Thursday, January 23, 2025
ಸುದ್ದಿ

ದೇವಂದಬೆಟ್ಟು ಬ್ರಹ್ಮಕಲಶಕ್ಕೆ ಪೂರ್ವ ಸಿದ್ಧತೆ: ಜೀರ್ಣೋದ್ಧಾರ ಕಾಮಗಾರಿಗಳಿಗೆ ಶೀಘ್ರದಲ್ಲೇ ಚಾಲನೆ- ಕಹಳೆ ನ್ಯೂಸ್

ದೇವಂದಬೆಟ್ಟು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಪ್ರಯುಕ್ತ ಪ್ರಮುಖರ ಸಭೆ ದೇವಳದ ರಾಜಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರದ ಕಾಮಗಾರಿ ಮತ್ತು ಅಂದಾಜು ವೆಚ್ಚವನ್ನು ಪ್ರಕಟಿಸಲಾಯಿತು. ಈಗಾಗಲೇ ದೇಣಿಗೆ ನೀಡಿರುವವರ ಬಗ್ಗೆ ಮಾಹಿತಿ ನೀಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ಸಭೆಯಲ್ಲಿ ಗೋಶಾಲೆ ನಿರ್ಮಾಣ, ರಥದ ಕೊಠಡಿ ಸ್ಥಳಾಂತರ, ದೇವಳದ ಎದುರು ಕೆಳಭಾಗದಲ್ಲಿ ಕೈಕಾಲು ತೊಳೆಯುವ ವ್ಯವಸ್ಥೆ, ತುಳಸಿಕಟ್ಟೆ, ಮಹಾಬಲಿಪೀಠ, ಒಳಾಂಗಣ ನೆಲಹಾಸು ಗ್ರಾನೈಟ್ ಅಳವಡಿಕೆ, ಆವರಣ ಗೋಡೆ, ಅಶ್ವತ್ಥಕಟ್ಟೆ, ಉಗ್ರಾಣ ಕೊಠಡಿ, ದೇವಳದ ಹೊರಭಾಗದಲ್ಲಿ ಕಾರ್ಯಾಲಯ, ಶೌಚಾಲಯ, ಚಪ್ಪರದ ದುರಸ್ತಿ ಕಾರ್ಯ ಇನ್ನಿತರ ಜೀರ್ಣೋದ್ಧಾರ ಕಾಮಗಾರಿ ನಡೆಯಲಿದೆ. ಬ್ರಹ್ಮಕಲಶೋತ್ಸವ ಪ್ರಯುಕ್ತ ವಿಜಯದಶಮಿಯಂದು ಬ್ರಹ್ಮಕಲಶ ಕಾರ್ಯಾಲಯ ಉದ್ಘಾಟನೆ ಹಾಗೂ ಮನವಿ ಪತ್ರ ಬಿಡುಗಡೆ ನಡೆಯಲಿದೆ. ವಿವಿಧ ಭಾಗಗಳಲ್ಲಿ ಕಾರ್ನರ್ ಮೀಟಿಂಗ್ ಆಯೋಜಿಸಿ ಮಾಹಿತಿ ನೀಡುವುದು. ಕರಸೇವೆ ಮೂಲಕ ದೇವಸ್ಥಾನದ ಕೆಲ ಕೆಲಸಗಳನ್ನು ನಡೆಸುವುದು. ಫೆ.೧೫ರಿಂದ ೨೦ರ ವರೆಗೆ ಬ್ರಹ್ಮಕಲಶ ೨೦ರಂದು ಮಧ್ಯಾಹ್ನ ಧ್ವಜಾರೋಹಣಗೊಂಡು ಫೆಬ್ರವರಿ ೨೪ರ ವರೆಗೆ ವರ್ಷಾವಧಿ ಉತ್ಸವ ನಡೆಸುವುದು. ಫೆಬ್ರವರಿ ೧೩ರಂದು ಭಾನುವಾರ ಸಂಜೆ ಹೊರೆಕಾಣಿಕೆ ಸಮರ್ಪಣೆ ಹಾಗೂ ಫೆಬ್ರವರಿ ೧೪ರಂದು ನೀಲೇಶ್ವರ ಶ್ರೀ ಪದ್ಮನಾಭ ತಂತ್ರಿವರ್ಯರ ಆಗಮನದ ಕುರಿತು ಮಾಹಿತಿ ನೀಡಲಾಯಿತು.

ಸಭೆಯ ಬಳಿಕ ವಿವಿಧ ಕಾಮಗಾರಿ ನಡೆಯಲಿರುವ ಸ್ಥಳ ಪರಿಶೀಲನೆ, ವೇದಿಕೆ, ಪಾರ್ಕಿಂಗ್, ಭೋಜನಶಾಲೆ ಸ್ಥಳವನ್ನು ನಿಗದಿಪಡಿಸಲಾಯಿತು.
ಕಾರ್ಯಕ್ರಮದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ್ ಉಪಾಧ್ಯಾಯ, ಬ್ರಹ್ಮಕಲಶ ಸಮಿತಿ ಗೌರವಾಧ್ಯಕ್ಷ ಎಂ.ನವೀನ್ ಚಂದ್ರ ಶೆಟ್ಟಿ, ಅಧ್ಯಕ್ಷರಾದ ಸದಾನಂದ ಶೆಟ್ಟಿ ರಂಗೋಲಿ, ಸಂಚಾಲಕ ತಾರನಾಥ ಕೊಟ್ಟಾರಿ, ಪ್ರಧಾನ ಕಾರ್ಯದರ್ಶಿ ಗಣೇಶ್ ಸುವರ್ಣ ತುಂಬೆ, ಕೋಶಾಧಿಕಾರಿ ಕವಿರಾಜ್ ಚಂದ್ರಿಗೆ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದಾಮೋದರ ನೆತ್ತರಕೆರೆ, ಪುರುಷೋತ್ತಮ ಕೊಟ್ಟಾರಿ ಮಾಡಂಗೆ, ಎಂ. ಸತೀಶ್ ಶೆಟ್ಟಿ, ಕೇಶವ ದೈಪಲ, ಅರ್ಚಕರಾದ ರಾಧಾಕೃಷ್ಣ ಕಡಂಬಳಿತ್ತಾಯ, ಶಿವರಾಮ ಶಿಬರಾಯ, ಪ್ರಮುಖರಾದ ಜ್ಯೋತೀಂದ್ರ ಶೆಟ್ಟಿ ಮುಂಡಾಜೆಗುತ್ತು, ಚರಣ್ ಕುಮಾರ್ ಜುಮಾದಿಗುಡ್ಡೆ, ಭುವನೇಶ್ ಪಚ್ಚಿನಡ್ಕ, ದಿವಾಕರ ಶೆಟ್ಟಿ ಕುಪ್ಪಿಲ, ಸೋಮಪ್ಪ ಕೋಟ್ಯಾನ್, ಅನಿಲ್ ಪಂಡಿತ್, ವೇದನಾಥ್ ಶೆಟ್ಟಿ, ಅರುಣ್ ಆರ್. ಶೆಟ್ಟಿ, ಪೂವಪ್ಪ ಸಪಲ್ಯ ದರಿಬಾಗಿಲು, ಸತೀಶ್ ಮಾಡಂಗೆ, ದೇವಿಪ್ರಸಾದ್ ಎಂ ದೇವಂದಬೆಟ್ಟು, ಯೋಗೀಶ್ ಕಜೆಕಂಡ ತುಂಬೆ, ಉಮೇಶ್ ಗಾಂದೋಡಿ, ಪ್ರಶಾಂತ್ ಕುಲಾಲ್ ಕನಪಾಡಿ, ಪ್ರತಿಭಾ ಪಿ. ಶೆಟ್ಟಿ, ಶಶಿಪ್ರಭಾ ಗುತ್ತುಹಿತ್ತಿಲು, ಉಮಾ ಲಿಂಗಪ್ಪ, ರೇಣುಕಾ ಪಂಬದಬೆಟ್ಟು, ವಾಣಿ ಕೇಶವ ದೈಪಲ ಮತ್ತಿತರರು ಉಪಸ್ಥಿತರಿದ್ದರು.