Thursday, January 23, 2025
ಪುತ್ತೂರು

ವಿವೇಕಾನಂದ ಕಾಲೇಜಿನ ನೇಚರ್ ಕ್ಲಬ್ ವತಿಯಿಂದ ‘ಸೊಳ್ಳೆಗಳ ಲೋಕ’ ಎಂಬ ವಿಷಯದಲ್ಲಿ ವೆಬಿನಾರ್ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು : ವಿವೇಕಾನಂದ ಕಾಲೇಜಿನ ನೇಚರ್ ಕ್ಲಬ್, ಪ್ರಾಣಿಶಾಸ್ತ್ರ ವಿಭಾಗ, ಸಸ್ಯಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ ಘಟಕದ ಆಶ್ರಯದಲ್ಲಿ ನಡೆದ ‘ಸೊಳ್ಳೆಗಳ ಲೋಕ’ ಎಂಬ ವೆಬಿನಾರ್ ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ, ವಿವೇಕಾನಂದ ಪದವಿ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಈಶ್ವರ ಪ್ರಸಾದ್ ಹಲವರ ಮನಸ್ಸಿನಲ್ಲಿ ಸೊಳ್ಳೆಗಳು ಶೂನ್ಯೋಪಯೋಗಿ ಜೀವಿಗಳು ಎಂಬ ಅನಿಸಿಕೆಯಿದೆ. ಆದರೆ ಅವು ಪ್ರಕೃತಿ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದು ಗಮನಾರ್ಹ ವಿಷಯ ಎಂದು ಹೇಳಿದರು.

ಸೊಳ್ಳೆಗಳ ಕುರಿತು ಸಂಶೋಧನೆಯನ್ನು ಹೇಗೆ ಮಾಡಬಹುದು ಎಂಬ ಕುರಿತಾಗಿ ಮಾಹಿತಿ ನೀಡಿದ ಅವರು, ಅವುಗಳ ಪ್ರಭೇದಗಳನ್ನು ಗುರುತಿಸುವ ಪರಿಯನ್ನು ತಿಳಿಸಿದರು. ಈ ಕೀಟಗಳು ಇತರ ಅನೇಕ ಪ್ರಾಣಿಗಳಿಗೆ ಪ್ರಮುಖ ಆಹಾರ ಮೂಲವಾಗಿರುವುದರಿಂದ ಹಾಗೂ ಮಕರಂದವನ್ನು ಹೀರುವ ಪ್ರಕ್ರಿಯೆಯಲ್ಲಿ ಸಸ್ಯಗಳನ್ನು ಪರಾಗಸ್ಪರ್ಶ ಮಾಡುವುದರಿಂದ ಇವು ಪರಿಸರ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿ ಇಡುತ್ತವೆ ಎಂದು ತಿಳಿಸಿದರು. ಐಕ್ಯೂಎಸಿ ಸಂಯೋಜಕರಾದ ಪ್ರೊ. ಶಿವಪ್ರಸಾದ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಕಾಲೇಜಿನ ಪ್ರಥಮ ಬಿ.ಝಡ್.ಸಿ. ವಿದ್ಯಾರ್ಥಿ ಸ್ವಾತಿ ಸ್ವಾಗತಿಸಿ ಹಾಗೂ ಅನುಷಾ ಪಿ. ವಂದಿಸಿದರು. ದ್ವಿತೀಯ ಬಿ.ಝಡ್.ಸಿ. ವಿದ್ಯಾರ್ಥಿನಿ ನಿಶಿತಾ ಪ್ರಕಾಶ್ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿ, ಶ್ರೀಲಹರಿ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು