Recent Posts

Monday, January 20, 2025
ಮೂಡಬಿದಿರೆ

ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ – ಕಹಳೆ ನ್ಯೂಸ್

ಮೂಡುಬಿದಿರೆ : 2020ರ ಸಾಲಿನ ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳು ಕಲ್ಲಬೆಟ್ಟು ಮೂಡುಬಿದಿರೆಯಲ್ಲಿ ಏರ್ಪಡಿಸಲಾಗಿತ್ತು.

2020ರ ಸಾಲಿನಲ್ಲಿ ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿ ಕಾಲೇಜಿಗ ಪ್ರಥಮ ಸ್ಥಾನ ಪಡೆದು ಪ್ರಸ್ತುತ ಪ್ರತಿಷ್ಠ್ಟಿತ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿರುವ ಸಾಗರ ತಾಲೂಕಿನ ಶ್ರೀಮತಿ ಸತ್ಯವತಿ ಮತ್ತು ಜಿ ರಾಮಚಂದ್ರ ದಂಪತಿಗಳ ಪುತ್ರನಾದ ಶ್ರೇಯಸ್ ಜಿ ಆರ್(660 ಅಂಕ)ಮತ್ತು ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಶಿವಮೊಗ್ಗದ ವಸುಮತಿ ಹೆಬ್ಬಾರ್ ಮತ್ತು ಪ್ರಕಾಶ್ ವಿ ಎಸ್ ದಂಪತಿಗಳ ಮಗಳಾದ ಸಹನಾ ವಿ ಪಿ (653 ಅಂಕ) ಇವರನ್ನು ಶಿಕ್ಷಣ ಸಂಸ್ಥೆಯ ವತಿಯಿಂದ ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ ಸುರೇಂದ್ರ ಕುಮಾರ್ ಮತ್ತು ಅನಿತಾ ಸುರೇಂದ್ರ ಕುಮಾರ್ ದಂಪತಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಡಿ ಸುರೇಂದ್ರಕುಮಾರ್ ಅವರು ಮಾತನಾಡಿ ಸಮಾಜ ಗುರುತಿಸುವುದು ಮನುಷ್ಯನ ಶ್ರೀಮಂತಿಕೆಯನ್ನಲ್ಲ ಬದಲಾಗಿ ಉತ್ತಮ ಚಾರಿತ್ರ್ಯ ಹಾಗೂ ಸಂಸ್ಕಾರಭರಿತ ಶಿಕ್ಷಣದಿಂದ ಹಾಗೆಯೇ ಒಬ್ಬ ಒಳ್ಳೆಯ ಓದುಗ ಅತ್ಯುತ್ತಮ ನಾಯಕನಾಗಲು ಸಾಧ್ಯವಿದೆ. ಎಕ್ಸಲೆಂಟ್ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಗುರುಕುಲ ಮಾದರಿಯಲ್ಲಿ ಶಿಕ್ಷಣ ಪಡೆಯುತ್ತಾ ಸಾಧನೆಯ ಶಿಖರ ಏರುತ್ತಿರುವುದು ಪ್ರಶಂಸನೀಯ ಎಂದು ನುಡಿದರು.. ಶ್ರೀಮತಿ ಅನಿತಾ ಸುರೇಂದ್ರಕುಮಾರ್ ಮಾತನಾಡುತ್ತಾ, ಗುರುಗಳಿಂದಾಗಿ ವಿದ್ಯಾರ್ಥಿಗಳು, ಮಣ್ಣು ಹದವಾದಾಗ ಮಾತ್ರ ಮಡಿಕೆ ಸರಿಬರುವಂತೆ, ವಿದ್ಯಾರ್ಥಿಯ ತಪ್ಪುಗಳನ್ನು ತಿದ್ದಿದಾಗ ಮಾತ್ರ ಅವನ ಸಾಧನೆಗೆ ದಾರಿಯಾಗುತ್ತದೆ. ಎಕ್ಸಲೆಂಟ್ ಸಂಸ್ಥೆಯಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಶಿಸ್ತುಬದ್ಧ ಶಿಕ್ಷಣ ದೊರಕುತ್ತಿದೆ. ಸರಿದಾರಿ ತೋರಿದ ರೀತಿಯನ್ನು ಜೀವನದಲ್ಲಿ ಸರಿಯಾಗಿ ಉಪಯೋಗಿಸಿಕೊಳ್ಳುವುದು ವಿದ್ಯಾರ್ಥಿಗಳ ಕೈಯಲ್ಲಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಇವರು ಕಠಿಣ ಪರಿಶ್ರಮದಿಂದ ಪ್ರಯತ್ನ ಪಟ್ಟರೆ ಅವಕಾಶಗಳು ತಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂದು ವಿದ್ಯಾರ್ಥಿಗಳಿಗೆ ಹಿತ ನುಡಿದರು.

ಕಾರ್ಯಕ್ರಮದಲ್ಲಿ ಜೆಇಇ ಸಂಯೋಜಕ ಪ್ರೊ. ರಾಮಮೂರ್ತಿ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಸ್ವಾಗತಿಸಿ, ನೀಟ್ ಸಂಯೋಜಕ ಡಾ. ಪ್ರಶಾಂತ್ ಹೆಗಡೆ ಸಾಧಕರನ್ನು ಪರಿಚಯಿಸಿದರು, ಡಾ. ದಯಾನಂದ ಪಿ ವಂದಿಸಿ, ತೇಜಸ್ವೀ ಭಟ್ ಕಾರ್ಯಕ್ರಮ ನಿರೂಪಿಸಿದರು.