Tuesday, January 21, 2025
ಪುತ್ತೂರು

2 ಲಕ್ಷಕ್ಕೂ ಅಧಿಕ ಮೌಲ್ಯದ ಮರದ ದಿಮ್ಮಿಗಳು ಮನೆಯಲ್ಲಿ ಸಂಗ್ರಹ, ಪುತ್ತೂರಿನ ಅರುಣ್ ಕುಮಾರ್ ಮನೆಗೆ ಅರಣ್ಯಾಧಿಕಾರಿಗಳಿಂದ ದಾಳಿ- ಕಹಳೆ ನ್ಯೂಸ್

ಪುತ್ತೂರು ಅರಣ್ಯ ಇಲಾಖೆಯಿಂದ, KFDS ಇಲಾಖಾ ನೌಕರರೋರ್ವರ ಮನೆಗೆ ದಾಳಿ ನಡೆದಿದೆ. ಪುತ್ತೂರು KFDS ಇಲಾಖೆಯ ನೌಕರರಾಗಿರುವ ಅರಿಯಡ್ಕ ಗ್ರಾಮದ ಮಡ್ಯಂಗಳ ನಿವಾಸಿ ಅರುಣ್ ಕುಮಾರ್‌ರವರ ,ಮನೆಯಲ್ಲಿ ಸುಮಾರು 2.5 ಲಕ್ಷ ಮೌಲ್ಯದ ಬೀಟೆ, ಹಲಸು, ಸಾಗುವಾಣಿ ಮತ್ತು ಇತರೆ ಜಾತಿಯ ಮರಗಳ ದಿಮ್ಮಿಗಳ ದಾಸ್ತಾನು ಇರುವುದು ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಈ ವಿಚಾರ ತಿಳಿದು ಅಧಿಕಾರಿಗಳು ಅರುಣ್ ಕುಮಾರ್‌ರವರ ಮನೆಗೆ ದಾಳಿ ನಡೆಸಿದ್ದಾರೆ. ಈ ವೇಳೆ ಅರುಣ್ ಮನೆಯಲ್ಲಿ ಅಕ್ರಮ ಮರದ ದಿಮ್ಮಿಗಳು ಪತ್ತೆಯಾಗಿದ್ದು, ಅವೆಲ್ಲವನ್ನು ಅಧಿಕಾರಿಗಳು ಸ್ವಾಧೀನ ಪಡಿಸಿಕೊಂಡಿದ್ದಾರೆ. ಜೊತೆಗೆ ಅರುಣ್ ಕುಮಾರ್ ಅವರ ವಿರುದ್ಧ ಪ್ರಕರಣ ದಾಖಲಿಸಿದ್ಧಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು