Sunday, November 24, 2024
ಸುದ್ದಿ

ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ನಡೆದ ತಿಂಗಳ ಕಾರ್ಯನಿರ್ವಹಣಾ ತಂಡದ ಸಭೆ – ಕಹಳೆ ನ್ಯೂಸ್

ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲದ ತಿಂಗಳ ಕಾರ್ಯನಿರ್ವಹಣಾ ತಂಡದ ಸಭೆಯು ಡೊಂಗರಕೇರಿಯ ಸುಧೀಂದ್ರ ಸಭಾಭವನದಲ್ಲಿ ದಕ್ಷಿಣ ಮಂಡಲ ಅಧ್ಯಕ್ಷರಾದ ಶ್ರೀ ವಿಜಯ ಕುಮಾರ್ ಶೆಟ್ಟಿ ಯವರ ಅದ್ಯಕ್ಷತೆಯಲ್ಲಿ ಹಾಗೂ ಮಂಗಳೂರು ನಗರ ದಕ್ಷಿಣ ಶಾಸಕರಾದ ಶ್ರೀ ಡಿ ವೇದವ್ಯಾಸ ಕಾಮತ್ ರವರ ಉಪಸ್ಥಿತಿಯಲ್ಲಿ ಜರುಗಿತು. ಉಧ್ಘಾಟನಾ ಭಾಷಣದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರಿ ಮೋನಪ್ಪ ಭಂಡಾರಿ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಿಧ ಜನಪರ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಇದರ ಪ್ರಯೋಜನವನ್ನು ಎಲ್ಲ ನಾಗರಿಕರಿಗೆ ತಲುಪುವಂತಾಗಬೇಕು ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದೇ ವೇಳೆಯಲ್ಲಿ ಇತ್ತೀಚಿಗೆ ನಿಧನ ಹೊಂದಿದ ಪಕ್ಷದ ಪ್ರಮುಖರಾದ ಶ್ರಿ ವಿಠ್ಠಲ್ ಕುಡ್ವ ಅವರಿಗೆ ನುಡಿ ನಮನ ಸಲ್ಲಿಸಲಾಯಿತು . ಸಂಘಟನಾತ್ಮಕ ಅವಧಿಯನ್ನು ತೆಗೆದ ದಕ್ಷಿಣ ಮಂಡಲದ ಉಸ್ತುವಾರಿ ಶ್ರೀಮತಿ ಕಸ್ತೂರಿ ಪಂಜ ಅವರು ಪಕ್ಷದ ಸಂಘಟನೆ ಹಾಗೂ ಮುಂದಿನ ಕಾರ್ಯ ಯೋಜನೆ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು. ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರೂಪ ಡಿ ಬಂಗೇರ ವಿವಿಧ ಮೋರ್ಚಾಗಳು ಮಂಡಿಸಿದ ವರದಿಗಳನ್ನು ಪಡೆದುಕೊಂಡರು. ಉಪಸ್ಥಿತರೆಲ್ಲರೂ ದೇಶದ ಅಖಂಡತೆ , ಪರಿಸರ ಸಂರಕ್ಷಣೆ ಬಗ್ಗೆ ಪ್ರತಿಜ್ಞೆ ವಿಧಿ ಸ್ವೀಕರಿಸಿದರು .ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಡಿದ ಮಂಡಲ ಅಧ್ಯಕ್ಷರಾದ ಶ್ರೀ ವಿಜಯ ಕುಮಾರ್ ಶೆಟ್ಟಿ ಅವರು ಮಂಡಲದಲ್ಲಿ ನಡೆದ ಪಕ್ಷದ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾ ಮತದಾರರ ಸೇರ್ಪಡೆ ಹಾಗೂ ಸೇವಾ ಮತ್ತು ಸಮರ್ಪಣಾ ಅಭಿಯಾನದಲ್ಲಿ ಕಾರ್ಯಕರ್ತರು ಮಾಡಿದಂತಹ ಕೆಲಸವನ್ನು ಶ್ಲಾಘಿಸಿ ಮುಂದೆಯೂ ಇದೆ ರೀತಿಯಲ್ಲಿ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು .ವೇದಿಕೆಯಲ್ಲಿ ಮೈಸೂರು ಎಲೆಕ್ಟ್ರಿಕಲ್ಸ್ ಕಂಪನಿ ಅಧ್ಯಕ್ಷರಾದ ಶ್ರೀ ಸಂತೋμï ಕುಮಾರ್ ಬೋಳಿಯಾರ್, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆ ಸಹ ಪ್ರಭಾರಿ ಶ್ರೀ ರಾಜೇಶ ಕಾವೇರಿ, ಮೀನುಗಾರಿಕಾ ನಿಗಮದ ಅಧ್ಯಕ್ಷರಾದ ನಿತಿನ್ ಕುಮಾರ್, ಮಂಗಳೂರು ನಗರ ದಕ್ಷಿಣ ಮಂಡಲ ಉಪಾಧ್ಯಕ್ಷರಾದ ರಮೇಶ್ ಕಂಡೆಟ್ಟು, ಶ್ರೀಮತಿ ಮೀರಾ ಕರ್ಕೇರ , ಅಜಯ್ ಕುಲಶೇಕರ್ , ಕಿರಣ್ ರೈ , ಮಂಡಲದ ಪದಾಧಿಕಾರಿಗಳು , ಮಹಾಶಕ್ತಿ ಕೇಂದ್ರದ ಪದಾಧಿಕಾರಿಗಳು ವಿವಿಧ ಮೋರ್ಚಾಗಳ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು, ಪ್ರಕೋಷ್ಠದ ಸಂಚಾಲಕರು, ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಮಂಡಲ ಉಪಾಧ್ಯಕ್ಷರಾದ ಶ್ರಿ ದೀಪಕ್ ಪೈ ಅವರು ಸ್ವಾಗಿತಿಸಿ, ಮಂಡಲ ಪ್ರದಾನ ಕಾರ್ಯದರ್ಶಿ ಶ್ರೀ ಸುರೇಂದ್ರ ಜೇ ಕಾರ್ಯಕ್ರಮ ನಿರೂಪಣೆ ಮಾಡಿದರು. ಮಂಡಲ ಉಪಾಧ್ಯಕ್ಷರಾದ ಶ್ರೀ ರಮೇಶ್ ಹೆಗ್ಡೆ ಧನ್ಯವಾದ ಸಮರ್ಪಿಸಿದರು.