Recent Posts

Monday, January 20, 2025
ಬಂಟ್ವಾಳ

ಮಂಗಳೂರಿನ ಇಂಟರ್ ಸಿ.ಟಿ. ಲಾಡ್ಜ್ ನಲ್ಲಿ ಬಂಟ್ವಾಳ ಮೂಲದ ವ್ಯಕ್ತಿಯ ಶವ ಪತ್ತೆ – ಕಹಳೆ ನ್ಯೂಸ್

ಬಂಟ್ವಾಳ: ಮಂಗಳೂರಿನ ಇಂಟರ್ ಸಿ.ಟಿ. ಲಾಡ್ಜ್ ನಲ್ಲಿ ಬಂಟ್ವಾಳ ಮೂಲದ ವ್ಯಕ್ತಿಯೋರ್ವ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತದೇಹ ಬಂಟ್ವಾಳ ತಾಲೂಕಿನ ಬ್ರಹ್ಮರಕೊಟ್ಲು ಕನಪಾಡಿ ನಿವಾಸಿ ಬ್ಯುಸಿನೆಸ್ ಮ್ಯಾನ್ ಗುರುಪ್ರಸಾದ್ ಎಂದು ತಿಳಿದು ಬಂದಿದೆ.

ಸೆ.20 ರಂದು ಮಂಗಳೂರು ಇಂಟರ್ ಸಿಟಿ ಲಾಡ್ಜ್‍ನಲ್ಲಿ ತಂಗಿದ್ದ, ಗುರುಪ್ರಸಾದ್ ಅವರ ರೂಮ್ ಲಾಕ್ ಆಗಿತ್ತು. ಇಂದು ಸಂಶಯದ ಮೇಲೆ ಪೋಲೀಸರಿಗೆ ದೂರು ನೀಡಿದ್ದು, ಪಾಂಡೇಶ್ಚರ ಎಸ್.ಐ.ಶೀತಲ್ ನೇತ್ರತ್ವದಲ್ಲಿ ಲಾಡ್ಜ್‍ನ ಬಾಗಿಲು ಒಡೆದು ಒಳಗೆ ಪ್ರವೇಶ ಮಾಡಿದಾಗ ಗುರು ಪ್ರಸಾದ ಅವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾವಿಗೆ ಕಾರಣ ಮರಣೋತ್ತರ ಪರೀಕ್ಷೆ ಬಳಿಕ ಗೊತ್ತಾಗಬೇಕಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು