Monday, January 20, 2025
ದಕ್ಷಿಣ ಕನ್ನಡಪುತ್ತೂರು

ಪುತ್ತೂರು: ಪ್ರತಿಷ್ಠಿತ ಹೋಟೆಲ್ ನಲ್ಲಿ ಮೂರು ದಿನಗಳಿಂದ ಮೋಜು-ಮಸ್ತಿ ಮಾಡುತ್ತಿದ್ದ ಅನ್ಯಕೋಮಿನ ಜೋಡಿ..! ಹಿಂ.ಜಾ.ವೇ ಕಾರ್ಯಕರ್ತರಿಂದ ದಾಳಿ:; ಅನ್ಯಕೋಮಿನ ಜೋಡಿ ಪೊಲೀಸ್ ವಶಕ್ಕೆ

ಪುತ್ತೂರು: ಅನ್ಯಕೋಮಿನ ಯುವಕ ಮತ್ತು ಯುವತಿ ಪುತ್ತೂರಿನ ಪ್ರತಿಷ್ಠಿತ ಹೋಟೆಲಿನ ರೂಮ್ ನಲ್ಲಿ ಮೂರು ದಿನಗಳಿಂದ ತಂಗಿರುವ ಬಗ್ಗೆ ತಿಳಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿ ಜೋಡಿಯನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಸೆ.20 ರಂದು ನಡೆದಿದೆ.

ಉಳ್ಳಾಲ ಮೂಲದ ಅನ್ಯಕೋಮಿನ ಯುವಕ ಬೆಂಗಳೂರಿನ ಶೋ ರೂಮ್ ವೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದೂ ಯುವತಿ ಜೊತೆ ಪುತ್ತೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ಮೂರು ದಿನಗಳಿಂದ ತಂಗಿದ್ದು, ಈ ಬಗ್ಗೆ ಮಾಹಿತಿ ತಿಳಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಹೋಟೆಲ್ ಗೆ ದಾಳಿ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದಾಳಿ ವೇಳೆ ಅನ್ಯಕೋಮಿನ ಜೋಡಿ ಅದೇ ಹೋಟೆಲಿನ ರೆಸ್ಟೋರೆಂಟ್ ನಲ್ಲಿ ಉಪಹಾರ ಸೇವಿಸುತ್ತಿದ್ದರು ಎನ್ನಲಾಗಿದೆ. ದಾಳಿ ನಡೆಸಿ ಅನ್ಯಕೋಮಿನ ಜೋಡಿಯನ್ನು ಪತ್ತೆ ಮಾಡಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಅವರನ್ನು ಪೊಲೀಸರಿಗೊಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಣೆಗಾಗಿ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.