Wednesday, January 22, 2025
ಪುತ್ತೂರು

ಪುತ್ತೂರು: ಅನ್ಯ ಧರ್ಮೀಯ ಯುವಕನಿಂದ ಹಿಂದು ಯುವತಿಯ ಅಪಹರಣ: ಕಪಾಟಿನೊಳಗೆ ಬಚ್ಚಿಟ್ಟಿದ್ದ ಯುವತಿ ಜಾಲ್ಲೂರಿನಲ್ಲಿ ಪತ್ತೆ..!- ಕಹಳೆ ನ್ಯೂಸ್

ಪುತ್ತೂರು : ಕಲ್ಮಡ್ಕದ 16 ವರ್ಷದ ದಲಿತ ಬಾಲಕಿಯನ್ನು ಕೊಳ್ತಿಗೆ ಗ್ರಾಮದ ಕುಂಟಿಕಾನದ ಅಬೂಬ್ಬಕರ್ ಸಿದ್ದಿಕ್ (24 ) ಎಂಬಾತ ಅಪಹರಿಸಿ ಮನೆಯಲ್ಲಿ ಕೂಡಿಟ್ಟ ಘಟನೆ ಪುತ್ತೂರು ತಾಲೂಕಿನ ಕೊಳ್ತಿಗೆ ಕುಂಟಿಕಾನ ಎಂಬಲ್ಲಿ ನಡೆದಿದೆ.

ಬೆಳ್ಳಾರೆ ಅಸುಪಾಸಿನಲ್ಲಿ ಸಮೋಸ ಮಾರಾಟ ಮಾಡುವ ಸಿದ್ದಿಕ್ ಎಂಬಾತ ಹಿಂದೂ ಬಾಲಕಿಯೊಬ್ಬಳನ್ನು ಅಪಹರಿಸಿ ಮನೆಯಲ್ಲಿ ಇರಿಸಿಕೊಂಡಿದ್ದಾನೆಂಬ ಮಾಹಿತಿಯರಿತ ಸ್ಥಳೀಯರು ಬುಧವಾರ ಸಂಜೆ ಆತನ ಮನೆಯ ಮುಂದೆ ಜಮಾಯಿಸಿದ್ದಾರೆ. ಮನೆಯವರು ಬಾಗಿಲಿಗೆ ಚಿಲಕ ಹಾಕಿ ಒಳಗಡೆ ಕೂತ್ತಿದ್ದ ಸಿದ್ಧಿಕ್ ಜನರ ಒತ್ತಾಯದ ಬಳಿಕವೂ ಬಾಗಿಲು ತೆರೆದಿರಲಿಲ್ಲ. ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾದಾಗ ತಕ್ಷಣ ಘಟನಾ ಸ್ಥಳಕ್ಕೆ ಬೆಳ್ಳಾರೆ ಠಾಣೆ ಪೊಲೀಸರು ಬಂದಿದ್ದು, ಯುವಕನ ಮನೆಯವರು ಆಗಲೂ ಬಾಗಿಲು ತೆರೆದಿಲ್ಲ. ಇನ್ನಷ್ಟು ಅನುಮಾನಗೊಂಡ ಪೊಲೀಸರು ಕೆಲ ಹೊತ್ತು ಮನೆ ಎದುರು ಕಾದರು. ಬಳಿಕ ಬಲವಂತ ಮಾಡಿ ಮನೆಯವರಿಂದ ಮನೆ ಬಾಗಿಲು ತೆಗೆಸಿದ್ದಾರೆ. ಮನೆಯೊಳಗೆ ಹೋಗಿ ಹುಡುಕಾಡಿದಾಗ ಯುವತಿ ಮನೆಯೊಳಗೆ ಇರಲಿಲ್ಲ. ಈ ವೇಳೆ ಅಲ್ಲಿ ಸೇರಿದ್ದ ಜನರು ಯುವತಿಯನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ಆರೋಪಿಸಿದರು. ಗೊಂದಲ ತಪ್ಪಿಸುವ ನಿಟ್ಟಿನಲ್ಲಿ ಪೊಲೀಸರು ಜನರನ್ನು ಅಲ್ಲಿಂದ ಚದುರಿಸಿ, ಯುವಕ ಸಿದ್ಧೀಕ್ನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಫೋನ್ ಮೂಲಕ ಪರಿಚಯವಾದ ಯುವತಿಯನ್ನು ಆಕೆಯ ಮನೆಯಿಂದ ಕಾರಿನಲ್ಲಿ ಮನೆಗೆ ಕರೆದುಕೊಂಡು ಬಂದಿದ್ದೆ. ಯಾರಿಗಾದರೂ ತಿಳಿದರೆ ಸಮಸ್ಯೆಯಾಗಬಹುದೆಂದು ಆಕೆಯನ್ನು ಪುತ್ತೂರಿಗೆ ಬಿಟ್ಟು ಬಂದಿದ್ದೇನೆ. ಒಂದು ವರ್ಷದಿಂದ ಪರಿಚಯವಿದ್ದು, ವಿವಾಹ ಮಾಡಿಕೊಳ್ಳುವಂತೆ ತಿಳಿಸಿದ್ದಾಳೆ ಎಂದು ಸಿದ್ದಿಕ್ ವಿಚಾರಣೆ ವೇಳೆ ಪೊಲೀಸರ ಮುಂದೆ ತಿಳಿಸಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈತ ನೀಡಿದ ಮಾಹಿತಿಯ ಮೇರೆಗೆ ಬೆಳ್ಳಾರೆ ಪೊಲೀಸರು ಬಾಲಕಿಗಾಗಿ ಹುಡುಕಾಟ ನಡೆಸಿದ್ದು, ಜಾಲ್ಸೂರಿನಲ್ಲಿ ಪತ್ತೆಯಾಗಿದ್ದಾಳೆ. ಈ ವೇಳೆ ನಾನು ಗೊಡ್ರೇಜ್‍ನ ಒಳಗಡೆ ಬಚ್ಚಿಟ್ಟುಕೊಂಡ ಹಿನ್ನಲೆಯಲ್ಲಿ ಉಸಿರುಗಟ್ಟಿದಂತಾಗಿ ಸಂಕಟ ಪಟ್ಟಿದಾಗಿಯೂ ಬಾಲಕಿ ತಿಳಿಸಿದ್ದಾಳೆ.

ಜಾಲ್ಸೂರಿನಲ್ಲಿ ಸಿದ್ದಿಕ್ ತನ್ನ ಸ್ನೇಹಿತರ ಸಹಾಯದಿಂದ ಬಾಲಕಿಯನ್ನು ಬಿಟ್ಟು ಬಂದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಗೆ ಸಂಬಂಧಪಟ್ಟಂತೆ ಬಾಲಕಿಯ ಪೋಷಕರು ಆದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ.