Thursday, January 23, 2025
ಪುತ್ತೂರು

ಪುತ್ತೂರು: ಗುಡಿಸಲಿನಲ್ಲಿ ದಿನ ಕಳೆಯುತ್ತಿದ್ದ ವಿದ್ಯಾರ್ಥಿನಿಗೆ ಹೊಸ ಮನೆ ಭಾಗ್ಯ- ಕಹಳೆ ನ್ಯೂಸ್

ಪುತ್ತೂರು: ಕಡು ಬಡತನದಿಂದಾಗಿ ಗುಡಿಸಲಿನಲ್ಲಿ ದಿನ ಕಳೆಯುತ್ತಿದ್ದ ಇರ್ದೆ ಬೆಟ್ಟಂಪಾಡಿಯ ನಿವಾಸಿ ಉಪ್ಪಳಿಗೆ ಸರಕಾರಿ ಪ್ರೌಢಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿನಿ ಕುಮಾರಿ ಮೋಕ್ಷಿತ ಕುಟುಂಬಕ್ಕೆ ಹೊಸ ಮನೆ ಭಾಗ್ಯ.

ಕಳೆದ ಸ್ವಾತಂತ್ರ್ಯ ದಿನಾಚರಣೆಯಂದು ಶಿಕ್ಷಾಣಾಧಿಕಾರಿಯವರ ಈ ಕಾರ್ಯಕ್ಕೆ ಹತ್ತಾರು ದಾನಿಗಳ ನೆರವಿನಿಂದ ಶಂಕುಸ್ಫಾಪನೆಗೊಂಡ ಹೊಸ ಮನೆ ಗಾಂಧಿ ಜಯಂತಿಯಂದು ಪೂರ್ಣಗೊಂಡು ಗೃಹಪ್ರವೇಶಕ್ಕೆ ಅಣಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೋಕ್ಷಿತಳ ಪೋಷಕರಿಗೆ ಮನೆಯನ್ನು ಪುತ್ತೂರಿನ ಶಾಸಕರಾದ ಸಂಜೀವ ಮಠಂದೂರು ಅವರ ಹಿರಿತನದಲ್ಲಿ ಶಿಕ್ಷಣ ಇಲಾಖೆಯ ಬಿಇಓ ಹಾಗೂ ಅಧಿಕಾರಿಗಳ ಸಹಕಾರದೊಂದಿಗೆ ಸರಕಾರಿ ಶಾಲೆಯ ಮುಖ್ಯಗುರುಗಳು ಮತ್ತು ಸಿಬ್ಬಂದಿ ವರ್ಗದ ಮುತುವರ್ಜಿಯೊಂದಿಗೆ ಮನೆ ಹಸ್ತಾಂತರಿಸುವ ಕಾರ್ಯಕ್ರಮ ನೆರವೇರಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು