Recent Posts

Monday, January 20, 2025
ಬಂಟ್ವಾಳ

ಬಂಟ್ವಾಳ: ಅನುಮಾನಾಸ್ಪದವಾದ ರೀತಿಯಲ್ಲಿ ಹರೀಶ್ ಅವರ ಸಾವು..!ಸೂಕ್ತ ತನಿಖೆ ನಡೆಸುವಂತೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ವಿಟ್ಲ ಪ್ರಖಂಡ ಆಗ್ರಹ-ಕಹಳೆ ನ್ಯೂಸ್

ಬಂಟ್ವಾಳ : ಸಜೀಪ ಮೂಡ ಬೆಂಕೈಯ ಎಂಬಲ್ಲಿನ ಪದವಿಪೂರ್ವ ಕಾಲೇಜಿನ ಹಿಂಬದಿಯಲ್ಲಿ ಮನೆ ವಾಸಿಸುತ್ತಿರುವ ಹರೀಶ ( 42 ) ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ . ಸಾವಿನ ಶಂಕೆಯನ್ನು ವ್ಯಕ್ತಪಡಿಸಿ ಪೊಲೀಸರು ಪ್ರಕರಣವನ್ನು ಮುಚ್ಚುತ್ತಿದ್ದಾರೆ ಮೇಲ್ನೋಟಕ್ಕೆ ಮೃತದೇಹದಲ್ಲಿ ಗಾಯದ ಗುರುತುಗಳಿದ್ದು ಇದು ಹತ್ಯೆ ಎಂದು ಕಾಣುತ್ತಿದೆ ಆದರೂ ಇದನ್ನು ಮುಚ್ಚಿಹಾಕಲು ಕಾಣದ ಕೈಗಳು ಯತ್ನಿಸುತ್ತಿದ್ದು ಸಾವಿನ ಸಂಪೂರ್ಣ ತನಿಖೆ ಆಗಬೇಕೆಂದು ವಿಶ್ವ ಹಿಂದೂ ಪರಿಷದ್ ಬಜರಂಗದಳ ವಿಟ್ಲ ಪ್ರಖಂಡ ಆಗ್ರಹಿಸುತ್ತದೆ.

ಹರೀಶ ಮೈಯಲ್ಲಿ ಗಾಯಗಳು ಕಂಡುಬಂದಿರುವುದರಿಂದ ಅನ್ಯ ಕೋಮಿನ ಯುವಕರು ಈ ಹಿಂದೆ ಅವನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.ಅಂತೆಯೇ ಹಳೇ ವೈಷಮ್ಯವನ್ನಿಟ್ಟುಕೊಂಡ ತಂಡವೊಂದು ಮೂರು ದಿನಗಳಿಂದ ಹಲ್ಲೆ ಮಾಡಲು ಕಾಯುತ್ತಿರುವುದಾಗಿ ಸಾರ್ವಜನಿಕರು ಮಾತಾಡಿಕೊಳ್ಳುತ್ತಿದ್ದಾರೆ . ಆದ್ದರಿಂದ ಹರೀಶನ ಹತ್ಯೆಯನ್ನು ಪೊಲೀಸರು ಸರಿಯಾಗಿ ತನಿಖೆ ಮಾಡಿ ತಪ್ಪಿತಸ್ಥರನ್ನು ಶೀಘ್ರ ಬಂಧಿಸಿ ಕಠಿಣ ಶಿಕ್ಷೆ ಕೊಡಬೇಕೆಂದು ವಿಶ್ವ ಹಿಂದೂ ಪರಿಷದ್ ಬಜರಂಗದಳ ವಿಟ್ಲ ಪ್ರಖಂಡ ಆಗ್ರಹಿಸುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು