Sunday, January 19, 2025
ರಾಜಕೀಯ

ಹಿಂದುತ್ವವನ್ನೇ ಬದುಕಾಗಿಸಿ ದುಡಿದರೂ, ಈಗ ನನ್ನ ತೇಜೋವಧೆ ಮಾಡುತ್ತಿದ್ದಾರೆ ; ಸತ್ಯಜಿತ್ ಸುರತ್ಕಲ್ ಕಣ್ಣೀರು – ಕಹಳೆ ನ್ಯೂಸ್

ಮಂಗಳೂರು : ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಬಿಜೆಪಿಯಿಂದ ಈಗಾಗಲೇ ಪ್ರವೀಣ್ ಭಾಯ್ ತೊಗಾಡಿಯಾ ಮತ್ತು ಪ್ರಮೋದ್ ಮುತಾಲಿಕ್ ಕಡೆಗಣಿಸಲ್ಪಟ್ಟು, ಅವರ ವಿರುದ್ಧವೇ ಹೋರಾಟ ಮಾಡುತ್ತಿದ್ದು, ಇದೀಗ ಮಂಗಳೂರಿನ ಸತ್ಯಜಿತ್ ಸುರತ್ಕಲ್ ಕುಡಾ ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ಅಸಹನೆ ಹೊರಹಾಕಿದ್ದಾರೆ. ಇಂದು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸತ್ಯಜಿತ್ ಸುತ್ಕಲ್, ನಾನು ಸಣ್ಣ ಪ್ರಾಯದಿಂದ ಇಲ್ಲಿಯವರೆಗೂ ಸಂಘಕ್ಕಾಗಿ, ಹಿಂದುತ್ವಕ್ಕಾಗಿ ದುಡಿಯುತ್ತಾ ಬಂದಿದ್ದೇನೆ. ಆದರೆ ಇದೀಗ ನನ್ನ ಮೇಲೆ ಅವ್ಯವಹಾರದ ಆರೋಪ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನಾನು ಯಾರಿಂದಲೂ ಹಣವನ್ನು ಪಡೆದಿಲ್ಲ. ನನ್ನ 11ನೇ ಪ್ರಾಯದಲ್ಲೇ ನಾನು ಆರೆಸ್ಸೆಸ್ ಸೇರಿದ್ದೇನೆ. ಇಲ್ಲಿಯವರೆಗೂ ನನ್ನ ಜೀವನವನ್ನು ಹಿಂದುತ್ವಕ್ಕಾಗಿ ಮುಡಿಪಾಗಿಟ್ಟಿದ್ದೇನೆ. ನನ್ನ ಸ್ವಂತ ಹಣದಿಂದಲೇ ನಾನು ಮನೆ ಕಟ್ಟಿಸಿದ್ದೇನೆ. ನನಗೀಗ 85ಲಕ್ಷ ರೂ. ಸಾಲ ಇದೆ. ಯಾರೊಂದಿಗೂ ಹಣಕ್ಕಾಗಿ ಕೈಚಾಚಲಿಲ್ಲ. ಇದರ ನಡುವೆ ನಾನು ನನ್ನ ತಂದೆ ತಾಯಿಯನ್ನು ಸುಖದಿಂದ ನೋಡಿಕೊಳ್ಲಲು ಸಾಧ್ಯವಾಗಲಿಲ್ಲ. ನನ್ನ ಹೆಂಡತಿ ಮಕ್ಕಳಿಗೆ ನ್ಯಾಯ ಒದಗಿಸಲಾಗಿಲ್ಲ ಎಂದು ಕಣ್ಣೀರು ಹಾಕಿದರು.

ನನಗೆ ಚುನಾವಣೆಯಲ್ಲಿ ಯಾಕೆ ಟಿಕೆಟ್ ನೀಡಿಲ್ಲವೆಂದು ಗೊತ್ತಿಲ್ಲ. ಈಗ ನಾನು ಅವ್ಯವಹಾರ ಮಾಡಿದ್ದೇನೆ, ಹಣ ಮಾಡಿದ್ದೇನೆ ಎಂದೆಲ್ಲಾ ಆರೋಪ ಹೊರಿಸುತ್ತಿದ್ದಾರೆ. ಈ ಕುರಿತಾದಂತೆ ನಾನು ಎಲ್ಲಿಗೆ ಬೇಕಾದರೂ ಬಂದು ಪ್ರಮಾಣ ಮಾಡಲು ಸಿದ್ಧನಿದ್ದೇನೆ. ಸದ್ಯ ಚುನಾವಣೆಯಲ್ಲಿ ನನ್ನದು ತಟಸ್ಥ ನಿಲುವಾಗಿದೆ. ನನ್ನ ನಿರ್ಧಾರದ ಕುರಿತು ನಾನು 20 ತಾರೀಕಿನ ಒಳಗಡೆ ತಿಳಿಸುತ್ತೇನೆ ಎಂದು ಹೇಳಿದ್ದಾರೆ.