Wednesday, January 22, 2025
ಸುದ್ದಿ

ಉಪ್ಪಿನಂಗಡಿ : ತಪ್ಪಾಗಿ ನೀರಿನ ಬದಲು ಪೆಟ್ರೋಲ್ ಕುಡಿದು ಮಹಿಳೆ ಸಾವು- ಕಹಳೆ ನ್ಯೂಸ್

ಉಪ್ಪಿನಂಗಡಿ : ದೃಷ್ಟಿ ದೋಷವಿರುವ ಮಹಿಳೆಯೊಬ್ಬರು ತಪ್ಪಾಗಿ ನೀರಿನ ಬದಲು ಪೆಟ್ರೋಲ್ ಕುಡಿದು ಅಸ್ವಸ್ಥಗೊಂಡು ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಬಂಟ್ವಾಳ ತಾಲೂಕಿನ ಪೆರ್ನೆಯ ಸಂಪದಕೋಡಿ ಎಂಬಲ್ಲಿ ನಡೆದಿದೆ.
ಬಂಟ್ವಾಳ ನಿವಾಸಿ ಪದ್ಮಾವತಿ (79)ಎಂಬವರು ಪೆರ್ನೆಯ ಸಂಪದ ಕೋಡಿಯಲ್ಲಿರುವ ತನ್ನ ಮಗಳ ಮನೆಗೆ ಬಂದಿದ್ದಾಗ ಘಟನೆ ನಡೆದಿದ್ದು, ಹುಲ್ಲು ಕತ್ತರಿಸುವ ಯಂತ್ರದ ಬಳಕೆಯ ಉದ್ದೇಶದಿಂದ ಮನೆಯಲ್ಲಿ ಬಾಟಲಿಯಲ್ಲಿ ತಂದಿರಿಸಿದ ಪೆಟ್ರೋಲನ್ನು ತಿಳಿಯದೇ ಸೆ.26 ರಂದು ಕುಡಿದಿದ್ದು, ಅಸ್ವಸ್ಥರಾದ ಅವರನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸೆ.29 ರಂದು ಮೃತಪಟ್ಟಿದ್ದಾರೆ. ಮೃತರ ಅಳಿಯ ಉಮಾನಾಥ್ ನೀಡಿದ ದೂರಿನಂತೆ ಈ ಬಗ್ಗೆ ಉಪ್ಪಿನಂಗಡಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು