Recent Posts

Sunday, January 19, 2025
ಸುದ್ದಿ

ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ : ಮೂವರ ಸೆರೆ ಹಿಡಿದ ಮಂಗಳೂರು ಪೋಲಿಸರು – ಕಹಳೆ ನ್ಯೂಸ್

 ಮಂಗಳೂರು : ಕೊಟ್ಟಾರ ಚೌಕಿ ಬಳಿಯ ಹೊಟೇಲೊಂದರ ಎದುರು ರಾತ್ರಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿತ್ತಾ , ಪರಸ್ಪರ ಕಿರುಚಾಟದಲ್ಲಿ ನಿರತರಾಗಿದ್ದ ಆರೋಪದ ಮೇಲೆ ಮೂವರನ್ನು ಊರ್ವ ಪೊಲೀಸರು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಧಿತರನ್ನು ಅಜಿತ್ ಕುಮಾರ್, ನಿತಿನ್ ಕುಲಾಲ್, ಮತ್ತು ವಿನೋದ್ ಕುಲಾಲ್ ಎಂದು ತಿಳಿದು ಬಂದಿದ್ದು, ಬಿಯರ್ ಬಾಟಲ್ ಹಿಡಿದುಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಅಪಾಯಕಾರಿಯಾಗಿ ವರ್ತಿಸುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಊರ್ವ ಪೊಲೀಸರು ಸ್ಥಳಕ್ಕೆ ತೆರಳಿ ಅವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು