Recent Posts

Monday, January 20, 2025
ಕ್ರೈಮ್

ಕೇಸರಿ ಶಾಲು ಧರಿಸಿದ ವಿಚಾರ; ಅಡ್ಯನಡ್ಕ ಗಡಿ ಭಾಗದಲ್ಲಿ ಹಿಂದೂ ಯುವಕನಿಗೆ ಇರಿತ; ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲು -ಕಹಳೆ ನ್ಯೂಸ್

 

ವಿಟ್ಲ: ಅನ್ಯಕೋಮಿನ ತಂಡವೊಂದು ಯುವಕನನ್ನು ಅಡ್ಡಗಟ್ಟಿ ದಾಳಿ ನಡೆಸಿದ ಘಟನೆ ಸೆ.26 ರಂದು ರಾತ್ರಿ ಅಡ್ಯನಡ್ಕದ ಮರಿಕ್ಕಿನಿಯಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಲ್ಲೆಗೊಳಗಾದವರನ್ನು ಗಿರೀಶ್ (33) ಎಂದು ಗುರುತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗಿರೀಶ್ ರವರು ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ದಾರಿ ಮಧ್ಯೆ ಅಡ್ಡಗಟ್ಟಿದ ಅನ್ಯಕೋಮಿನ ತಂಡ ‘ನೀನು ಕೇಸರಿ ಶಾಲು ಹಾಕಿಕೊಂಡು ಬಾರಿ ತಿರುಗಾಟ ನಡೆಸುತ್ತಿಯಾ ಎಂದು ಗದರಿಸಿ ಹಲ್ಲೆ ನಡೆಸಿದ್ದಾರೆ’.

ಹಲ್ಲೆ ನಡೆಸಿದವರ ಪೈಕಿ ಮಹಮ್ಮದ್, ಅಲಿ ಎಂಬಿಬ್ಬರ ಪರಿಚಯವಿದೆ. ಮತ್ತೆ ನಾಲ್ವರನ್ನು ಇನ್ನೊಮ್ಮೆ ನೋಡಿದರೆ ಗುರುತಿಸಬಲ್ಲೆ, ಈ ತಂಡ ನನ್ನನ್ನು ದಾರಿ ಮಧ್ಯೆ ಅಡ್ಡ ಕಟ್ಟಿ ಕೇಸರಿ ಶಾಲು ಹಾಕಿದ್ದಕ್ಕೆ ಬೆದರಿಸಿ, ಕೈಗೆ ಯಾವುದೋ ಉಪಕರಣದಿಂದ ಬಲವಾಗಿ ಚುಚ್ಚಿದ್ದಾರೆ ಇದರಿಂದಾಗಿ ಗಾಯಗೊಂಡಿದ್ದು, ಅಲ್ಲಿಂದ ತಪ್ಪಿಸಿಕೊಂಡು ಹೋಗಿ ತಮ್ಮನಿಗೆ ಕರೆ ಮಾಡಿದೆ ಬಳಿಕ ಅಲ್ಲಿಗೆ ಬಂದ ನನ್ನ ತಮ್ಮ ನನ್ನನ್ನು ಆಸ್ಪತ್ರೆಗೆ ಕರೆ ತಂದ ಎಂದು ಗಿರೀಶ್ ತಿಳಿಸಿದ್ದಾರೆ.

ಹಲ್ಲೆಗೊಳಗಾದ ಗಿರೀಶ್ ರವರು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಯೆ ಪಡೆಯುತ್ತಿದ್ದಾರೆ.