Thursday, January 23, 2025
ಸುದ್ದಿ

ಅನ್ಯಕೋಮಿನ ಯುವಕನ ಮನೆಯಲ್ಲಿ ಹಿಂದೂ ಯುವತಿ ಪತ್ತೆ ಪ್ರಕರಣ, ಬಶಿರಡ್ಕ ಬಸ್ ನಿಲ್ದಾಣದಲ್ಲಿ ಆತ್ಮಹತ್ಯೆ ಯತ್ನಿಸಿದ ಯುವತಿ…!? – ಕಹಳೆ ನ್ಯೂಸ್

ಪುತ್ತೂರು: ಬೆಳ್ಳಾರೆ ಅಸುಪಾಸಿನಲ್ಲಿ ಸಮೋಸ ಮಾರಾಟ ಮಾಡುವ ಸಿದ್ದಿಕ್ ಎಂಬಾತ ಹಿಂದೂ ಬಾಲಕಿಯೊಬ್ಬಳನ್ನು ಅಪಹರಿಸಿ ಮನೆಯಲ್ಲಿ ಇರಿಸಿಕೊಂಡಿದ್ದಾನೆ0ಬ ಮಾಹಿತಿಯರಿಸಿ, ಸ್ಥಳೀಯರು ಬುಧವಾರ ಸಂಜೆ ಆತನ ಮನೆಯ ಮುಂದೆ ಜಮಾಯಿಸಿದ ಘಟನೆ ನಡೆದಿತ್ತು. ಘಟನೆಗೆ ಸಂಬ0ಧಿಸಿದ0ತೆ ಆಕೆಯನ್ನು ಕಾಸರಗೋಡಿನ ಪ್ರಥಮ ದರ್ಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,18 ವರ್ಷ ದಾಟಿರುವ ಕಾರಣ ಅವಳ ಇಷ್ಟದಂತೆ ವ್ಯವಹರಿಸಲು ನ್ಯಾಯಾಲಯ ಆಕೆಗೆ ಸೂಚಿಸಿದೆ. ಯುವತಿ ಸಿದ್ದಿಕ್ ಜೊತೆ ತೆರಳಲು ಯಾವುದೇ ಅಭ್ಯಂತರವಿಲ್ಲ ಎಂದು ನ್ಯಾಯಲಯದಲ್ಲಿ ಹೇಳಿಕೆ ನೀಡಿ, ಬಳಿಕ ಬಶಿರಡ್ಕ ಬಸ್ ನಿಲ್ದಾಣದಲ್ಲಿ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಯಾವುದೇ ಪ್ರಾಣಪಾಯವಿಲ್ಲವೆಂದು ವೈದ್ಯರು ತಿಳಿಸಿದ್ದಾರೆ. ಆಸ್ಪತ್ರೆಗೆ ಸಂಪ್ಯ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು