Sunday, January 19, 2025
ಅಂಕಣ

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಪ್ರಬಂಧಕ್ಕೆ ‘ಅತ್ಯುತ್ತಮ ಪ್ರಸ್ತುತಿ’ ಪ್ರಶಸ್ತಿ !- ಕಹಳೆ ನ್ಯೂಸ್

ವಿಡಿಯೋ ಗೇಮ್ಸ್ ಗಳನ್ನು ಆಡುವುದು ಮತ್ತು ಸಾಮಾಜಿಕ ಜಾಲತಾಣದಲ್ಲಿ ಸಮಯ ಕಳೆಯುವುದರಿಂದ ವ್ಯಕ್ತಿಯ ಮೇಲಾಗುವ ನಕಾರಾತ್ಮಕ ಪರಿಣಾಮಗಳು 

ಸಾಮಾಜಿಕ ಜಾಲತಾಣಗಳಾದ ‘ವಿಡಿಯೋ ಗೇಮ್ಸ್’ಗಳು ಮತ್ತು ‘ಫೇಸ್‌ಬುಕ್’ ಇಂದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಎಲ್ಲರ ಹೆಚ್ಚಿನ ಸಮಯವು ಅದರಲ್ಲಿಯೇ ಕಳೆದು ಹೋಗುತ್ತದೆ ಮತ್ತು ಅವುಗಳು ನಮ್ಮ ಜೀವನದ ಮೇಲೆ ಸಾಕಷ್ಟು ಪ್ರಭಾವವನ್ನೂ ಬೀರುತ್ತವೆ. ‘ವೀಡಿಯೋ ಗೇಮ್ಸ್’ಗಳು ಮತ್ತು ಸಾಮಾಜಿಕ ಜಾಲತಾಣಗಳಿಂದ ಶಾರೀರಿಕ ಮತ್ತು ಮಾನಸಿಕ ಸ್ತರದಲ್ಲಿ ಮಾತ್ರವಲ್ಲ, ಆಧ್ಯಾತ್ಮಿಕ ಮಟ್ಟದಲ್ಲಿಯೂ ಹಾನಿಕರ ಪರಿಣಾಮಗಳಾಗುತ್ತವೆ, ಎಂದು ಸಂಶೋಧನೆಯಲ್ಲಿ ಕಂಡುಬಂದಿದೆ, ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಶ್ರೀ. ಶಾನ್ ಕ್ಲಾರ್ಕ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

‘ದಿ ಇಂಟರನ್ಯಾಶನಲ್ ಇನ್ಸ್ ಟಿಟ್ಯೂಟ್ ಆಫ್ ನಾಲೆಜ ಮೆನೆಜಮೆಂಟ್’, ಶ್ರೀಲಂಕಾ (The International Institute of Knowledge Management (TIIKM), Sri Lanka) ಇವರು ಆಯೋಜಿಸಿದ ‘ದ ಏಟ್ತ್ ಇಂಟರನ್ಯಾಶನಲ್ ಕಾನ್ಫರೆನ್ಸ ಆನ್ ಆರ್ಟ್ಸ್ ಎಂಡ್ ಹ್ಯುಮಾನಿಟಿಸ್, 2021’ (The 8th International Conference on Arts and Humanities (ICOAH) 2021, Sri Lanka) ಈ ವಿಷಯದ ಕುರಿತು ಅಂತಾರಾಷ್ಟ್ರೀಯ ಪರಿಷತ್ತಿನಲ್ಲಿ ಅವರು ಮಾತನಾಡುತ್ತಿದ್ದರು. ಶ್ರೀ. ಕ್ಲಾರ್ಕ್ ಇವರು ‘ವಿಡಿಯೋ ಗೇಮ್ಸ್‌ಗಳನ್ನು ಆಡುವುದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತಲ್ಲೀನರಾಗುವುದು ಇವುಗಳ ಸೂಕ್ಷ್ಮ ಪರಿಣಾಮ’ ಎಂಬ ಶೋಧಪ್ರಬಂಧವನ್ನು ಮಂಡಿಸಿದರು. ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆಯವರು ಈ ಶೋಧ ಪ್ರಬಂಧದ ಲೇಖಕರಾಗಿದ್ದಾರೆ ಹಾಗೂ ಶ್ರೀ. ಶಾನ್ ಕ್ಲಾರ್ಕ್ ಸಹ-ಲೇಖಕರಾಗಿದ್ದಾರೆ. ಈ ಪರಿಷತ್ತಿನಲ್ಲಿ 20 ಕ್ಕೂ ಹೆಚ್ಚು ದೇಶಗಳಿಂದ 60 ಕ್ಕೂ ಹೆಚ್ಚು ಶೋಧಪ್ರಬಂಧಗಳನ್ನು ಪ್ರಸ್ತುತಪಡಿಸಲಾಯಿತು. ಈ ಪೈಕಿ 5 ನಿರೂಪಕರನ್ನು ‘ಅತ್ಯುತ್ತಮ ನಿರೂಪಕ’ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಇದರಲ್ಲಿ ಶ್ರೀ. ಶಾನ್ ಕ್ಲಾರ್ಕ್ ಅವರನ್ನು ಆಯ್ಕೆ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ವಿವಿಧ ವೈಜ್ಞಾನಿಕ ಪರಿಷತ್ತುಗಳಲ್ಲಿ ಪ್ರಸ್ತುತಪಡಿಸಿದ ಪ್ರಬಂಧಗಳಲ್ಲಿ ಇದು 79 ನೇ ಪ್ರಸ್ತುತಿಯಾಗಿತ್ತು. ಈ ಹಿಂದೆ ವಿಶ್ವವಿದ್ಯಾಲಯವು 15 ರಾಷ್ಟ್ರೀಯ ಮತ್ತು 63 ಅಂತರಾಷ್ಟ್ರೀಯ ವೈಜ್ಞಾನಿಕ ಪರಿಷತ್ತುಗಳಲ್ಲಿ ಶೋಧ ಪ್ರಬಂಧಗಳನ್ನು ಮಂಡಿಸಿದೆ. ಇವುಗಳಲ್ಲಿ 6 ಅಂತರರಾಷ್ಟ್ರೀಯ ಪರಿಷತ್ತುಗಳಲ್ಲಿ ‘ಅತ್ಯುತ್ತಮ ಶೋಧ ಪ್ರಬಂಧ’ ಪ್ರಶಸ್ತಿಯನ್ನು ಪಡೆದಿದೆ.

ಶ್ರೀ. ಕ್ಲಾರ್ಕ್ ಇವರು ‘ಪ್ರಭಾವಲಯ ಮತ್ತು ಉರ್ಜೆ ಮಾಪಕ ಯಂತ್ರ’ (ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಮತ್ತು ಸೂಕ್ಷ್ಮ ಪರೀಕ್ಷಣೆಗಳ ಮೂಲಕ ‘ವಿಡಿಯೋ ಗೇಮ್ಸ್ ಗಳನ್ನು ಆಡುವುದು ಮತ್ತು ಸಾಮಾಜಿಕ ಜಾಲತಾಣದಲ್ಲಿ ತಲ್ಲೀನಗೊಳ್ಳುವುದರಿಂದಾಗುವ ಸೂಕ್ಷ್ಮ ಪರಿಣಾಮಗಳ ಕುರಿತು ಮಾಡಿದ ಸಂಶೋಧನೆಯ ಬಗ್ಗೆ ನೀಡಿದ ಮಾಹಿತಿಯನ್ನು ಸಂಕ್ಷಿಪ್ತವಾಗಿ ಮುಂದೆ ನೀಡಲಾಗಿದೆ.

೧. ‘ಯು.ಎ.ಎಸ್.’ ನ ಆಧಾರದ ಮೇಲೆ ವಿಡಿಯೋ ಗೇಮ್ಸ್‌ಗಳನ್ನು ಆಡುವುದರಿಂದಾಗುವ ಪರಿಣಾಮದ ಅಧ್ಯಯನ : ಸಂಶೋಧನಾಕೇಂದ್ರದಲ್ಲಿ ವಾಸಿಸುವ 5 ಸಾಧಕರನ್ನು ಕೇವಲ ಒಂದು ಗಂಟೆ ಒಂದು ಆಕ್ರಮಣಕಾರಿ ‘ವಿಡಿಯೋ ಗೇಮ್ಸ್’ (ಫಸ್ಟ ಪರ್ಸನ್ ಶೂಟರ್ ವಿಡಿಯೋ ಗೇಮ್) ಆಡಲು ಹೇಳಲಾಯಿತು. ಈ ಆಟವನ್ನು ಆಡುವ ಮೊದಲು ಮತ್ತು ನಂತರ ಸಾಧಕರನ್ನು ‘ಯು.ಎ.ಎಸ್.’ ಸಾಧನದ ಆಧಾರದ ಮೇಲೆ ಅಳೆಯಲಾಯಿತು. ಗೇಮ್ ಆಡಿದ ನಂತರ ಎಲ್ಲಾ ಐದು ಸಾಧಕರಲ್ಲಿ ನಕಾರಾತ್ಮಕ ಶಕ್ತಿಯು ಬಹಳಷ್ಟು ಹೆಚ್ಚಾಯಿತು ಅಥವಾ ಅವರಲ್ಲಿದ್ದ ಸಕಾರಾತ್ಮಕ ಶಕ್ತಿ ಕಡಿಮೆ ಆಯಿತು, ಎಂದು ಕಂಡುಬಂದಿತು. ಇವರಲ್ಲಿ, ಅವರ ಪೈಕಿ 2 ಸಾಧಕರಲ್ಲಿ ಗೇಮ್ ಆಡುವ ಮೊದಲು ನಕಾರಾತ್ಮಕ ಶಕ್ತಿ ಇರಲಿಲ್ಲ, ಅದರಲ್ಲಿ ಗೇಮ್ ಆಡಿದ ನಂತರ ನಕಾರಾತ್ಮಕ ಶಕ್ತಿಯು ಉತ್ಪನ್ನವಾಯಿತು. ಇವುಗಳಲ್ಲಿ ಮೊದಲೇ ಆಧ್ಯಾತ್ಮಿಕ ತೊಂದರೆ ಇದ್ದ ಓರ್ವ ಸಾಧಕನ ನಕಾರಾತ್ಮಕ ಶಕ್ತಿಯು 72 ಶೇ. ದಷ್ಟು ಹೆಚ್ಚಾಯಿತು.

೨. ‘ಯು.ಎ.ಎಸ್.’ನ ಆಧಾರದಲ್ಲಿ ಸಾಮಾಜಿಕ ಜಾಲತಾಣಗಳನ್ನು ವೀಕ್ಷಿಸುವುದರಿಂದಾದ ಪರಿಣಾಮದ ಅಧ್ಯಯನ : ಸಂಶೋಧನಾಕೇಂದ್ರದಲ್ಲಿ ವಾಸಿಸುವ ೫ ಸಾಧಕರಿಗೆ ತಮ್ಮ ಪ್ರತಿನಿತ್ಯದ ಸಾಮಾಜಿಕ ಜಾಲತಾಣದ ಖಾತೆಯನ್ನು ಪೋಸ್ಟ್‌ಅನ್ನು ಒಂದು ಗಂಟೆಗಳ ಕಾಲ ನೋಡಲು ಹೇಳಲಾಯಿತು. ನೋಡುವ ಮೊದಲು ಮತ್ತು ನಂತರ, ಎಲ್ಲಾ ಐದು ಸಾಧಕರನ್ನು ‘ಯು.ಎ.ಎಸ್.’ ಉಪಕರಣದ ಆಧಾರದಲ್ಲಿ ಅಳೆಯಲಾಯಿತು. ಸಾಧಕರು ಕೇವಲ ತಮ್ಮ ‘ಫೇಸ್‌ಬುಕ್’ ಮತ್ತು ‘ಇನ್‌ಸ್ಟಾಗ್ರಾಮ್’ ಖಾತೆಗಳಲ್ಲಿನ ಪೋಸ್ಟ್‌ಗಳನ್ನು ನೋಡಿದ್ದರಿಂದ ನಕಾರಾತ್ಮಕ ಶಕ್ತಿಯು ಶೇ. 15 ರಿಂದ 30 ರಷ್ಟು ಹೆಚ್ಚಾಗಿರುವುದು ಕಂಡುಬಂದಿತು.

