ಕಡಬ ಪೊಲೀಸ್ ಠಾಣೆಯ ಸಿಬ್ಬಂದಿ ಶಿವರಾಜ್‌ನ ಕಾಮಪುರಾಣ; ಯುವತಿಗೆ ಗರ್ಭಧಾನ ಮಾಡಿ ಅಬಾರ್ಷನ್ ಮಾಡಿಸಿದ್ದ ಭೂಪ.. ಕದ್ದು ಮುಚ್ಚಿ ನಡೆಯುತ್ತಿದ್ದ ಪ್ರಕರಣವನ್ನು ಬೆಳಕಿಗೆ ತಂದ ಕಹಳೆ ನ್ಯೂಸ್ ವರದಿಗಾರ- ಕಹಳೆ ನ್ಯೂಸ್
ಕಡಬ: ಕಳೆದ ಕೆಲ ದಿನಗಳ ಹಿಂದೆ ಅಪ್ರಾಪ್ತೆ ಯುವತಿಯನ್ನು ತನ್ನ ಕಾಮದಾಟಕ್ಕೆ ಬಳಸಿಕೊಂಡಿದ್ದ ಕಡಬ ಠಾಣೆಯ ಪೋಲಿಸ್ ಸಿಬ್ಬಂದಿ ಶಿವರಾಜ್ ವಿರುದ್ದ ಕೊನೆಗೂ ದೂರು ದಾಖಲಾಗಿದೆ.
ನ್ಯಾಯಕ್ಕಾಗಿ ಕಡಬ ಠಾಣೆಗೆ ಕುಟುಂಬ ಕಲಹ, ಪತಿಯಿಂದ ಸಮಸ್ಯೆ ಹಾಗೂ ಹಲವಾರು ಸಮಸ್ಯೆಗಳಿಂದ ನ್ಯಾಯ ಅರಸುತ್ತಾ ಬರುವ ಮಹಿಳೆಯರೇ ಈ ಪೊಲೀಸ್ ಸಿಬ್ಬಂದಿ ಶಿವರಾಜ್‌ಗೆ ಟಾರ್ಗೆಟ್ ಎನ್ನಲಾಗಿದೆ. ಇನ್ನು ಕಡಬ ಪೊಲೀಸ್ ಠಾಣೆಯ ಸಿಬ್ಬಂದಿ ಇದೇ ವ್ಯಾಪ್ತಿಯ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ್ದು, ಅವಳು ಗರ್ಭಿಣಿಯಾಗಿದ್ದಾಳೆಂದು ತಿಳಿದ ತಕ್ಷಣ ಪ್ರಕರಣವನ್ನು ಮುಚ್ಚಿ ಹಾಕಲು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಅಬಾರ್ಷನ್ ಮಾಡಿಸಿದ್ದಾನೆ. ಇನ್ನು ಕಡಬ ಠಾಣೆಯ ಅಧಿಕಾರಿ ಪೊಲೀಸ್ ಸಿಬ್ಬಂದಿ ಶಿವರಾಜ್ ವಿಷಯ ತಿಳಿದು ಎಚ್ಚರಿಕೆ ನೀಡಿದ್ದರೂ, ಈತ ತನ್ನ ಚಾಳಿ ಮುಂದುವರಿಸಿದ್ದಾನೆ. ಈತನ ಕಾಮದಾಟದ ಸುದ್ದಿ ಹಬ್ಬಿದ ತಕ್ಷಣ ಪತ್ರಕರ್ತರು ಶಿವರಾಜ್‌ಗೆ ಕರೆ ಮಾಡಿ ವಿಷಯ ತಿಳಿದುಕೊಂಡಿದ್ದಾರೆ. ಇದರಿಂದ ಕಕ್ಕಾಬಿಕ್ಕಿಯಾದ ಸಿಬ್ಬಂದಿ ಶಿವರಾಜ್ ಪತ್ರಕರ್ತರು ವರದಿ ಮಾಡುತ್ತಾರೆ ಎಂದು ಗೊತ್ತಾದ ತಕ್ಷಣ ಕಹಳೆ ವಾಹಿನಿಯ ಪತ್ರಕರ್ತರೊಬ್ಬರಿಗೆ ವರದಿ ಮಾಡದಂತೆ ದುಂಬಾಲು ಹಾಕಿದ್ದ. ಇನ್ನು ಈ ಪ್ರಕರಣಕ್ಕೆ ಸಂಬAಧಿಸಿದ್ದAತೆ ಹಿಂದು ಸಂಘಟನೆಗಳು ಸಂತ್ರಸ್ಥೆ ಯುವತಿಯ ಮನೆಗೆ ತೆರಳಿ ಮನೆಯವರಿಗೆ ದೈರ್ಯ ತುಂಬಿದ್ದಾರೆ. ಬಳಿಕ ಸಂತ್ರಸ್ಥೆ ಯುವತಿಯ ತಂದೆ ಕಡಬ ಪೊಲೀಸ್ ಠಾಣೆಯ ಸಿಬ್ಬಂದಿ ಶಿವರಾಜ್ ವಿರುದ್ಧ ದೂರು ನೀಡಿದ್ದಾರೆ.
ಶಿವರಾಜ್ ತನ್ನ ಕಾಮದಾಟಕ್ಕೆ ಯುವತಿಯನ್ನು ಬಳಸಿಕೊಂಡು ಗರ್ಭಾವತಿಯನ್ನಾಗಿಸಿದ್ದಾನೆ. ಮಗಳು ೫ ತಿಂಗಳ ಗರ್ಭಿಣಿ ಎಂದು ತಿಳಿಯುತ್ತಿದ್ದಂತೆ ಶಿವರಾಜ್‌ನನ್ನು ಸಂಪರ್ಕಿ ನನ್ನ ಮಗಳನ್ನು ಮದುವೆಯಾಗು ಎಂದಿದ್ದಾರೆ. ಇದಕ್ಕೆ ಒಪ್ಪದ ಶಿವರಾಜ್ ನಾನು ಮದುವೆಯಾಗುವುದಿಲ್ಲ, ಗರ್ಭಿಣಿ ಆಗಿದ್ದರೆ ಅದನ್ನು ಅಬಾರ್ಷನ್ ಮಾಡಿಸುತ್ತೇನೆ. ಅದಕ್ಕೆ ತಗಲುವ ಖರ್ಚು ಕೊಡುತ್ತೇನೆ ಎಂದು ಹೇಳಿ ತನ್ನ ಕೃತ್ಯವನ್ನು ಮರೆಮಾಚುವ ಪ್ರಯತ್ನ ಮಾಡಿದ್ದಾನೆ. ಇದಕ್ಕೆ ಒಪ್ಪದ ಯುವತಿಯ ತಂದೆ ನೀನು ಖರ್ಚು ಕೊಡುವುದು ಬೇಡ ಅಬಾರ್ಷನ್ ಮಾಡಿಸುವುದೂ ಬೇಡ ಎಂದು ಹೇಳಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಶಿವರಾಜ್ ಯುವತಿ ಹಾಗೂ ಆಕೆಯ ತಾಯಿಯನ್ನು ಸಂಪರ್ಕಿಸಿ ಅಬಾರ್ಷನ್ ಮಾಡಲು ಸಿದ್ಧತೆ ಮಾಡಿದ್ದಾನೆ. ಸೆ.18ರಂದು ತಾಯಿ ಮಗಳು ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮತ್ತೆ ಮನೆಗೆ ಬಂದಿಲ್ಲ. ವಿಚಾರಿಸುವಾಗ ಅಬಾರ್ಷನ್ ಮಾಡಲಾಗಿದೆ ಎಂದು ತಿಳಿದುಬಂದಿದೆ. 35,000 ಖರ್ಚನ್ನು ಶಿವರಾಜ್ ಪೋಲಿಸ್ ಆನ್ಲೈನ್ ಟ್ರಾನ್ಸರ್ ಮಾಡಿದ್ದಾನೆಂದೂ, ನಾವು ಒಂದು ಕಡೆ ಇದ್ದೇವೆ, ಎಲ್ಲಿ ಅಂತ ಹೇಳುವುದಿಲ್ಲ ಎಂದು ನನ್ನ ಪತ್ನಿ ಹೇಳುತ್ತಿದ್ದಾಳೆ.
ಆದುದರಿಂದ ಅತ್ಯಾಚಾರ ಎಸಗಿರುವ ಶಿವರಾಜ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ಮತ್ತು ನನ್ನ ಮಗಳು ಹಾಗೂ ಪತ್ನಿ ಶಿವರಾಜ್ ಅವನ ಸುಪರ್ಧಿಯಲ್ಲಿ ಮಂಗಳೂರಿನ ಎಲ್ಲಿಯೋ ಅಜ್ಞಾತ ಸ್ಥಳದಲ್ಲಿರುವ ಅವರನ್ನು ಪತ್ತೆ ಹಚ್ಚಬೇಕು, ಇದಕ್ಕೆಲ್ಲ ಪೋಲಿಸ್ ಪ್ರಭಾವ ಬಳಸಿ ನಮ್ಮನ್ನು ಬೆದರಿಸುತ್ತಿರುವ ಶಿವರಾಜ್ ವಿಚಾರಣೆ ನಡೆಸಿದಾಗ ಎಲ್ಲ ವಿಚಾರ ಬಹಿರಂಗವಾಗಲಿದೆ, ಆದುದರಿಂದ ನನ್ನ ಮಗಳಿಗೆ ಆಗಿರುವ ಅನ್ಯಾಯಕ್ಕೆ ಸೂಕ್ತ ನ್ಯಾಯ ಕೊಡಿಸುವಂತೆ ಸಂತ್ರಸ್ಥೆಯ ತಂದೆ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.