Monday, January 20, 2025
ಪುತ್ತೂರು

ಕುಂಜೂರು ಪಂಜ: ಚಾಕಲೇಟ್ ಆಮಿಷವೊಡ್ಡಿ ಶಾಲಾ ಬಾಲಕಿಗೆ ಕಿರುಕುಳ: ಬೈಕ್‍ನಲ್ಲಿ ಬಂದ ಅಪರಿಚಿತ ವ್ಯಕ್ತಿಯಿಂದ ಕೃತ್ಯ- ಕಹಳೆ ನ್ಯೂಸ್

ಪುತ್ತೂರು: ಮಧ್ಯಾಹ್ನ ತರಗತಿ ಮುಗಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಅಪ್ರಾಪ್ತಿಯಾಗಿರುವ ಶಾಲಾ ವಿದ್ಯಾರ್ಥಿನಿಯೋರ್ವಳಿಗೆ ಹಿಂಬದಿಯಿಂದ ಬೈಕ್‍ನಲ್ಲಿ ಬಂದ ಅಪರಿಚಿತ ವ್ಯಕ್ತಿಯೋರ್ವ ಚಾಕಲೇಟ್ ಕೊಡಿಸುವುದಾಗಿ ಆಮಿಷವೊಡ್ಡಿ ಕಿರುಕುಳ ನೀಡಿದ ಘಟನೆ ಕುಂಜೂರುಪಂಜದಲ್ಲಿ ನಡೆದಿದೆ.
ಕುಂಜೂರುವಂಜೆ ಶಾಲೆಯ ವಿದ್ಯಾರ್ಥಿನಿ ಸೆ.23ರಂದು ಮನೆಗೆ ನಡೆದುಕೋಮಡು ಹೋಗುತ್ತಿರುವ ಸಂದರ್ಭದಲ್ಲಿ ಹಿಂಬದಿಯಿಂದ ಬೈಕ್‍ನಲ್ಲಿ ಬಂದ ಅಪರಿಚಿತ ವ್ಯಕ್ತಿಯೋರ್ವ ಆಕೆಯ ಬಳಿ ಬೈಕ್ ನಿಲ್ಲಿಸಿ ನಿನಗೆ ಚಾಕಲೇಟ್ ಕೊಡಿಸುತ್ತೇನೆ. ನನ್ನೊಂದಿಗೆ ಬೈಕ್‍ನಲ್ಲಿ ಬಾ ಎಂದು ಕರೆದಿದ್ದು, ಆತಂಕಗೊಂಡ ವಿದ್ಯಾರ್ಥಿನಿ ಅಲ್ಲಿಂದ ಓಡಿ ಸುರಕ್ಷಿತವಾಗಿ ಮನೆ ಸೇರಿ ಘಟನೆಯ ಕುರಿತು ಪೋಷಕರಿಗೆ ಮಾಹಿತಿ ನೀಡಿದ್ದಾಳೆ. ಮನೆಯವರು ಈ ಕುರಿತು ಶಾಲೆಗೆ ಹಾಗೂ ಪೊಲೀಸರಿಗೆ ಮೌಖಿಕವಾಗಿ ತಿಳಿಸಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು