Thursday, January 23, 2025
ಸುದ್ದಿ

ತೆಲಂಗಾಣದ ವಾರಂಗಲ್‍ನಲ್ಲಿ ನಡೆದ ಹೆಪ್ಟಾಥ್ಲಾನ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಅಕ್ಷತಾ ಪೂಜಾರಿಗೆ ಸನ್ಮಾನ- ಕಹಳೆ ನ್ಯೂಸ್

ಕಾರ್ಕಳ: ತೆಲಂಗಾಣದ ವಾರಂಗಲ್‍ನಲ್ಲಿ ನಡೆದ ರಾಷ್ಟ್ರೀಯ ಮುಕ್ತ ಚಾಂಪಿಯನ್‍ಶಿಪ್‍ನ ಹೆಪ್ಟಾಥ್ಲಾನ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಕಾರ್ಕಳ ತಾಲೂಕು ಕೆರ್ವಾಶೆಯ ಅಕ್ಷತಾ ಪೂಜಾರಿ ಅವರನ್ನು ಭವ್ಯ ಸ್ವಾಗತದೊಂದಿಗೆ ಕಾರ್ಕಳಕ್ಕೆ ಬರಮಾಡಿಕೊಂಡರು. ಬಳಿಕ ಜೋಡುರಸ್ತೆಯ ಪೂರ್ಣಿಮಾ ಸಿಲ್ಕ್ ವತಿಯಿಂದ ರವಿಪ್ರಕಾಶ್ ಪ್ರಭು ಹಾಗೂ ಕಿರಣ್ ರವಿಪ್ರಕಾಶ್ ಪ್ರಭು ಅವರು ಸನ್ಮಾನಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ವಿಧಾನಪರಿಷತ್ತಿನ ಮಾಜಿ ಸಚೇತಕ, ಬಿಜೆಪಿ ರಾಜ್ಯ ವಕ್ತಾರ ಗಣೇಶ್ ಕಾರ್ಣಿಕ್,ಉದ್ಯಮಿ ಕುಡ್ಪುಲಾಜೆ ಮಹೇಶ್ ಶೆಟ್ಟಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆ, ಯುವರಾಜ್ ಶೆಟ್ಟಿ, ಯೋಗೀಶ್ ಸಾಲ್ಯಾನ್, ಭರತ್ ಶೆಟ್ಟಿ, ರವಿಕುಮಾರ್ ಶೆಟ್ಟಿ, ಚಿರಂಜೀವಿ ವಿಜಯ್, ಅಕ್ಷತಾ ಪೂಜಾರಿಯ ತಂದೆ-ತಾಯಿ ಉಪಸ್ಥಿತರಿದ್ದರು.