Thursday, January 23, 2025
ಪುತ್ತೂರು

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ನೀಲ್ ಮಸ್ಕರೇನ್ಹಸ್ ಗೆ ಬಿ. ಆರ್ಕಿಟೆಕ್ಚರ್ ವಿಭಾಗದಲ್ಲಿ 214ನೇ ರ್ಯಾಂಕ್- ಕಹಳೆ ನ್ಯೂಸ್

ಪುತ್ತೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇತ್ತೀಚ್ಛೆಗೆ ಬಿಡುಗಡೆಗೊಳಿಸಿದ ಸಿಇಟಿ ಫಲಿತಾಂಶದಲ್ಲಿ ಬಿ.ಆರ್ಕಿಟೆಕ್ಚರ್ ಇಂಜಿನಿಯರಿಂಗ್ ವಿಭಾಗದಲ್ಲಿ ನಾಟಾ ಫಲಿತಾಂಶದ ಆಧಾರದ ಮೇಲೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ನೀಲ್ ಮಸ್ಕರೇನ್ಹಸ್ ಗೆ 214ನೇ ರ್ಯಾಂಕ್ ಲಭಿಸಿದೆ. ಉತ್ತಮ ಕ್ರೀಡಾಪಟುವೂ ಆಗಿರುವ ಇವರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ, ಹಲವಾರು ಪದಕಗಳನ್ನು ಗಳಿಸಿರುತ್ತಾರೆ. ಇವರು ಸಂತ ಫಿಲೋಮಿನಾ ಕಾಲೇಜಿನ ಇತಿಹಾಸ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿರುವ ಡಾ. ನೋರ್ಬರ್ಟ್ ಮಸ್ಕರೇನ್ಹಸ್ ಮತ್ತು ಮುಕ್ರುಂಪಾಡಿ ಸರಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿರುವ ಪ್ರಮೀಳಾ ಜೆಸ್ಸಿ ಕ್ರಾಸ್ತ ದಂಪತಿಗಳ ಪುತ್ರರಾಗಿರುತ್ತಾರೆ. ವಿದ್ಯಾರ್ಥಿಯ ಈ ಸಾಧನೆಗೆ ಮೆಚ್ಚುಗೆ ವ್ಯಕ್ತ ಪಡಿಸಿ, ಕಾಲೇಜಿನ ಸಂಚಾಲಕರು, ಪ್ರಾಂಶುಪಾಲರು, ಆಡಳಿತ ಮಂಡಳಿ, ಉಪನ್ಯಾಸಕ ಮತ್ತು ಆಡಳಿತ ಸಿಬ್ಬಂದಿ ಅಭಿನಂದಿಸಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು