Thursday, January 23, 2025
ಪುತ್ತೂರು

ಗಾಂಧಿ ವಿಚಾರ ವೇದಿಕೆ ಪುತ್ತೂರು ತಾಲೂಕು ಘಟಕದ ವತಿಯಿಂದ ವಿಶೇಷವಾಗಿ ಗಾಂಧಿ ಜಯಂತಿ ಆಚರಿಸಲು ನಿರ್ಧಾರ – ಕಹಳೆ ನ್ಯೂಸ್

ಪುತ್ತೂರು: ಅಕ್ಟೊಬರ್ 2ರಂದು ನಡೆಯುವ ಗಾಂಧಿ ಜಯಂತಿಯನ್ನು ಪುತ್ತೂರಿನ ಬಿರುಮಲೆ ಬೆಟ್ಟದ ಮೇಲಿರುವ ಗಾಂಧಿ ಮಂಟಪ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛ ಮಾಡುವ ಮೂಲಕ ಗಾಂಧಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಗಾಂಧಿ ವಿಚಾರ ವೇದಿಕೆ ಮುಂದಾಗಿದೆ. ಬಳಿಕ ಶಾಸಕರ ವಿಶೇಷ ಮುತುವರ್ಜಿಯಿಂದ ಇದೀಗ ಬಿರುಮಲೆ ಬೆಟ್ಟಕ್ಕೆ ಸ್ಥಳಾಂತರಗೊಂಡಿರುವ ಪ್ರಜ್ಞಾ ಆಶ್ರಮವಾಸಿಗಳ (ಡೌನ್ ಸಿಂಡ್ರೋಮ್) ಜೊತೆ ಲಘು ಉಪಾಹಾರ ಸೇವನೆಯನ್ನು ಕೂಡಾ ಹಮ್ಮಿಕೊಳ್ಳಲಾಗಿದೆ.

ಉಪಾಹಾರದ ಬಳಿಕ ಬಿರುಮಲೆ ಅಭಿವೃದ್ಧಿ ಸಮಿತಿ ಸಹಯೋಗದಲ್ಲಿ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಲಾಗುತ್ತದೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಪುತ್ತೂರು ಘಟಕದ ಅಧ್ಯಕ್ಷ ಝೆವಿಯರ್ ಡಿಸೋಜ ಅವರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು