Recent Posts

Tuesday, January 21, 2025
ಸುದ್ದಿ

ಉಪ್ಪಿನಂಗಡಿ: ಅಪರಿಚಿತರಿಂದ ಬಾಲಕನ ಅಪಹರಣಕ್ಕೆ ಯತ್ನ – ಕಹಳೆ ನ್ಯೂಸ್

ಉಪ್ಪಿನಂಗಡಿ : ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ 14 ವರ್ಷದ ಬಾಲಕನನ್ನು ಹಿಡಿದೆಳೆದು ಅಪಹರಣಕ್ಕೆ ಯತ್ನಿಸಿದ ಘಟನೆ ಉಪ್ಪಿನಂಗಡಿ ಬಳಿಯ ಮಠ ಹಿರ್ತಡ್ಕ ಎಂಬಲ್ಲಿ ನಡೆದಿದೆ.

ಹಿರ್ತಡ್ಕದ ಜನತಾ ಕಾಲನಿ ನಿವಾಸಿ ಅಬ್ದುರ್ರಹ್ಮಾನ್ ಅವರ ಪುತ್ರ, ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 9ನೇ ತರಗತಿ ವಿದ್ಯಾರ್ಥಿ ತಾಜ್ ಸಿಫಾನ್ (14) ಎಂದು ಗುರುತಿಸಲಾಗಿದ್ದು, ತಾಜ್ ಸಿಫಾನ್ ಮಂಗಳವಾರ ಸಂಜೆ ಬೀಡಿ ಕೊಡಲೆಂದು ಹಿರ್ತಡ್ಕದಲ್ಲಿರುವ ಬೀಡಿ ಬ್ರಾಂಚ್‍ಗೆ ಹೋಗುತ್ತಿದ್ದ ಸಂದರ್ಭ ಉಪ್ಪಿನಂಗಡಿ ಕಡೆಯಿಂದ ನೆಲ್ಯಾಡಿ ಕಡೆಗೆ ತೆರಳುತ್ತಿದ್ದ ಓಮ್ನಿ ಕಾರಿನಲ್ಲಿ ಬಂದ ಅಪರಿಚಿತನೋರ್ವ ಬಾಲಕನ ಅಂಗಿಯ ಕಾಲರ್ ಹಿಡಿದೆಳೆದಿದ್ದಾನೆ. ಈ ಸಂದರ್ಭ ಬಾಲಕ ಅಲ್ಲಿಂದ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಅಂಗಿಯ ಗುಂಡಿಗಳೆಲ್ಲಾ ಕಿತ್ತು ಬಂದು ಅಂಗಿ ಕಳಚಿದೆ.
ಅಲ್ಲಿಂದ ಓಡಿ ತಪ್ಪಿಸಿಕೊಂಡ ಬಾಲಕ ಅಲ್ಲೇ ಸಮೀಪದಲ್ಲಿದ್ದ ತನ್ನ ಚಿಕ್ಕಮ್ಮನ ಮನೆಗೆ ಹೋಗಿದ್ದಾನೆ. ಘಟನೆಯಿಂದ ಗಾಬರಿಗೊಂಡ ಬಾಲಕನಿಗೆ ಕಾರಿನಲ್ಲಿ ಎಷ್ಟು ಮಂದಿ ಇದ್ದರು ಎನ್ನುವ ಬಗ್ಗೆ ಗಮನಕ್ಕೆ ಬಂದಿಲ್ಲ. ಅಲ್ಲದೆ ಕಾರು ಕೂಡಾ ಅಲ್ಲಿಂದ ಪರಾರಿಯಾಗಿದ್ದು, ಘಟನೆಯ ಬಗ್ಗೆ ಬಾಲಕನ ತಂದೆ ಉಪ್ಪಿನಂಗಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೆಲ ದಿನಗಳ ಹಿಂದೆ ಲಕ್ಷ್ಮೀ ನಗರದಲ್ಲಿಯೂ ಇದೇ ರೀತಿ ಮಾರುತಿ ಓಮ್ನಿ ಕಾರಿನಲ್ಲಿ ಬಂದ ಅಪರಿಚಿತರು ಬಾಲಕನೋರ್ವನನ್ನು ಅಪಹರಿಸಲು ವಿಫಲ ಯತ್ನ ನಡೆಸಿರುವ ಘಟನೆ ನಡೆದಿದ್ದು, ಇದೀಗ ಮತ್ತೆ ಬಾಲಕರನ್ನು ಅಪಹರಿಸಲು ಯತ್ನಿಸುತ್ತಿರುವುದು ಪರಿಸರದಲ್ಲಿ ಆತಂಕ ಸೃಷ್ಟಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು