ನಾನಿಂದು ಮುಂಜಾನೆ ಹೊಸಂಗಡಿಯ ಕಡೆಗೆ ಪಯಣ ಬೆಳೆಸಿದ್ದೆ ! ಮುಂಜಾನೆ ಆದ ಕಾರಣ ಕೆಲಸಕ್ಕೆ ಹೋಗುವವರ, ಹಾಲಿನ ಡಿಪ್ಪೋ ಕಡೆ ಹೋಗುವವರ ಕಾರುಬಾರು ರಸ್ತೆ ಇಕ್ಕೆಲಗಳಲು ಇತ್ತು !! ನನ್ನ ಪಯಣ ಮುಂದುವರಿಯುತ್ತಾ ಗರ್ಡಾಡಿ ಸಮೀಪಿಸುವಾಗ ಹಾಲಿನ ಕ್ಯಾನನ್ನು ಸೈಕಲಿಗೆ ಸಿಕ್ಕಿಸಿಕೊಂಡು, ಸೈಕಲೇರಿ ನಿಧಾನವಾಗಿ ಏದುಸಿರು ಬಿಡುತ್ತಾ ಸಾಗುತ್ತಿದ್ದ ಓರ್ವ ವ್ರದ್ಧನನ್ನು ಕಂಡೆ ವ್ರದ್ಧನೆಂದರೆ ವ್ರದ್ಧನಲ್ಲ, ವಯಸ್ಸು ಅರವತ್ತಾದರೂ ಮನಸು ಮಾತ್ರ ಮೂವತ್ತು ಎಂಬಂತಿದ್ದ ಯುವಕ !! ಅವರ ಬಳಿ ಹತ್ತಿರವಾಗುತ್ತಿದ್ದಂತೆ ತಿಳಿದು ಹೋಯಿತು ಅವರು ಬೇರಾರು ಅಲ್ಲ, ನಮ್ಮ ತಾಲೂಕಿನ ಜನಸೇವಕ ಭಾಜಪಾ ಅಭ್ಯರ್ಥಿ ಹರೀಶ್ ಪೂಂಜಾ’ರ ತಂದೆ ಮುತ್ತಣ್ಣ ಪೂಂಜ. !!!
ತನ್ನ ಮಗ ಒಂದು ತಾಲೂಕಿನ ಭವಿಷ್ಯದ ಶಾಸಕ ! ಇದಾವುದರ ಜಂಭವಿಲ್ಲದೆ ಪ್ರತೀ ದಿನ ಗೋವಿನ ಆರೈಕೆ ಮಾಡುತಾ ಹಾಲನ್ನು ಡಿಪ್ಪೊ’ಗೆ ಸಾಗಿಸಿ ನಂತರ ಕ್ರಷಿ ಚಟುವಟಿಕೆಯಲಿ ತೊಡಗಿಸಿಕೊಂಡು ದಿನದೂಡುವ ಪ್ರಾಮಾಣಿಕ ವ್ಯಕ್ತಿ ಕರ್ಮಯೋಗಿ ಶ್ರೀ ಮುತ್ತಣ್ಣ ಪೂಂಜ’ರ ಆದರ್ಶಗಳನೆ ಮೈಗೂಡಿಸಿಕೊಂಡು ಬರುತಿರುವ ನಮ್ಮ ನೆಚ್ಚಿನ ಜನಮೆಚ್ಚಿದ ನಾಯಕ ಹರೀಶ್ ಪೂಂಜಹ’ರೇ ಮುಂದಿನ ಶಾಸಕರಾಗಲಿ ಎಂಬುದೇ ನಮ್ಮ ಒಡಲೊಳಗಿನ ಆಸೆ…
ಅಂದು ಹೇಗೆ ಕ್ರಷಿ ಚಟುವಟಿಕೆ ಸಾಗುತಿತ್ತೋ ಇಂದೂ ಕೂಡಾ ಸರಾಗವಾಗಿ ಸಾಗುತಿದೆ ಹರೀಶಣ್ಣ’ನ ಮನೆಯಲಿ ! ಇಂತಹ ಕ್ರಷಿ ಕುಟುಂಬದ ಸಾಮಾನ್ಯ ವ್ಯಕ್ತಿ ಮಾತ್ರ ತಾಲೂಕಿನ ಬಡ ಜನರ ಕಷ್ಟ ಕಾರ್ಪಣ್ಯಗಳನು ಅರಿಯಲು ಸಾಧ್ಯ !
ಹೀಗಿರುವಾಗ ಚಿಂತಿಸದೇ ಮತ ನೀಡಬಹುದು ಹರೀಶ್ ಪೂಂಜ’ರಿಗೆ…