Recent Posts

Sunday, January 19, 2025
ಪುತ್ತೂರು

ಪುತ್ತೂರಿನ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ನ ನೂತನ ಮಳಿಗೆಗೆ ಭೇಟಿ ನೀಡಿದ ಎಡನೀರು ಶ್ರೀಗಳು – ಕಹಳೆ ನ್ಯೂಸ್

ಪುತ್ತೂರು: ಪ್ರತಿಷ್ಠಿತ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ ನ ನೂತನ ಮಳಿಗೆಗೆ ಇಂದು ಎಡನೀರು ಮಠದ ಶ್ರೀಗಳಾದ ಶ್ರೀ ಸಚ್ಚಿದಾನಂದ ಭಾರತೀ ತೀರ್ಥ ಶ್ರೀಪಾಂಗಳವರು ಭೇಟಿ ನೀಡಿ ನೂತನ ಮಳಿಗೆಯ ಯಶಸ್ಸಿಗೆ ಆಶೀರ್ವದಿಸಿದರು.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನೂತನ ಮಳಿಗೆಯ ಉದ್ಘಾಟನೆಯನ್ನು ಎಪ್ರಿಲ್ ತಿಂಗಳಲ್ಲಿ ನಿಗದಿ ಪಡಿಸಲಾಗಿತ್ತು. ಆದರೆ ಕೋವಿಡ್ -19ರ ಕಾರಣದಿಂದಾಗಿ ಸರ್ಕಾರದ ಮಾರ್ಗಸೂಚಿಯಂತೆ ನೂತನ ಮಳಿಗೆಯ ಉದ್ಘಾಟನೆಯನ್ನು ಸಾಂಕೇತಿಕವಾಗಿ ನೆರವೇರಿಸಲಾಗಿತ್ತು.
ಬಳಿಕ ಶ್ರೀಗಳು ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿದ್ದರಿಂದ ಇದೀಗ ಕೋವಿಡ್ -19 ಮಾರ್ಗಸೂಚಿ ತೆರವಿನ ಬಳಿಕ ನೂತನ ಮಳಿಗೆಗೆ ಭೇಟಿ ನೀಡಿ, ಸಂಸ್ಥೆಯ ಅಭಿವೃದ್ಧಿಗೆ ಆಶೀವರ್ದಿಸಿದರು.

ಈ ಸಂದರ್ಭದಲ್ಲಿ ಜಿ.ಎಲ್ ಬಲರಾಮ ಆಚಾರ್ಯ, ರಾಜಿ ಬಲರಾಮ ಆಚಾರ್ಯ ದಂಪತಿ, ಪುತ್ರರಾದ ಲಕ್ಷ್ಮೀಕಾಂತ ಆಚಾರ್ಯ , ಸುದನ್ನ ಆಚಾರ್ಯ ದಂಪತಿ, ಸೊಸೆಯಂದಿರಾದ ವೇದಾಲಕ್ಷ್ಮೀಕಾಂತ್, ಮಘಾ ಸುದನ್ವ, ಮೊಮ್ಮಗ ಶ್ರೀರಾಮ ಮ್ಯಾನೇಜರ್ ಶಂಕರ್ ಮೋಹನ್, ಹೊಟೆಲ್ ರಾಮದ ಮ್ಯಾನೇಜರ್ ರಮಾನಂದ ನೆಲ್ಲಿತ್ತಾಯ ಮತ್ತಿತರರು ಉಪಸ್ಥಿತರಿದ್ದರು.