Monday, January 20, 2025
ಮೂಡಬಿದಿರೆ

ಸಿ.ಇ.ಟಿಯಲ್ಲಿ ಮೂಡುಬಿದಿರೆ ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದಲ್ಲಿ 7 ಮತ್ತು 8 ನೇ ರ‍್ಯಾಂಕ್- ಕಹಳೆ ನ್ಯೂಸ್

ಮೂಡುಬಿದಿರೆ : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಆಗಸ್ಟ್ 28 ಮತ್ತು 29 ರಂದು ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಸರಿಸುಮಾರು 1,93,000 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು ಇದರಲ್ಲಿ ಮೂಡುಬಿದಿರೆಯ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾದ ಸಾತ್ವಿಕ್ ಜಿ. ಭಟ್ ರಾಜ್ಯಕ್ಕೆ 7 ಮತ್ತು 8 ನೇ ರ‍್ಯಾಂಕ್ ಪಡೆದಿರುತ್ತಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವೆಟೆರ್ನರಿಯಲ್ಲಿ ಸಾತ್ವಿಕ್ ಜಿ. ಭಟ್ 7ನೆ ರ‍್ಯಾಂಕ್, ದರ್ಶನ್ ಟಿ.ಎಸ್. 49ನೇ ರ‍್ಯಾಂಕ್. ಬಿ.ಎನ್.ವೈ.ಎಸ್ ನಲ್ಲಿ ಸಾತ್ವಿಕ್ ಜಿ. ಭಟ್ 8ನೇ ರ‍್ಯಾಂಕ್, ದರ್ಶನ್ ಟಿ.ಎಸ್. 49ನೇ ರ‍್ಯಾಂಕ್. ಫಾರ್ಮಾದಲ್ಲಿ ಸಾತ್ವಿಕ್ ಜಿ. ಭಟ್ 17ನೇ ರ‍್ಯಾಂಕ್, ದರ್ಶನ್ ಟಿ.ಎಸ್. 85ನೇ ರ‍್ಯಾಂಕ್, ಬಿ ಎಸ್ಸಿ. ಅಗ್ರಿಯಲ್ಲಿ ಸಾತ್ವಿಕ್ ಜಿ. ಭಟ್ 114ನೇ ರ‍್ಯಾಂಕ್, ದರ್ಶನ್ ಟಿ.ಎಸ್. 230ನೇ ರ‍್ಯಾಂಕ್, ನಾಗಾರ್ಜುನ್ 564 ನೇ ರ‍್ಯಾಂಕ್,  ಪಡೆದು ಉನ್ನತ ಸಾಧನೆ ಮಾಡಿರುತ್ತಾರೆ. ಇಂಜಿನಿಯರಿಂಗ್ ವಿಭಾಗದಲ್ಲಿ ವಿಘ್ನೇಶ್ ನಾಯಕ್ 123ನೇ ರ‍್ಯಾಂಕ್, ವಿನಾಯಕ್ ಸಿ.ಟಿ. 137ನೇ ರ‍್ಯಾಂಕ್, ಶ್ರೀನಿಧಿ ಸೋಮಯಾಜಿ 387ನೇ ರ‍್ಯಾಂಕ್, ಸುಮುಖ ಎಸ್.ಕೆ. 433ನೇ ರ‍್ಯಾಂಕ್ ಗಳಿಸಿ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ. ಒಟ್ಟು 42 ವಿದ್ಯಾರ್ಥಿಗಳು ಬೇರೆ ಬೇರೆ ವಿಭಾಗಗಳಲ್ಲಿ 500ರ ಒಳಗೆ ರ‍್ಯಾಂಕ್  ಪಡೆದಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಯುವರಾಜ ಜೈನ್, ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್ ಮತ್ತು ಪ್ರಾಂಶುಪಾಲರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.