ಬೆಳ್ತಂಗಡಿ: ಆಟೋ ಇಮ್ಯೂನ್ ಎನ್ಸ್ ಫಾಲಿಟಿಸ್ ಎಂಬ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ವಿಶಿಕಾಳ ಚಿಕಿತ್ಸೆಗೆ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನದ ಬಳಿಯ ಆಟೋ ರಿಕ್ಷಾ ಚಾಲಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಸಂಗ್ರಹಿಸಿದ 15,100 ರೂಪಾಯಿ ಧನ ಸಹಾಯವನ್ನು ಕಡಂಬಿಲ್ತಯಿ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ಹಸ್ತಾಂತರಿಸಿದರು.
ಬೆಳ್ತಂಗಡಿ ತಾಲೂಕಿನ ಕಲಿಯ ಗ್ರಾಮದ ಬಿಳಿಬೈಲು ನಿವಾಸಿ ನವೀನ್ ರಮ್ಯ ದಂಪತಿಗಳ ಪುತ್ರಿ ವಿಶಿಕಾಳಿಗೆ ಆಟೋ ಇಮ್ಯೂನ್ ಎನ್ಸ್ ಫಾಲಿಟಿಸ್ ಎಂಬ ದೇಹದ ರೋಗನಿರೋಧಕ ವ್ಯವಸ್ಥೆಯ ಹಾಗೂ ಮೆದುಳಿನ ಮೇಲೆ ದಾಳಿ ಮಾಡಿ ಉರಿಯೂತಕ್ಕೆ ಕಾರಣವಾಗುವ ಆರೋಗ್ಯ ಸಮಸ್ಯೆ ಯಾಗಿದ್ದು ಇದರ ಚಿಕಿತ್ಸೆ 2 ವರ್ಷ ಕಾಲ 15 ದಿನಗಳಿಗೊಮ್ಮೆ ಮಾಡಬೇಕಾಗಿ ವೈದರು ತಿಳಿಸಿದ್ದಾರೆ. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ದಂಪತಿ ಮಗುವಿನ ಚಿಕಿತ್ಸೆಗೆ ತುಂಬಾ ಹಣದ ಅಗತ್ಯವಿರುವುದರಿಂದ ಸಾಮಾಜಿಕ ಜಾಲ ತಾಣಗಳಲ್ಲಿ ಬೇಡಿಕೆ ಇಟ್ಟಿದ್ದರು. ಇದನ್ನು ಮನಗಂಡ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನದ ಬಳಿ ಆಟೋ ರಿಕ್ಷಾ ಚಾಲಕರಾದ ರವಿ ಕೇರ್ಯ, ರಾಜೇಶ್ ಉಳಿ, ರಂಜಿತ್ ಉಡ್ಕುಂಜ ಮತ್ತು ಸಾಮಾಜಿಕ ಕಾರ್ಯಕರ್ತರಾದ ಶ್ರೀನಿವಾಸ್ ಜಾರಿಗೆ ಕೊಟ್ರಸ್ ಇವರು ಕಕ್ಯಪದವು ಜಂಕ್ಷನ್ ನಲ್ಲಿ ಬಾಕ್ಸ್ ಹಿಡಿದು 15,100 ರೂಪಾಯಿ ಸಂಗ್ರಹಿಸಿದ್ದರು. ಇನ್ನು ವಿಶಿಕಾಳ ಚಿಕಿತ್ಸೆಗಾಗಿ ಸಂಗ್ರಹಿಸಿದ ಹಣವನ್ನು ಕಡಂಬಿಲ್ತಯಿ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಪಂಚದುರ್ಗಾ ಜನರಲ್ ಸ್ಟೋರ್‍ನ ಮಾಲಕರಾದ ಚಂದ್ರಶೇಖರ ಕಬರ್ಂಡ್ಕ, ಜನಾರ್ದನ ಪುಳ್ಳೇರಿ, ಯೋಗೀಶ್ ಕರ್ಲ, ಧರ್ಣಪ್ಪ ಉಡ್ಕುಂಜ, ಸುಂದರ ಅಂಚನ್ ರಾಮನಗರ ಇವರು ಉಪಸ್ಥಿತರಿದ್ದರು.