Friday, September 20, 2024
ರಾಜಕೀಯ

Exclusive : ಪೂಂಜ, ಮಠಂದೂರು, ಅಂಗಾರಗೆ ಭಾರಿ ಬೆಂಬಲ ; ರಮಾನಾಥ ರೈ, ಜೈನ್, ಕಾದರ್, ಬಾವ ಸೋಲಿಸಲು ಮತದಾರರ ಹಂಬಲ – ಕಹಳೆ ನ್ಯೂಸ್

ದಕ್ಷಿಣ ಕನ್ನಡ : ಜಿಲ್ಲೆಯಾದ್ಯಂತ ಚುನಾವಣಾ ಕಣ ರಂಗೇರಿದ್ದು ನಿನ್ನೆ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ. ಈ ಹಿನ್ನಲೆಯಲ್ಲಿ ಇಂದು ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತಯಾಚನೆಯಲ್ಲಿ ತೊಡಗಿದ್ದಾರೆ.

ಕೊನೆಯ ಕ್ಷಣದ ಸಮೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುತೇಕ ಏಳು ಕ್ಷೇತ್ರದಲ್ಲಿ ಬಿಜೆಪಿ, ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ / ಪಕ್ಷೇತರ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದ್ದು, ನಾಳೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ನ ಅಭ್ಯರ್ಥಿ ವಸಂತ ಬಂಗೇರ ಎದುರು ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಗೆದ್ದರೆ, ಪುತ್ತೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಕುಂತಲಾ ಶೆಟ್ಟಿಯವರನ್ನು ಬಿಜೆಪಿಯ ಸಂಜೀವ ಮಠಂದೂರು ಸೋಲಿಸುವುದು ಖಚಿತವಾಗಿದೆ.

ಜಾಹೀರಾತು

Vasantha Bangrera

 

ಇನ್ನು ಸುಳ್ಯದಲ್ಲಿ ಬಿಜೆಪಿ ಜಯಭೇರಿ ಭಾರಿಸಲಿದೆ, ಮೂಡಬಿದ್ರೆಯಲ್ಲಿ ಹಣಾ ಹಣಿ ಏರ್ಪಟ್ಟರು, ಅಭಯಚಂದ್ರ ಚೈನ್ ಗೆ ಉಮಾನಾಥ ಕೋಟಿಯಾನ್ ಸೋಲಿನ ರುಚಿಯನ್ನು ಉಳಿಸಲು ಸನ್ನಧರಾಗಿದ್ದಾರೆ.

ತೀವ್ರ ಪ್ರತಿಷ್ಠೆಯ ಕಣ ಬಂಟ್ವಾಳದಲ್ಲಿ ಈ ಭಾರಿ ಕಮಲ ಅರಳುವುದು ಖಚಿತವಾಗಿದೆ.
ಬಿಜೆಪಿಯ ಪ್ರಬಲ ಅಭ್ಯರ್ಥಿ , ಡಾ. ಕಲ್ಲಡ್ಕ ಭಟ್ ಪರಮ ಶಿಶ್ಯ ರಾಜೇಶ್ ನಾಯಕ್, ಕಾಂಗ್ರೆಸ್ ನ ಸಚಿವ ರಮಾನಾಥ ರೈನ್ನು ಕಡ್ಡಾಗೆ ಕೆಡವುದು ಶಥಸಿದ್ದವಾಗಿದೆ.

ಇನ್ನು ಮಂಗಳೂರು ಉತ್ತರ ಮತ್ತು ಉಳ್ಳಾಲದಲ್ಲಿ ಸರಳ ಬಹುಮತದಿಂದ ಬಿಜೆಪಿ ಗೆಲ್ಲುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ, ಆದರೆ, ಮಂಗಳೂರು ದಕ್ಷಿಣದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಾಟ್ಟಿದ್ದು, ಬಿಜೆಪಿಯ ವೇದವ್ಯಾಸ್ ಕಾಮತ್ ಭಾರಿ ಅಂತರದಿಂದ ಸೋಲುವುದು ಬಹುತೇಕ ಖಚಿತವಾಗಿದೆ.

ಒಟ್ಟಾರೆ ಇದು ಈ ಕೊನೆಯ ಕ್ಷಣದ ಸಮೀಕ್ಷೆಯಾದರೆ, ಮತದಾರ ಏನು ನಿರ್ಣಯ ಕೈಗೊಳ್ಳುತ್ತಾನೆ, ಯಾರ ಯಾರ ಹಣೆಬರಹ ಏನು ಎಂದು 15 ರಂದು ಅಧಿಕೃತವಾಗಿ ಗೊತ್ತಾಗಲಿದೆ.