ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ವತಿಯಿಂದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ105 ನೇ ಜನ್ಮದಿನಾಚರಣೆ- ಕಹಳೆ ನ್ಯೂಸ್
ಮಂಗಳೂರು: ಏಕಾತ್ಮ ಮಾನವ ದರ್ಶನ ಮತ್ತು ಅಂತ್ಯೋದಯದ ಪರಿಕಲ್ಪನೆಯನ್ನು ತೋರಿಸಿಕೊಟ್ಟ, ಜನಸಂಘದ ಸ್ಥಾಪಕರಾದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ105 ನೇ ಜನ್ಮದಿನಾಚರಣೆ ಕಾರ್ಯಕ್ರಮ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ವತಿಯಿಂದ ದಿವೈಶ್ಯ ಎಜುಕೇಶನ್ ಸೊಸೈಟಿ ಸಭಾಂಗಣದಲ್ಲಿ ಮಂಡಲ ಅಧ್ಯಕ್ಷರಾದ ಶ್ರೀವಿಜಯ ಕುಮಾರ್ ಶೆಟ್ಟಿ ಅವರ ಅದ್ಯಕ್ಷತೆಯಲ್ಲಿ ಹಾಗೂ ಶಾಸಕರಾದ ಶ್ರೀ.ಡಿ.ವೇದವ್ಯಾಸ ಕಾಮತ್ ರವರ ಉಪಸ್ಥಿತಿಯಲ್ಲಿ ಜರುಗಿತು. ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪಚಾರಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಂಡಲ ಅಧ್ಯಕ್ಷರಾದ ಶ್ರೀ ವಿಜಯ ಕುಮಾರ್ ಶೆಟ್ಟಿ ಅವರು ಪಂಡಿತ್ ದೀನ್ ದಯಳ್ ಉಪಾಧ್ಯಾಯ ಅವರ ಚಿಂತನೆ, ವಿಚಾರ, ಅವರು ಪ್ರತಿಪಾದಿಸಿದ ಏಕಾತ್ಮಮಾನವತಾ ಸಿದ್ಧಾಂತ ಹಾಗೂ ಅಂತ್ಯೋದಯದ ಕಲ್ಪನೆ ಇವತ್ತಿಗೂ ಪ್ರಸ್ತುತ ಎಂದು ನುಡಿ ನಮನ ಸಲ್ಲಿಸಿದರು. ಮೂಡ ಅಧ್ಯಕ್ಷರಾದ ಶ್ರೀ ರವಿಶಂಕರ್ ಮಿಜಾರ್ ಅವರು ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜೀವನದ ಬಗ್ಗೆ ಬೌದ್ಧಿಕ್ ಮಂಡಿಸಿದರು. ಮಂಡಲ ಉಪಾಧ್ಯಕ್ಷರಾದ ಶ್ರೀ ಅಜಯ ಕುಲಶೇಕರ್ ಅವರು ಪ್ರಧಾನ ಮಂತ್ರಿ ಮೋದಿಯವರ 71ನೇ ಹುಟ್ಟು ಹಬ್ಬದ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡಿರುವ ಸೇವಾ ಮತ್ತು ಸಮರ್ಪಣಾ ಅಭಿಯಾನದ ಅಂಗವಾಗಿ ಪ್ರತಿಜ್ಞಾ ವಿಧಿ ಭೋದಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ರೂಪ ಡಿ ಬಂಗೇರ ಸ್ವಾಗತಿಸಿದರು , ಮಂಡಲ ಕಾರ್ಯದರ್ಶಿ ಶ್ರೀ ಲಲ್ಲೇಶ್ ಧನ್ಯವಾದ ಸಮರ್ಪಿಸಿದರು . ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಹಿರಿಯರಾದ ಶ್ರೀ ಮೋನಪ್ಪ ಭಂಡಾರಿ , ಮೀನುಗಾರಿಕಾ ನಿಗಮದ ಅಧ್ಯಕ್ಷರಾದ ಶ್ರೀ ನಿತಿನ್ ಕುಮಾರ್ ,ದಿ| ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಕಂಪನಿಯ ಅಧ್ಯಕ್ಷರಾದ ಶ್ರೀ ಸಂತೋμï ಕುಮಾರ್ ರೈ ಬೋಳಿಯಾರ್, ಮ ನ ಪಾ ಮಹಾ ಪೌರರಾದ ಶ್ರೀ ಪ್ರೇಮಾನಂದ ಶೆಟ್ಟಿ , ಜಿಲ್ಲಾ ಬಿಜೆಪಿ ಪ್ರಧಾನಕಾರ್ಯದರ್ಶಿಯಾದ ಶ್ರೀ ಸುಧೀರ್ ಶೆಟ್ಟಿ ಕಣ್ಣೂರ್ ,ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀ ಸುರೇಂದ್ರ ಜೆ , ಮಂಡಲ ಉಪಾಧ್ಯಕ್ಷರಾದ ಶ್ರೀ ಕಿರಣ್ ರೈ ,ಶ್ರೀ ರಮೇಶ್ ಹೆಗ್ಡೆ ,ಶ್ರೀ ರಮೇಶ್ ಕಂಡೆಟ್ಟು , ಶ್ರೀಮತಿ ಮೀರಾ ಕರ್ಕೇರ, ಮಂಡಲ ಕೋಶಾಧಿಕಾರಿ ಶ್ರೀ ಶ್ರೀನಿವಾಸ್ ಶೇಟ್ , ಮಂಡಲ ಕಾರ್ಯದರ್ಶಿಗಳಾದ ಶ್ರೀ ವಿನೋದ್ ಮೆಂಡನ್ ಹಾಗೂ ಶ್ರೀಮತಿ ಸುರೇಖಾ ಹೆಗ್ಡೆ ,ಮಂಡಲ ಪದಾಧಿಕಾರಿಗಳು , ಮ ನ ಪಾ ಸದಸ್ಯರು , ಮಹಾಶಕ್ತಿ ಕೇಂದ್ರ ಪದಾಧಿಕಾರಿಗಳು , ವಿವಿಧ ಮೋರ್ಚಾಗಳ ಹಾಗೂ ಪ್ರಕೋಷ್ಠಗಳ ಪದಾಧಿಕಾರಿಗಳು, ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.