Recent Posts

Monday, January 20, 2025
ಪುತ್ತೂರು

ಪುತ್ತೂರು ಗ್ರಾಮಾಂತರ ಠಾಣಾ ಎಸ್ ಐ ಉದಯ ರವಿ ನೇತೃತ್ವದಲ್ಲಿ ಬಲ್ನಾಡು ಗ್ರಾಮದ ಬೀಟ್ ಸಭೆ -ಕಹಳೆ ನ್ಯೂಸ್

ಬಲ್ನಾಡು ಗ್ರಾಮದ ಬೀಟ್ ಸಭೆ ಬೆಳಿಯೂರುಕಟ್ಟೆಯ ಸಾಜ ಕ್ರಾಸ್ ಬಳಿ ಪುತ್ತೂರು ಗ್ರಾಮಾಂತರ ಠಾಣಾ ಎಸ್ ಐ ಉದಯ ರವಿ ನೇತೃತ್ವದಲ್ಲಿ ಜರಗಿತು.

ಈ ಸಂದರ್ಭದಲ್ಲಿ ಮಾತಾಡಿದ ಅವರು ಪ್ರಸುತ ದಿನಗಳಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಇವುಗಳನ್ನು ತಡೆಗಟ್ಟಲು ಸಾರ್ವಜನಿಕರು ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕಾಗಿ, ಮತ್ತು ಬೆಳಿಯೂರುಕಟ್ಟೆಯ ಸಾಜ ಕ್ರಾಸ್ ಬಳಿ ಸಾರ್ವಜನಿಕರ ಸಹಕಾರದಿಂದ ಸಿ ಸಿ ಕ್ಯಾಮೆರಾ ಅಳವಡಿಸುವ ಬಗ್ಗೆ ಚರ್ಚಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಬಲ್ನಾಡು ಗ್ರಾಮ ಪಂಚಾಯತ್ ಅಧ್ಯಕರಾದ ಇಂದಿರಾ ರೈ ಎಸ್ ಬೀಡು, ಉಪಾಧ್ಯಕ್ಷರಾದ ಪರಮೇಶ್ವರಿ ಭಟ್, ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಪ್ರಕಾಶ್ ಚಂದ್ರ ಆಳ್ವ ಮುಂಡೇಲು, ಸಂಪ್ಯ ಠಾಣಾ ಎ ಎಸ್ ಐ ಆಗಿರುವ ಶ್ರೀ ಧರ್ ರೈ, ಯೂಸುಪ್ ಗೌಸಿಯ ಸಾಜ, ಬಲ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ರವಿಚಂದ್ರ ಸಾಜ, ಅಕ್ಷಯ್ ರೈ ಸಲ್ಪಾಜೆ , ಹಕೀಂ ಬೆಳಿಯೂರುಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು