Recent Posts

Sunday, January 19, 2025
ಬಂಟ್ವಾಳ

ಬಂಟ್ವಾಳ: ಅನುಮಾನಾಸ್ಪದವಾದ ರೀತಿಯಲ್ಲಿ ಹರೀಶ್ ಅವರ ಸಾವು..!ಸೂಕ್ತ ತನಿಖೆ ನಡೆಸುವಂತೆ ವಿ.ಹಿಂ.ಪ ಬಜರಂಗದಳ ವಿಟ್ಲ ಪ್ರಖಂಡ ಹಾಗೂ ಬಂಟ್ವಾಳ ಪ್ರಖಂಡ ವತಿಯಿಂದ ತನಿಖಾಧಿಕಾರಿಯವರಿಗೆ ಮನವಿ-ಕಹಳೆ ನ್ಯೂಸ್

ಬಂಟ್ವಾಳ : ಸಜೀಪ ಮೂಡ ಗ್ರಾಮದ ಬೆಂಕೆ ಪದವಿಪೂರ್ವ ಕಾಲೇಜಿನ ಹಿಂಬದಿಯಲ್ಲಿ ಮನೆ ವಾಸಿಸುತ್ತಿರುವ ಹರೀಶ ( 42 ) ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.

ಸಾವಿನ ಶಂಕೆಯನ್ನು ವ್ಯಕ್ತಪಡಿಸಿ ಪೊಲೀಸರು ಪ್ರಕರಣವನ್ನು ಮುಚ್ಚುತ್ತಿದ್ದಾರೆ ಮೇಲ್ನೋಟಕ್ಕೆ ಮೃತದೇಹದಲ್ಲಿ ಗಾಯದ ಗುರುತುಗಳಿದ್ದು ಇದು ಹತ್ಯೆ ಎಂದು ಕಾಣುತ್ತಿದೆ ಆದರೂ ಇದನ್ನು ಮುಚ್ಚಿಹಾಕಲು ಕಾಣದ ಕೈಗಳು ಯತ್ನಿಸುತ್ತಿದ್ದು ಸಾವಿನ ಸಂಪೂರ್ಣ ತನಿಖೆ ನಡೆಸಬೇಕೆಂದು ಹಾಗೂ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ವಿಟ್ಲ ಪ್ರಖಂಡ ಹಾಗೂ ಬಂಟ್ವಾಳ ಪ್ರಖಂಡದ ವತಿಯಿಂದ ತನಿಖಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೆ ಸಂದರ್ಭದಲ್ಲಿ ವಿಶ್ವಹಿಂದುಪರಿಷದ್ ಬಜರಂಗದಳ ಪುತ್ತೂರು ಜಿಲ್ಲಾ ಸಂಚಾಲಕರಾದ ಭರತ್ ಕುಮುಡೆಲ್ ವಿಶ್ವಹಿಂದುಪರಿಷದ್ ಅಧ್ಯಕ್ಷರು ಪದ್ಮನಾಭ ಕಟ್ಟೆ ಕಾರ್ಯದರ್ಶಿ ಲೋಹಿತ್ ಪನೊಲಿಬೈಲ್ ಶಿವಪ್ರಸಾದ್ ತುಂಬೆ ಪ್ರಸಾದ್ ಶಿವಾಜಿನಗರ ಬೆಂಜನಪದವು ಅಬಿನ್ ರೈ ಹಾಗೂ ಸಜೀಪ ವಲಯದ ವಿಶ್ವ ಹಿಂದು ಪರಿಷತ್ ಉಪಾಧ್ಯಕ್ಷ ಸಂದೀಪ ಬಜರಂಗದಳ ಸಜಿಪ ವಲಯ ಸಂಚಾಲ ರಕ್ಷನ್ ಹಾಗೂ ಜವಾಬ್ದಾರಿ ಯುತ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು