Wednesday, January 22, 2025
ಸುದ್ದಿ

ತೆಂಕ ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ ಶಾಸಕ ಡಾ.ವೈ ಭರತ್ ಶೆಟ್ಟಿ – ಕಹಳೆ ನ್ಯೂಸ್

ಮಂಗಳೂರು : ತೆಂಕ ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಜೆಪಿಯ ಹಿರಿಯ ಕಾರ್ಯಕರ್ತರಾದ ಹೂವಯ್ಯ ಬಂಗೇರರವರ ಮನೆ ಹತ್ತಿರದಿಂದ ಆರೆಸ್ಸೆಸ್ ನ ಹಿರಿಯ ಸ್ವಯಂ ಸೇವಕರಾದ ಮಡಪಾಡಿ ರಘುರಾಮ ಗೌಡ ರವರ ಮನೆ ಹತ್ತಿರ ಹಾದು ಹೋಗುವ ರಸ್ತೆ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಇತರೆ ರಸ್ತೆಗಳ ಯೋಜನೆಯಡಿ ಬಿಡುಗಡೆಗೊಂಡ 20 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಗುದ್ದಲಿಪೂಜೆ ನೆರವೇರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ನಿಕಟಪೂರ್ವ ಸದಸ್ಯರಾದ ಜನಾರ್ಧನ ಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಕುಮಾರ್ ದೇವಾಡಿಗ, ಮಹಾಶಕ್ತಿ ಕೇಂದ್ರ ಅಧ್ಯಕ್ಷ ಪ್ರಸಾದ್ ಎಡಪದವು, ಶಕ್ತಿಕೇಂದ್ರ ಪ್ರಮುಖರಾದ ಕುಶಾಲ್ ಕುಮಾರ್, ರಾಮಚಂದ್ರ ಪೂಜಾರಿ , ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ಪ್ರೇಮಾ, ಪಂಚಾಯತ್ ಸದಸ್ಯರಾದ ಗಣೇಶ್ ಕುಮಾರ್, ಜ್ಯೋತಿ, ವಿಜಯ ,ಗಂಗಾಧರ ಪೂಜಾರಿ, ಕವಿತಾ, ಅನುಸೂಯ, ಗೀತಾ ನಾಯಕ್, ಪುಷ್ಪಾವತಿ,  ಹಿರಿಯ ಕಾರ್ಯಕರ್ತರಾದ ಹೂವಯ್ಯ ಬಂಗೇರ, ನಾರಾಯಣ ಗೌಡ, ರಘುರಾಮ ಗೌಡ, ನೋಣಯ ಗೌಡ, ಶ್ರೀಮತಿ ಗುಲಾಬಿ, ಶ್ರೀಮತಿಬೇಬಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.