿಸಿ ಯುವ ವಕೀಲರಿಗೆ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಪುತ್ತೂರು ಹಿರಿಯ ವಕೀಲರಾದ ಎಮ್.ಜಿ ಭಟ್, (ಗೋಪಾಲಕೃಷ್ಣ ಭಟ್) ಪಿ. ಕೆ. ಸತೀಸನ್, ಮಚ್ಚಿ ಮಲೆ ಈಶ್ವರ ಭಟ್, ಎನ್. ಜಯಪ್ರಕಾಶ್, ಬೆಳ್ತಂಗಡಿ ಹಿರಿಯ ವಕೀಲರಾದ ರಾಮಚಂದ್ರ ಗೌಡ, ಬಿ.ಎಮ್.ಭಟ್, ಪ್ರಜ್ವಲ್.ಎಮ್, ಸಂದೀಪ್ ಡಿ. ಸೋಜ, ಯುವ ವಕೀಲೆ ಲಿಕಿತಾ, ಉಪಸ್ಥಿತರಿದ್ದು ಶುಭ ಹಾರೈಸಿದರು. ಅದಮ್ಮ ಗುತ್ತು ಕುಟುಂಬದ ಹಿರಿಯರಾದ ಭಟ್ಯಪ್ಪ ಪೂಜಾರಿ, ಹಿತೈಷಿಗಳಾದ ಎಸ್.ಪಿ.ಕೇಶವ ಪೂಜಾರಿ, ವಕೀಲರ ಮಾತೃಶ್ರೀ ಕುಸುಮ, ಸುದೇಶ್ ಅದಮ್ಮ, ಬೆಳ್ತಂಗಡಿ ಚಿಕಿತ್ಸಾ ಪಾರ್ಮ ಶ್ರೀಶ ಭಟ್, ಹರಿ ಪ್ರಸಾದ್ ಪಿಲಿಗೂಡು, ಪ್ರದೀಪ್ ಪಿಲಿಗೂಡು ಸಹಕರಿಸಿ, ಆಶೀರ್ವದಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದವರನ್ನು ಕಛೇರಿಯ ವಕೀಲರಾದ ಸುರೇಶ್ ವಿ. ಸ್ವಾಗತಿಸಿ, ಸತ್ಕರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು