Thursday, January 23, 2025
ಪುತ್ತೂರು

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೇರಳದಲ್ಲಿ ಬಂಧಿಸಿದ ಪೊಲೀಸರು – ಕಹಳೆ ನ್ಯೂಸ್

ಪುತ್ತೂರು: 26ವರ್ಷಗಳ ಹಿಂದೆ ಸಾಲ್ಮರದ ನಿವೃತ್ತ ತಹಸೀಲ್ದಾರ್ ಲಿಂಗಪ್ಪ ಗೌಡರ ಮನೆಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬ0ಧಿಸಿ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ. ಕೇರಳದ ಎರ್ನಾಕುಲಂ ನಿವಾಸಿ ಜೊಡ್‌ಸನ್ ಎಂಬ ಆರೋಪಿಯು 1995ರಲ್ಲಿ ಲಿಂಗಪ್ಪ ಗೌಡರ ಮನೆಗೆ ನೀರು ಕೇಳುವ ನೆಪದಲ್ಲಿ ಹೋಗಿ ಲಿಂಗಪ್ಪ ಗೌಡರ ಪತ್ನಿ ಗೀತಾ ಅವರಿಗೆ ಚೂರಿ ತೋರಿಸಿ ಕೈಯಲ್ಲಿದ್ದ ಬಂಗಾರದ ಬಲೆಗಳನ್ನು ದರೋಡೆ ಮಾಡಿದ್ದ. ಪ್ರಕರಣದ ಆರೋಪಿ ಜೊಡ್‌ಸನ್‌ನ್ನು ಕಬಕದಲ್ಲಿ ಅದೇ ದಿನ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಜಾಮೀನು ಪಡೆದ ಬಳಿಕ ಪ್ರಕರಣಕ್ಕೆ ಸಂಬ0ಧಿಸಿ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ಆರೋಪಿ ವಿರುದ್ಧ ನ್ಯಾಯಾಲಯ ವಾರಂಟ್ ಜಾರಿ ಮಾಡಿತ್ತು. ಈ ವಿಚಾರವಾಗಿ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವನೆ, ಡಿವೈಎಸ್ಪಿ ಡಾ. ಗಾನ ಪಿ ಕುಮಾರ್ ಅವರ ಮಾರ್ಗದರ್ಶನದಂತೆ, ಪುತ್ತೂರು ನಗರ ಪೊಲೀಸ್ ಠಾಣೆ ನಿರೀಕ್ಷಕ ಗೋಪಾಲ್ ನಾಯ್ಕ, ಎಸ್.ಐ.ಗಳಾದ ಸುತೇಶ್ ಮತ್ತು ನಸ್ರೀನ್ ತಾಜ್ ಚಟ್ಟರಕಿ ಅವರ ನಿರ್ದೇಶನದಲ್ಲಿ ಎ.ಎಸ್.ಐ ಚಂದ್ರ, ಹೆಡ್‌ಕಾನ್‌ಸ್ಟೆಬಲ್‌ಗಳಾದ ಪರಮೇಶ್ವರ ಮತ್ತು ಜಗದೀಶ್ ಅವರು ಆರೋಪಿಯನ್ನು ಸೆ.೨೭ರಂದು ಕೇರಳದ ಎರ್ನಾಕುಲಂ ವರುಪುರು ಪುತ್ತನ್ ಕೈತಡ್ಕಚಾಲಿ ಎಂಬಲ್ಲಿ ಬಂಧಿಸಿ, ಆರೋಪಿಯನ್ನು ನಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು