Sunday, January 19, 2025
ರಾಜಕೀಯ

ಸಂಜೀವ ಮಠಂದೂರು ರೋಡ್ ಶೋ ; ಕಾರ್ಯಕರ್ತರಲ್ಲಿ ರಣೋತ್ಸಾಹ ತುಂಬಿದ ಉತ್ತರ ಪ್ರದೇಶದ ಬೆಂಕಿಚೆಂಡು ಡಾ.ಮಹೇಂದ್ರ ಸಿಂಘ್ – ಕಹಳೆ ನ್ಯೂಸ್

ಪುತ್ತೂರು : ಬಿಜೆಪಿ ಅಭ್ಯರ್ಥಿ ಸಂಜೀವ ಮಠಂದೂರುರವರ ರೋಡ್ ಶೋ ಪುತ್ತೂರಿನಲ್ಲಿ ಮೇ 9 ರಂದು ಭರ್ಜರಿಯಾಗಿ ನಡೆಯಿತು.
ಸಂಜೆ 4 ಘಂಟೆಗೆ ಬೊಳುವಾರು ಆಂಜನೇಯ ಮಂತ್ರಾಲಯದ ಬಳಿಯಿಂದ ಈ ರೋಡ್ ಶೋಗೆ ಚಾಲನೆ ನೀಡಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರ ಎದುರಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಉತ್ತರ ಪ್ರದೇಶದ ಗ್ರಾಮೀಣಾಭಿವೃದ್ಧಿ ಸಚಿವ, ಬೆಂಕಿಚೆಂಡು ಎಂದೇ ಖ್ಯಾತರಾದ ಅದ್ಭುತ ವಾಗ್ಮಿ ಡಾ. ಮಹೇಂದ್ರ ಸಿಂಘ್ ತಮ್ಮ ಕಂಚಿನ ಕಂಠದಲ್ಲಿ ಪುತ್ತೂರಿನಲ್ಲಿ ಕೇಸರಿ ಅಲೆಯೆಬ್ಬಿಸಿದರು.


ಭಾರತಮಾತೆಗೆ ಜಯಘೋಷಗೈಯ್ಯುತ್ತಾ ಮಾತು ಆರಂಭಿಸಿದ ಅವರು ಬಳಿಕ ಪುಂಖಾನುಪುಂಖವಾಗಿ ಕಾಂಗ್ರೆಸ್ ಮೇಲೆ ಟೀಕಾಪ್ರಹಾರಗೈದರು.
“ಪುತ್ತೂರಿನ ವೀರ ಪುತ್ರರೇ.. ಪುತ್ತೂರನ್ನೇ ಕೇಸರಿಮಯವಾಗಿಸಿದ್ದೀರಿ.. ಎಲ್ಲಾ ಕಡೆ ಬಿಜೆಪಿ ಅಲೆಯಿದೆ.. ನಾಲ್ಕೂ ದಿಕ್ಕುಗಳಲ್ಲೂ ಬಿಜೆಪಿ ಆವರಿಸುತ್ತಿದೆ.. ಕಾಂಗ್ರೆಸ್ ಮನೆಗೆ ಹೋಗುತ್ತಿದೆ.. ನರೇಂದ್ರ ಮೋದಿಯವರ ಕನಸಿನಂತೆ ನಾವು ಒಂದೊಂದೇ ರಾಜ್ಯವನ್ನು ಕಾಂಗ್ರೆಸ್ ಮುಕ್ತಗೊಳಿಸುತ್ತಿದ್ದೇವೆ.ಈಗ ಕರ್ನಾಟಕದ ಸರದಿ..ಪುತ್ತೂರಿನ ಸರದಿ. ನೀವೆಲ್ಲರೂ ಈ ಬಾರಿ ಕಾಂಗ್ರೆಸ್ ಮುಕ್ತ ಪುತ್ತೂರಿಗೆ ಸಂಕಲ್ಪಿಸಿದ್ದೀರಿ. ಈ ದೇಶಕ್ಕಾಗಿ ಝಾನ್ಸಿರಾಣಿ ಲಕ್ಷ್ಮೀದೇವಿ, ಅಬ್ಬಕ್ಕ,ತಾಂತ್ಯಾ ಮುಂತಾದ ಅನೇಕ ವೀರರು ಬಲಿದಾನಗೈದಿದ್ದಾರೆ, ಅನೇಕ ಸಂಗ್ರಾಮಗಳು ನಡೆದಿವೆ.. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯವೂ ಲಭಿಸಿತು ಕೂಡಾ..ಆದರೆ ದುರದೃಷ್ಟವಶಾತ್ ನೆಹರೂ ನಮ್ಮ ಪ್ರಧಾನಿಯಾದರು. ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ನಿಜವಾದ ಸಮರ ಸೇನಾನಿಗಳು ಮರೆಯಲ್ಲೇ ಉಳಿದರು. ಕಾಂಗ್ರೆಸ್ ಮತ್ತು ನೆಹರೂ ಕಾರಣದಿಂದಾಗಿ ನಾವು ಸ್ವಾತಂತ್ರ್ಯಾನಂತರ ನಮ್ಮ ದೇಶದ ಹಲವು ಕಡೆ ನಮ್ಮದೇ ಭೂಮಿಯನ್ನು ಚೈನಾ-ಪಾಕಿಸ್ತಾನಕ್ಕೆ ಬಿಟ್ಟುಕೊಡಬೇಕಾಯಿತು. ಕಾಂಗ್ರೆಸ್ಸಿನ ಕಾರಣದಿಂದ ನಾವು ಜಗತ್ತಿನೆದುರು ಬಲಹೀನರಾಗಿ ಬಿಂಬಿಸಲ್ಪಟ್ಟೆವು. ಆದರೆ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸರಕಾರ 2014ರಲ್ಲಿ ಅಧಿಕಾರೆ ಬಂದೊಡನೆ ಚಿತ್ರಣ ಬದಲಾಯಿತು. ಚೈನಾ ತಕರಾರು ಎತ್ತಿದ ಜಾಗಗಳಲ್ಲಿ ರಾಜತಾಂತ್ರಿಕ ಜಾಣ್ಮೆಯಿಂದ ಚೈನಾವನ್ನು ಹಿಮ್ಮೆಟ್ಟಿಸಲಾಯಿತು. ಕಾಂಗ್ರೆಸ್ ಸರಕಾರವಿದ್ದಾಗ ಪಾಕ್ ಪ್ರೇರಿತ ಉಗ್ರಗಾಮಿಗಳು ಗಡಿಯಿಂದ ನುಸುಳಿ ಬಂದು ದಾಳಿ ಮಾಡಿ ವಾಪಸ್ಸಾಗುತ್ತಿದ್ದರು, ನಾವೇನೂ ಮಾಡಲಾಗುತ್ತಿರಲಿಲ್ಲ.. ಆದರೆ ಮೋದಿಜೀಯ ಬಿಜೆಪಿ ಸರಕಾರ ಪಾಕಿಸ್ಥಾನದೊಳಗೇ ಸರ್ಜಿಕಲ್ ಸ್ಟ್ರೈಕ್ ಮಾಡಿ ಅಂತಹ ತಾಖತ್ತು ಇರುವ ಜಗತ್ತಿನ ಮೂರನೇ ರಾಷ್ಟ್ರವೆನಿಸಿಕೊಂಡಿತು. ಜಗತ್ತಿಗೆ ಭಾರತದ ಶಕ್ತಿ ಅನಾವರಣಗೊಂಡಿತು. ಈಗ ಉಗ್ರಗಾಮಿಗಳನ್ನು ಎಲ್ಲೆಂದರಲ್ಲಿ ಹೊಡೆದುರುಳಿಸಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಗೂಗಲ್ ನಲ್ಲಿ ಕೇಳಿ ನೋಡಿ ಭಾರತದ ಬಡವರಿಗೆ ಬ್ಯಾಂಕ್ ಖಾತೆ ಮಾಡಿ ಕೊಟ್ಟದ್ಯಾರು ಅಂತ.. ಅದು ಹೇಳುತ್ತೆ ನರೇಂದ್ರ ಮೋದಿ ಅಂತ.. 3 ಕೋಟಿ ಜನಗಳಿಗೆ ಗ್ಯಾಸ್ ಸಂಪರ್ಕ ಕೊಟ್ಟಿದ್ಯಾರೆಂದು ಕೇಳಿ.. ಅದು ಹೇಳುತ್ತೆ ನರೇಂದ್ರ ಮೋದಿ ಅಂತ.. ಮುದ್ರಾಬ್ಯಾಂಕ್ ತಂದಿದ್ಯಾರೆಂದು ಕೇಳಿ..ನರೇಂದ್ರ ಮೋದಿಯೆನ್ನುತ್ತೆ.. ವಿಶ್ವಾದಾದ್ಯಂತ ವಂದೇಮಾತರಮ್ ಮೊಳಗುವಂತೆ ಮಾಡಿದ್ಯಾರೆಂದು ಕೇಳಿ.. ಅದು ಹೇಳುತ್ತೆ ನರೇಂದ್ರ ಮೋದಿ ಅಂತ. ಹಾಗೆಯೇ ಕೇಳಿ ಜಗತ್ತಿನ ಅತೀ ಭ್ರಷ್ಟ ಪಕ್ಷ ಯಾವುದು ಅಂತ.. ಅದು ಹೇಳುತ್ತೆ ‘ಕಾಂಗ್ರೆಸ್’ ಅಂತ.. ಕಾಂಗ್ರೆಸ್ ಸರಕಾರ ಬಂದ ನಂತರ ನಮ್ಮ ಅನೇಕ ಕಾರ್ಯಕರ್ತರುಗಳ ಹತ್ಯೆಯಾಗಿವೆ.. ಅವುಗಳೆಲ್ಲಕ್ಕೂ ನಾವು ನ್ಯಾಯ ಒದಗಿಸಬೇಕಾಗಿದೆ.. ಭಾಜಪಾ ಅದಕ್ಕೆ ಕಟಿಬದ್ಧವಾಗಿದೆ. ನಾವು ಪ್ರತೀ ಭಯೋತ್ಪಾದಕನಿಗೂ ಅವನದೇ ಭಾಷೆಯಲ್ಲಿ ಉತ್ತರಿಸುತ್ತೇವೆ. ಹಾಗಾಗಿ ನರೇಂದ್ರ ಮೋದಿಯವರ ಕಾಂಗ್ರೆಸ್ ಮುಕ್ತ ಭಾರತಕ್ಕಾಗಿ ನೀವು ಪುತ್ತೂರಿನಲ್ಲಿ ಸಂಜೀವಣ್ಣನನ್ನು ಗೆಲ್ಲಿಸಬೇಕಾಗಿದೆ. ಕಾಂಗ್ರೆಸ್ ಮುಕ್ತ ಪುತ್ತೂರಿಗಾಗಿ ಸಂಜೀವಣ್ಣನನ್ನು ಗೆಲ್ಲಿಸಬೇಕಾಗಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕ ಸಾಕಾರಕ್ಕಾಗಿ ಸಂಜೀವಣ್ಣನಿಗೇ ಎಲ್ಲರೂ ಮತ ನೀಡಿ..” ಹೀಗೆ ತಮ್ಮ ಖಡಕ್ ಮತ್ತು ಸಿಡಿಲಿನಂಥ ಮಾತುಗಳಿಂದ ಕಾರ್ಯಕರ್ತರಲ್ಲಿ ಮಿಂಚಿನ ಸಂಚಾರಗೈಯ್ಯುವಂತೆ ಮಾಡಿದ ಮಹೇಂದ್ರ ಸಿಂಘ್ ಪುತ್ತೂರಿನಲ್ಲಿ ಕೇಸರಿ ಅಲೆ ಭೋರ್ಗರೆಯುವಂತೆ ಘರ್ಜಿಸಿದರು.
ಆ ಬಳಿಕ ಬೊಳುವಾರಿನಿಂದ ಹೊರಟ ಮೆರವಣಿಗೆ ದರ್ಬೆಯಲ್ಲಿ ಸಮಾಪನಗೊಂಡಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಮೆರವಣಿಗೆಯುದ್ದಕ್ಕೂ ಜನರು ತಮ್ಮ ನೆಚ್ಚಿನ ನಾಯಕರುಗಳಿಗೆ ಜಯಕಾರಗೈದರು. ಯುವಕರು ಭಾರತ್ ಮಾತಾ ಕೀ ಜೈ.. ನರೇಂದ್ರ ಮೋದಿ ಕೀ ಜೈ ಎನ್ನುತ್ತಾ ಪುತ್ತೂರಿನಲ್ಲಿ ಬಿಜೆಪಿ ಅಲೆಯೇಳುವಂತೆ ಮಾಡಿದರು. ಒಟ್ಟಿನಲ್ಲಿ ಈ ರೋಡ್ ಶೋ ಸಂಜೀವ ಮಠಂದೂರುರವರ ಜಯವನ್ನು ಖಾತ್ರಿಪಡಿಸುವಂತೆ ಪುತ್ತೂರಿನ ರ…