Monday, January 20, 2025
ಪುತ್ತೂರು

ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ 2020 ಅವಕಾಶಗಳು ಮತ್ತು ಸವಾಲುಗಳು’ – ರಾಷ್ಟ್ರ ಮಟ್ಟದ ವೆಬಿನಾರ್ – ಕಹಳೆ ನ್ಯೂಸ್

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಐಕ್ಯೂಎಸಿ ಮತ್ತು ಎನ್‍ಇಪಿ ಟಾಸ್ಕ್ ಫೋರ್ಸ್ ಆಶ್ರಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಅವಕಾಶಗಳು ಮತ್ತು ಸವಾಲುಗಳು’ ಕುರಿತು ನಡೆದ ರಾಷ್ಟ್ರ ಮಟ್ಟದ ವೆಬಿನಾರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮಾತನಾಡಿದ ಎಮ್‍ಐಟಿ ಮಣಿಪಾಲದ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಮುಖ್ಯಸ್ಥ ಹಾಗೂ ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಡಾ. ಕರುಣಾಕರ್ ಕೋಟೆಕಾರ್ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಗುಣಾತ್ಮಕ ಶಿಕ್ಷಣವನ್ನು ನೀಡುವ ಸಂಕಲ್ಪವನ್ನು ಹೊಂದಿದೆ. ಇದು ವಿದ್ಯಾರ್ಥಿಗಳ ಸರ್ವಾಂಗೀಣ ವಿಕಸನಕ್ಕೆ ನಾಂದಿಯಾಗಲಿದೆ. ಈ ನೀತಿಯು ಪೂರ್ಣ ಪ್ರಮಾಣದಲ್ಲಿ ಜಾರಿಗೊಂಡಾಗ ಭಾರತವು ಜ್ಞಾನಕ್ಷೇತ್ರದಲ್ಲಿ ವಿಶ್ವ ಗುರುವಿನ ಸ್ಥಾನಮಾನವನ್ನು ಹೊಂದಲಿದೆ. ನಮ್ಮ ಶಿಕ್ಷಣ ಕ್ರಮ ಮತ್ತು ಬೋಧನ ಕ್ರಮಗಳು ವಿದ್ಯಾರ್ಥಿಗಳಲ್ಲಿ ಮೂಲಭೂತ ಕರ್ತವ್ಯಗಳು ಮತ್ತು ಸಂವಿಧಾನಾತ್ಮಕ ಮೌಲ್ಯಗಳ ಕುರಿತು ಆಳವಾದ ಗೌರವಾದರಗಳನ್ನು ಹುಟ್ಟು ಹಾಕುವಂತಾಗಬೇಕು. ಈ ದೇಶದ ಪ್ರತಿಯೊಬ್ಬ ಪ್ರಜೆಯೂ ಅಗತ್ಯವಾದ ಜ್ಞಾನ, ಕೌಶಲ, ಮೌಲ್ಯ, ಸಾಮಥ್ರ್ಯ ಮತ್ತು ಅನುಭವವನ್ನು ಸಂಪಾದಿಸಬೇಕು. ಈ ನೀತಿಯು ಉತ್ತಮ ದೂರದರ್ಶಿತ್ವ ಅಂಶಗಳನ್ನು ಹೊಂದಿದ್ದು, ಶಿಕ್ಷಣ ಸಂಸ್ಥೆಗಳು ಸಾಕಷ್ಟು ಪೂರ್ವ ತಯಾರಿಯನ್ನು ನಡೆಸುವ ಅಗತ್ಯವಿದೆ ಎಂದು ಹೇಳಿದರು.
ಈ ಕಾರ್ಯಾಗಾರದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ವಹಿಸಿದ್ದರು. ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ವಿನಯಚಂದ್ರ ಮತ್ತು ಎನ್‍ಇಪಿ ಟಾಸ್ಕ್ ಫೋರ್ಸ್ ಸಂಯೋಜಕ ಡಾ. ಕೆ ಚಂದ್ರಶೇಖರ್ ಸಹಕರಿಸಿದರು. ಐಕ್ಯೂಎಸಿ ಸಂಯೋಜಕ ಡಾ. ಎ ಪಿ ರಾಧಾಕೃಷ್ಣ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಗೀತಾ ಪೂರ್ಣಿಮಾ ಕೆ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು

ಜಾಹೀರಾತು
ಜಾಹೀರಾತು