೩. ‘ಯು.ಎ.ಎಸ್.’ ಆಧಾರದಲ್ಲಿ ಆಧ್ಯಾತ್ಮಿಕ ಜಾಲತಾಣಗಳನ್ನು ವೀಕ್ಷಿಸುವುದರಿಂದಾದ ಪರಿಣಾಮಗಳ ಅಧ್ಯಯನ : ಮೇಲಿನ ಗುಂಪಿನ 2 ಸಾಧಕರಿಗೆ ‘ಸ್ಪಿರಿಚ್ಯುವಲ್ ಸೈನ್ಸ್ ರಿಸರ್ಚ್ ಫೌಂಡೇಶನ್’ ಈ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನೆ ಮತ್ತು ಸಾಧನೆಯನ್ನು ಮಂಡಿಸುವ ಜಾಲತಾಣದ ‘ಫೇಸ್‌ಬುಕ್’ ಖಾತೆಯಲ್ಲಿನ ಪೋಸ್ಟ್ ನೋಡಲು ಹೇಳಲಾಯಿತು. ನೋಡುವ ಮೊದಲು ಮತ್ತು ನಂತರ ಮಾಡಿದ ಅಳತೆಯಲ್ಲಿ ಈ ಸಾಧಕರಲ್ಲಿ ನಕಾರಾತ್ಮಕ ಶಕ್ತಿಯು ಕಡಿಮೆ ಆಯಿತು ಹಾಗೂ ಅವರಲ್ಲಿ ಸಕಾರಾತ್ಮಕ ಶಕ್ತಿಯು ಹೆಚ್ಚಾಯಿತು ಎಂಬುದು ಗಮನಕ್ಕೆ ಬಂದಿತು. ಇದರಿಂದ ಸಾಮಾಜಿಕ ಜಾಲತಾಣದಲ್ಲಿ ನಾವು ಯಾವ ರೀತಿಯ ಸಾಹಿತ್ಯವನ್ನು ನೋಡುತ್ತೇವೆ, ಎಂಬುದು ನೋಡುವವರ ಮೇಲೆ ಯಾವ ಪರಿಣಾಮ ಆಗಲಿದೆ, ಎಂಬುದನ್ನು ನಿರ್ಧರಿಸುವ ಮಹತ್ವದ ನಿಷ್ಕರ್ಷವು ಗಮನಕ್ಕೆ ಬಂತು.

‘ವಿಡಿಯೋ ಗೇಮ್ಸ್’ಗಳು ಮತ್ತು ಸಾಮಾಜಿಕ ಜಾಲತಾಣಗಳನ್ನು ನಾವು ಹೇಗೆ ಬಳಸುತ್ತೇವೆ ಮತ್ತು ಅವುಗಳ ಮೂಲಕ ನಾವು ಏನು ನೋಡುತ್ತೇವೆ ಎಂಬುದರ ಮೇಲೆ ನಮ್ಮ ಮೇಲೆ ಸಕಾರಾತ್ಮಕ ಅಥವಾ ನಕಾರಾತ್ಮಕ ಪರಿಣಾಮವಾಗಲಿದೆ ಎಂದು ನಿರ್ಧರಿತವಾಗುತ್ತದೆ. ದುರದೃಷ್ಟವಶಾತ್, ಹೆಚ್ಚಿನ ವಿಡಿಯೋ ಗೇಮ್ಸ್’ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟಗಳು ನಕಾರಾತ್ಮಕ ಸ್ಪಂದನಗಳನ್ನು ಪ್ರಕ್ಷೇಪಿಸುತ್ತದೆ. ಏನನ್ನು ನೋಡುತ್ತೇವೆಯೋ ಅದರ ಬಗ್ಗೆ ಜಾಗರೂಕರಾಗಿದ್ದರೆ, ಅದು ಹಾನಿಕರವಾಗುವ ಬದಲು ನಮ್ಮ ಆಧ್ಯಾತ್ಮಿಕ ಉನ್ನತಿಗೆ ಪೂರಕವಾಗಬಹುದು !

ತಮ್ಮ ಸವಿನಯ
ಶ್ರೀ. ರೂಪೇಶ ರೇಡಕರ್,
ಸಂಶೋಧನೆ ವಿಭಾಗ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ
ಸಂಪರ್ಕ : 9561574972