Wednesday, January 22, 2025
ಪುತ್ತೂರು

ಪುತ್ತೂರು ಬಸ್ ನಿಲ್ದಾಣದಲ್ಲಿ ಕಾಲೇಜು ವಿದ್ಯಾರ್ಥಿನಿಗೆ ಮೈಮುಟ್ಟಿ ಕಿರುಕುಳ ನೀಡಿದ ಓರ್ವನ ಬಂಧನ – ಕಹಳೆ ನ್ಯೂಸ್

ಪುತ್ತೂರು : ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಯುವಕನೊಬ್ಬ ಕಾಲೇಜು ವಿದ್ಯಾರ್ಥಿನಿಯ ಮೈಮುಟ್ಟಿ ಕಿರುಕುಳ ನೀಡಿದ ಆರೋಪವೊಂದು ಸೆ.29 ರಂದು ಕೇಳಿಬಂದಿದೆ.

ಪುತ್ತೂರಿನ ಪ್ರತಿಷ್ಠಿತ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದ ಸಂದರ್ಭ ಅಲ್ಲಿಗೆ ಬಂದ ಯುವಕ ಆಕೆಯ ಮೈಮುಟ್ಟಿ ಕಿರುಕುಳ ನೀಡಿದ್ದಾನೆಂದು ಯುವತಿ ಆರೋಪಿಸಿದ್ದಾಳೆ

ಜಾಹೀರಾತು
ಜಾಹೀರಾತು
ಜಾಹೀರಾತು

ಬಸ್ ನಿಲ್ದಾಣದಲ್ಲಿ ಕಣ್ಣೀರಿಡುತ್ತಾ ಕೂತಿದ್ದಾಗ ಇತರ ವಿದ್ಯಾರ್ಥಿಗಳು ಆಕೆಯಲ್ಲಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಕಿರುಕುಳ ನೀಡಿದ ಯುವಕನ ಪೋಟೋವನ್ನು ತನ್ನ ಇನ್ಸಾಂಗ್ರಾಮ್ ನಿಂದ ತೆಗೆದು ಸಹಪಾಠಿಗಳಿಗೆ ತೋರಿಸಿದ್ದು, ವಿದ್ಯಾರ್ಥಿಗಳು ಪೋಟೋದ ಆಧಾರದಲ್ಲಿ ಕಿರುಕುಳ ನೀಡಿದ ಯುವಕನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಯುವಕನನ್ನು ಮಹಿಳಾ ಠಾಣೆಗೆ ಹಸ್ತಾಂತರಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು